ಓಜಾಣ….. ಇದು ಕಾಜಾಣ……

Date:

ಕಾಜಾಣ ಕ್ಯಾಮರಾಕಣ್ಣಿನಲ್ಲಿ …..

ಓಜಾಣ….. ಇದು ಕಾಜಾಣ…...
ಇಲ್ಲಿಯವರೆಗೂ ನೂರಾರು ಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದಿರುವ ನನಗೆ ಪಕ್ಷಿಗಳ ಮೇಲೆ ಆಸಕ್ತಿ, ಕುತೂಹಲ ಹೆಚ್ಚುತ್ತಲೇ ಇದೆ. ಪಕ್ಷಿಲೋಕ ವಿಸ್ಮಯವಾಗಿದ್ದು, ಪರಿಸರ ನಿತ್ಯ ಹೊಸದಾಗಿ ಕಾಣುತ್ತದೆ. ರಾಷ್ಟ್ರಕವಿ ಕುವೆಂಪು ಅವರ ಕವಿತೆಗಳಲ್ಲಿ, ಅವರ ಬರಹಗಳಲ್ಲಿ ಅವರ ಪುಸ್ತಕದ ಮುಖಪುಟದಲ್ಲಿ ಕಾಜಾಣ ಛಾಯಾಚಿತ್ರ ಕಂಡಿರುವ, ಇದರಬಗ್ಗೆ ಉಲ್ಲೇಖವನ್ನು ಓದಿದ್ದ ನನಗೆ ಕಾಜಾಣವನ್ನು ಕಣ್ಣತುಂಬಿಕೊಳ್ಳಬೇಕು, ಅದರ ಛಾಯಾಚಿತ್ರವನ್ನು ಸೆರೆಹಿಡಿಯಬೇಕೆನ್ನುವ ಕುತೂಹಲ ಮನದಲ್ಲಿತ್ತು. ಕ್ಯಾಮರಾದೊಂದಿಗಿನ ಸುತ್ತಾಟದಲ್ಲಿ ವನ್ಯಜೀವಿಗಳು, ಪಕ್ಷಿಗಳಕಂಡ ತಕ್ಷಣ ಅವುಗಳ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸರೆಹಿಡಿಯಲು ಯತ್ನಿಸುತ್ತೇನೆ. ಹೀಗೆ ಸುತ್ತಾಟದಲ್ಲಿ ಈ ಹಿಂದೆ ನನಗೆ ಎಂದು ಕಾಣಿಸದ ಕಾಜಾಣ ಕಣ್ಣಿಗೆ ಬಿದ್ದಿತು. ಅದರ ಕೆಲವು ಚಿತ್ರಗಳನ್ನು ಸೆರೆಹಿಡಿದೆ.
ಪಕ್ಷಿಗಳನ್ನು ನೋಡುವ ನನ್ನ ದೃಷ್ಟಿಕೋನದಲ್ಲಿ ಅನೇಕ ಬದಲಾವಣೆಗಳಾಗಿವೆ. ಮೊದ ಮೊದಲು ಪಕ್ಷಿಗಳ ಮೇಲಿದ್ದ ಅಸಡ್ಡೆ ನಿಧಾನವಾಗಿ ಬದಲಾವಣೆ ಹೊಂದಿ, ಪಕ್ಷಿಗಳು ಕಂಡೊಡನೆ ಅದರ ಹೆಸರೇನು? ಎಂಬ ಕುತೂಹಲದೊಂದಿಗೆ ಅದರ ಆಕಾರ, ಬಣ್ಣ, ನಡೆವಳಿಕೆಗಳನ್ನು ಗಮನಹರಿಸುತ್ತ ಬಂದಿದ್ದೇನೆ. ಫೋಟೋಗ್ರಫಿ ಮೇಲಿನ ಹುಚ್ಚು ನನ್ನನ್ನು ಈ ಪಕ್ಷಿಲೋಕದತ್ತ ಸೆಳೆಯುವಲ್ಲಿ ವಿಶೇಷ ಪಾತ್ರವಹಿಸಿದೆ. ವನ್ಯಜೀವಿಗಳನ್ನು ಕಂಡೊಡನೆ ಮನ ಉತ್ಸುಕಗೊಳ್ಳುತ್ತದೆ. ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು, ಅದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಕೈಗೊಳ್ಳುತ್ತಾ ಬಂದಿರುವೆ.

