
ಒಳಮೀಸಲು ಜಾರಿ -ಮಾಳಗಿ ಸ್ವಾಗತ
ಹಾವೇರಿ:ರಾಜ್ಯದಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರು ಹಾಗೂ ದಲಿತ ಸಮುದಾಯದವರ ನಿರಂತರ ಹೋರಾಟದ ಫಲವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಮೀಸಲಾತಿ ಹಂಚಿಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಒಳಮೀಸಲಾತಿಯ ಮೀಸಲಾತಿ ಹಂಚಿಕೆ ಮಾಡಲು ಸಹಕಾರಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ,ರಾಜ್ಯ ಸರ್ಕಾರದ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ,ಶಾಸಕರಿಗೆ,ಒಳಮೀಸಲಾತಿಗೆ ಸಹಕಾರ ನೀಡಿದ ಎಲ್ಲಾ ವಕೀಲರಿಗೆ,ಮುಖಂಡರಿಗೆ ಸಮುದಾಯದ ಪ್ರತಿಯೊಬ್ಬರಿಗೂ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ೩೫ ವರ್ಷಗಳ ಕಾಲ ಒಳಮೀಸಲಾತಿಗಾಗಿ ಅನೇಕ ಧರಣಿ, ಹೋರಾಟ, ಪ್ರತಿಭಟನೆ, ಸತ್ಯಾಗ್ರಹ, ಪಾದಯಾತ್ರೆ, ಉಪವಾಸ ಸತ್ಯಗ್ರಹ, ಅರೆಬೆತ್ತಲೆ ಮೆರವಣೆಗೆ ಸೇರಿದಂತೆ ವಿವಿಧ ವಿಭಿನ್ನ ಹೋರಾಟವನ್ನು ಮಾಡುತ್ತಾ ಬರಲಾಗಿತ್ತು. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಅಗಷ್ಟ್-೦೧-೨೦೨೪ ರಂದು ಸುಪ್ರೀಂ ಕೋರ್ಟ ಪೂರಕವಾಗಿರುವ ತೀರ್ಪು ನೀಡಿ ಒಳಮೀಸಲಾತಿಗೆ ಸಹಕಾರಿಯಾಯಿತು. ಒಳಮೀಸಲಾತಿ ಜಾರಿಗೆ ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಸರ್ವರಿಗೆ , ಎಲ್ಲಾ ಒಳಮೀಸಲಾತಿ ಹೋರಾಟಗಾರರಿಗೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ, ಜಿಲ್ಲೆ,ತಾಲ್ಲೂಕ ಹಾಗೂ ಗ್ರಾಮ ಸಂಘಟನೆಗಳಿಗೆ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

