
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಯುವ ಜನ ಸಬಲೀಕರಣ ಕ್ರೀಡಾ ವಸತಿ ನಿಲಯಕ್ಕೆ ಭೇಟಿ
ಹಾವೇರಿ: ಹಾವೇರಿ ಜಿಲ್ಲೆಯ ಪ್ರವಾಸ ದಲ್ಲಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಶುಕ್ರವಾರ ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲನ ಯುವ ಜನ ಸಬಲೀಕರಣ ಕ್ರೀಡಾ ವಸತಿ ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿ ಮಕ್ಕಳಿಗಾಗಿ ತಯಾರಿಸಲಾಗಿರುವ ದೋಸೆ ಉಪಹಾರವನ್ನು ಹಾಗೂ ಮಕ್ಕಳಿಗೆ ಪ್ರತಿ ನಿತ್ಯ ನೀಡಲಾಗುವ ಮೊಳಕೆ ಕಾಳುಗಳನ್ನು ತಿಂದು ಪರಿಶೀಲಿಸಿದರು.ಬಳಿಕ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿದರು.
ಮಕ್ಕಳಿಗೆ ಒಳ್ಳೆ ಕ್ರೀಡಾ ತರಬೇತಿ ನೀಡಿ ಅವರುಗಳಿಗೆ ಕಬ್ಬಡಿ, ಅಥ್ಲೆಟಿಕ್, ರೆಸಲಿಂಗ್ ಅಂತಹ ಕ್ರೀಡೆಗಳನ್ನು ಆಡಿಸಿ ಇದರಿಂದ ಮಕ್ಕಳ ದೈಹಿಕ ಸಾಮರ್ಥ್ಯ ಹಾಗೂ ಮನೋ ಸಾಮರ್ಥ್ಯ ಹೆಚ್ಚಾಗುತ್ತದೆ. ಮಕ್ಕಳಿಗೆ ಬೆಳಿಗ್ಗೆ ಯೋಗ, ಧ್ಯಾನ ಮಾಡಿಸಿ ಇದರಿಂದ ಮಕ್ಕಳಿಗೆ ಇಚ್ಛಾಸಕ್ತಿ ಬೆಳಿಸಿಕೊಳ್ಳಲು ಸಹಾಯಕಾರಿ ಯಾಗುತ್ತದೆ. ಉತ್ತಮ ಗುಣಮಟ್ಟದ ಆಹಾರ ನೀಡಿಬೇಕು ಎಂದರು. ಮಕ್ಕಳೇ ನೀವುಗಳು ಮನಸ್ಸಿಟ್ಟು ಎಲ್ಲವನ್ನು ಕಲಿತುಕೊಳ್ಳಿ ನಿಮ್ಮ ಗುರುಗಳನ್ನೇ ಮೀರಿಸುವಷ್ಟು ಎತ್ತರಕ್ಕೆ ಬೆಳೆಯಬೇಕು ಸಮಾಜಕ್ಕೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯ ಹೆಸರು ತನ್ನಿ, ಸಾಧಿಸಬೇಕೆಂಬ ಹಠ ನಿಮ್ಮಲ್ಲಿ ಇರಬೇಕು ನಾನು ಗೆದ್ದೆ ಬರುತ್ತೇನೆ ಎಂಬ ಮನೋಭಾವನೆ ನಿಮ್ಮಲ್ಲಿ ಇರಬೇಕು ಎಂದರು. ಕ್ರೀಡೆಯಲ್ಲಿ ದ್ವೇಷ ಬೇಡ ಗೆದ್ದವರನ್ನು ದ್ವೇಷಿಸದೆ, ಸೋತವರನ್ನು ಪ್ರೋತ್ಸಾಹಿಸುವ ಗುಣ ಹೊಂದಬೇಕು. ಇನ್ನೂ ಹೆಣ್ಣಮಕ್ಕಳು ತುಂಬಾನೇ ಗಟ್ಟಿಯಾಗಬೇಕು ಈಗ ಎಲ್ಲ ರಂಗದಲ್ಲೂ ಮಹಿಳೆಯರು ಮುಂದೆ ಇದ್ದೀರಾ ನಿಮಗೆ ಒಳ್ಳೇದಾಗಲಿ ಎಂದು ಶುಭ ಹಾರೈಸಿದರು
ಬಳಿಕ ಕ್ರೀಡಾ ಇಲಾಖೆಯಡಿಯಲ್ಲಿ ನಿರ್ಮಾಣವಾದ ಈಜುಕೋಳ, ಬ್ಯಾಡ್ಮಿಂಟನ್ ಪೋರ್ಟಗೆ ಭೇಟಿ ನೀಡಿ ಖುದ್ದು ಬ್ಯಾಡ್ಮಿಂಟನ್ ಆಟ ಆಡಿ ಖುಷಿ ಪಟ್ಟರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಸಾಥ ನೀಡಿದರು.