ಕವಲೊಡೆದ ಬಾಲವು ಮರಿಕಾಜಾಣಗಳಲ್ಲಿ

ಕಾಜಾಣ ವಿಶಿಷ್ಟವಾದ ಪಕ್ಷಿಗಳಲ್ಲಿ ಒಂದಾಗಿದೆ. ಕಾಜಾಣ ಪಕ್ಷಿಯನ್ನು ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಹುಡುಕುತ್ತಲೇ ಬಂದಿರುವೆ. ಆದರೆ, ಎಲ್ಲಿಯೂ ಅದು ಕಂಡಿರಲಿಲ್ಲ. ಆಕಸ್ಮಿಕವಾಗಿ ನಮ್ಮ ಪರಿಸರದಲ್ಲಿ ಕಾಜಾಣ ಕಣ್ಣಿಗೆ ಕಂಡಿತು. ಸಂಜೆ ಸಮಯ ನನಗೆ ಸಿಗುವುದು ಅಪರೂಪ!, ಸದಾ ಕೆಲಸದ ಒತ್ತಡ ಇರುವ ಕಾರಣಕ್ಕೆ ಸಂಜೆ ವೇಳೆ ಪತ್ರಿಕಾಲಯವನ್ನು ಬಿಟ್ಟು ಹೊರಗಡೆ ಹೋಗುವುದು ವಿರಳ. ಕೆಲಸ ಬೇಗನೆ ಮುಗಿದ ಕಾರಣಕ್ಕೆ ಸಂಜೆ ವೇಳೆ ಸಕ್ಕರೆ ರಹಿತ ಚಹಾ ಕುಡಿದು ಕೆರೆಯ ಪ್ರದೇಶಕದಕ್ಕೆ ಹೊಗಲು ನಿರ್ಧರಿಸಿ ಕ್ಯಾಮೆರಾ ಹೆಗಲೆರಿಸಿದೆ. ಕೊಟ…ಕೊಟ ಸದ್ದಿನ ಬೈಕ್ ಏರಿದೆ.
ನಿಧಾನವಾಗಿ ಕೆರೆಯದಡದಲ್ಲಿ ಪ್ರವೇಶಿಸಿದ ನನಗೆ ಯಾವುದೇ ಪಕ್ಷಿಗಳು ಕಲರವ ಕೇಳಲಿಲ್ಲ. ಬೈಕ್ ನಿಲ್ಲಿಸಿ ಬಾರವಾದ ಕ್ಯಾಮರಾದೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತ ನಡೆದೆ. ಅದಾಗಲೆ ಸೂರ್ಯ ತನ್ನ ತಾಯಿ ಒಡಲ ಸೇರಲು ಸಜ್ಜಾದಂತೆ ಸೂರ್ಯ ರಶ್ಮಿ ಕೆಂಪುಬಣ್ಣಕ್ಕೆ ತಿರುಗಿ ಆಕಾಶಕ್ಕೆಲ್ಲಾ ಕೆಂಪುಹೊದಿಕೆ ಹೊಚ್ಚಿದಂತಿತ್ತು. ಅಷ್ಟರಲ್ಲಿ ವಿದ್ಯುತ್ ತಂತಿಯಮೇಲೆ ಉದ್ದ ಕಡ್ಡಿಯಾಕಾರದ ಪುಕ್ಕವುಳ್ಳ ನೋಡಲು ಪುಟ್ಟ ಕಪ್ಪಗಿನ ಹಕ್ಕಿಯೊಂದು ಬಂದು ಕುಳಿತು ಕೊಂಡಿತು. ಕಪ್ಪು ಹಕ್ಕಿಯು ಹಾರಿ ಬಂದು ಕುಳಿತ ಚಿತ್ರಣ ನಾನು ಕಂಡ ಅಪರೂಪದಕ್ಷಣಗಳಲ್ಲಿ ಒಂದಾಗಿದೆ!. ತಡಮಾಡಿದರೇ ಈಪಕ್ಷಿಯ ಹಾರಿಹೋದಿತೆಂದು ಅದರ ಕೆಲವು ಛಾಯಾಚಿತ್ರಗಳು ಸೆರೆಹಿಡಿದೆ.
ನಮ್ಮ ರಾಜ್ಯದಲ್ಲಿ ಆರು ಬಗೆಯ ಕಾಜಾಣಪಕ್ಷಿಗಳನ್ನು (ಡ್ರೋಂಗೊ) ಕಾಣಬಹುದಾಗಿದೆ. ಕಾಜಾಣದ ಮೈಬಣ್ಣವು ಸಂಪೂರ್ಣ ಕಪ್ಪಾಗಿದ್ದು, ದೊಡ್ಡದಾದ ಕೊಕ್ಕು, ಕವಲೊಡೆದ ಪುಕ್ಕದ ಬಾಲ ವನ್ನು ಹೊಂದಿರುತ್ತದೆ. ಈ ಕವಲೊಡೆದ ಬಾಲವು ಮರಿಕಾಜಾಣಗಳಲ್ಲಿ ಕಂಡು ಬರುವುದು ತುಂಬಾ ವಿರಳ. ಕಾಜಾಣ ಹಕ್ಕಿಗಳು ತಮ್ಮ ಆಕ್ರಮಶೀಲ ನಡುವಳಿಕೆಗೆ ಹೆಸರುವಾಸಿಯಾಗಿವೆ. ತಮ್ಮ ಗೂಡನ್ನು ರಕ್ಷಿಸಿಕೊಳ್ಳಲೆಂದು ಕಾಗೆಗಳನ್ನು, ಹದ್ದುಗಳನ್ನು ಬೆನ್ನಟ್ಟಿಕೊಂಡು ಹೋಗಿ ಓಡಿಸುತ್ತವೆ. ವೇಗವಾಗಿ ಹಾರುತ್ತಾ ತನ್ನ ವೈರಿ ಹಕ್ಕಿಯನ್ನು ಹೆದರಿಸಿ ಸೆದೆಬಡಿಯುವಲ್ಲಿ ಈ ಹಕ್ಕಿ ನಿಪುಣ, ನಿಷ್ಣಾತ. ಕಾಜಾಣ ಹಕ್ಕಿಗಳ ಆಹಾರಕ್ರಮವು ಹುಳುಹುಪ್ಪಟೆಗಳಾದ ಗೆದ್ದಲು ಹುಳು, ಜೇನುಹುಳು, ಜೀರುಂಡೆ, ಮಳೆಹುಳು, ಕಣಜ ಹುಳು, ಡ್ರ್ಯಾಗನ್ ಫ್ಲೈಗಳಂತಹ ಹುಳುಗಳು ಇವುಗಳ ಆಹಾರ.
ಕಾಜಾಣ ಗಿಡ-ಗಂಟೆಗಳ ತೆಳುವಾದಕಡ್ಡಿಗಳಿಂದ, ಬಳ್ಳಿಯ ಕುಡಿಗಳಿಂದ, ಎಲೆಗಳಿಂದ ಚಿಕ್ಕ ಬಟ್ಟಲಿನಾಕಾರದ ಗೂಡನ್ನು ನಿರ್ಮಿಸುತ್ತದೆ. ಒಂದು ವಾರದಲ್ಲೆ ಗೂಡು ಕಟ್ಟುವ ಕಾಜಾಣಗಳು ಗಂಡು ಹಾಗೂ ಹೆಣ್ಣು ಎರಡೂ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ಕೆಲಸ ಮಾಡುತ್ತವೆ. ಕಾಜಾಣ ಒಂದೇ ಬಾರಿಗೆ ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಹೊರಬಂದ ಕೇವಲ ೧೬ ರಿಂದ ೧೭ ದಿನಗಳಲ್ಲಿ ಮರಿಹಕ್ಕಿಗಳು ಹಾರುವುದನ್ನು ಕಲಿಯುತ್ತವೆ. ಕಾಜಾಣ ವಿವಿಧ ತೆರನಾದ ಕೂಗುವ ಬಗೆಯಿಂದಲೇ ಚಿರಪರಿಚಿತವಾಗಿವೆ.
ವಿವಿಧ ಹಕ್ಕಿಗಳ ಕೂಗನ್ನು ಪಳಗಿಸಿಕೊಂಡ ಕಾಜಾಣವು ತನಗೆ ಬೇಕಾದ ಸಂದರ್ಭದಲ್ಲಿ ಇತರ ಹಕ್ಕಿಗಳಂತೆ ಕೂಗಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ. ಇಂತ ಹಿನ್ನಲೆ ಇರುವ ಕಾಜಾಣ ನಮ್ಮ ಹಾವೇರಿಯ ಪರಿಸರದಲ್ಲಿ ಕಂಡಿದ್ದು ನನಗೆ ಸಂತೋಷವನ್ನು ಉಂಟುಮಾಡಿತ್ತು. ಮೇಲಾಗಿ ಕಾಜಾಣದ ಛಾಚಾಚಿತ್ರವು ನನ್ನ ಸಂಗ್ರಹದಲ್ಲಿ ದಾಖಲಾಗಿರುವುದು ನನ್ನ ಸಂತಸ ಇಮ್ಮುಡಿಗೊಳ್ಳಲು ಕಾರಣವಾಗಿದೆ.
       ಚಿತ್ರ/ಬರಹ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...