ಕಾಡಿನ ಬದಲು ನಾಡಿಗೆ ವಲಸೆ ಬಂದಿರುವ “ಗುಲಾಬಿ ಬಣ್ಣದ ಕಬ್ಬಕ್ಕಿಗಳು”

Date:

ಹಾವೇರಿ: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಹಾವೇರಿ ಐತಿಹಾಸಿಕ ಹೆಗ್ಗೇರೆಕೆರೆ ಸೇರಿದಂತೆ ಸುತ್ತ-ಮತ್ತಲಿನ ಕೆರೆಕಟ್ಟೆಗಳಿಗೆ, ಕುರುಚಲು ಕಾಡಿಗೆ ವಲಸೆ ಪಕ್ಷಿಗಳ ಬರುವುದು ಸಾಮಾನ್ಯ, ಆದರೆ ಈ ಭಾರಿ ಚಳಿಗಾಲಕ್ಕೆ ವಲಸೆಪಕ್ಷಿಗಳು ಕಾಡಿನ ಬದಲು ನಾಡಿಗೆ ವಲಸೆ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆ. ಹೌದು ಈಬಾರಿ ಸಾವಿರಾರು ಸಂಖ್ಯೆಯಲ್ಲಿ ಹಾವೇರಿಗೆ ಮೂರ್‍ನಾಲಕುದಿನಗಳ ಹಿಂದೆ “ಗುಲಾಬಿ ಬಣ್ಣದ ಕಬ್ಬಕ್ಕಿಗಳು” ವಲಸೆ ಬಂದಿವೆ.
ಶನಿವಾರ ಬೆಳಿಗ್ಗೆ ೮-೨೦ ರ ಸುಮಾರಿಗೆ  ಹಾವೇರಿಯ ದಾನೇಶ್ವರಿನಗರದ ಹೆಗ್ಗೆರೆಕೆರೆಗೆ ಹೋಗುವ ಮುಖ್ಯರಸ್ತೆಯಲ್ಲಿನ ವಿದ್ಯುತ್ ಕಂಬದ ಮೇಲೆ ಸಾವಿರಾರು ಸಂಖ್ಯೆಯಲ್ಲಿ ತಿಳು ಗುಲಾಬಿ ಬಣ್ಣದ ಕಬ್ಬಕ್ಕಿಗಳು ಇರುವುದು ಕಂಡಿತು. ಇವುಗಳ ಚಲನವಲನ ಗಮನಿಸುತ್ತಾ ಅವುಗಳ ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿದಿರುವೆ. ತಿಳು ಗುಲಾಬಿಬಣ್ಣದ ಕಬ್ಬಕ್ಕಿಗಳು ವಲಸೆ ಪಕ್ಷಿಗಳಾಗಿದ್ದು, ಇವು ಏಕೆ ನಗರ ಪ್ರದೇಶಕ್ಕೆ ಏಕೆ ವಲಸೆ ಬಂದಿವೆ?ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತು.
ಸಾಮಾನ್ಯವಾಗಿ ಇವುಗಳ ಚಳಿಗಾಲದಲ್ಲಿ ನಮ್ಮ ಭಾಗದ ಕೆರೆಕಟ್ಟೆಗಳಿಗೆ ವಲಸೆ ಬರುತ್ತವೆ. (ಗುತ್ತಲ-ನೆಗಳೂರು, ಅಗಡಿ ಭಾಗದಲ್ಲಿ ಇವುಗಳು ಹೆಚ್ಚಾಗಿ ಕಂಡು ಬಂದಿದ್ದವು) ದಟ್ಟವಾದ ಪೋದೆಯ ಪ್ರದೇಶದಲ್ಲಿ ಗೂಡು ನಿರ್ಮಿಸಿಕೊಂಡು ಗುಂಪಾಗಿ ವಾಸಿಸುವ ಇವುಗಳು ಸಂತಾನ ಅಭಿವೃದ್ಧಿ ಪಡಿಸಿಕೊಂಡು ಬೇಸಿಗೆ ಆರಂಭವಾದ ತಕ್ಷಣ ಇವು ಮೂಲ ಸ್ಥಳಕ್ಕೆ ಮರಳುತ್ತವೆ.
ನೋಡಲು ಇವು ನಮ್ಮ ಸ್ಥಳೀಯ ಪಕ್ಷಿ ಗೊರವಂಕನ ತರಹ ಕಂಡು ಬರುತ್ತವೆ. ಆದರೆ, ರೂಪದಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಇವುಗಳಿಗೆ ಇಂಗ್ಲಿಷನಲ್ಲಿ “ರೋಜಿ ಸ್ಟಾರ್ಲಿಂಗ್”, ಕನ್ನಡದಲ್ಲಿ “ಗುಲಾಬಿ ಬಣ್ಣದಕಬ್ಬಕ್ಕಿ” ಎಂದು ಕರೆಯಲಾಗುತ್ತದೆ. ಇವುಗಳು ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಾದಿಂದ ವಲಸೆ ಬರುತ್ತವೆ. ಹಕ್ಕಿಯ ದೇಹ ಹಾಗೂ ಚುಂಚು ಗುಲಾಬಿ ಬಣ್ಣದಿಂದ ಕೂಡಿದ್ದರೂ, ಕಾಲು ಮಾತ್ರ ತಿಳಿಕಿತ್ತಳೆ ಬಣ್ಣದಿಂದ ಕೂಡಿರುತ್ತದೆ.
ಇವು ಜೋಳ, ರಾಗಿ ಸೇರಿದಂತೆ ವಿವಿಧ ಧವಸ ಧಾನ್ಯ ಬೆಳೆವ ಪ್ರದೇಶದಲ್ಲಿ ಗುಲಾಬಿ ಬಣ್ಣದ ಕಬ್ಬಕ್ಕಿಗಳು ದೊಡ್ಡ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ಗುಂಪಿನಲ್ಲಿ ಸುಮಾರು ೫೦೦ ರಿಂದ ೧,೦೦೦ ಹಕ್ಕಿಗಳು ಇರುತ್ತವೆ.
ಒಟ್ಟಾಗಿ ಬಂದು ಹೊಲಗಳಿಗೆ ದಾಳಿ ಮಾಡುವ ಇವುಗಳು ಜೋಳದ ತೆನೆಗಳಲ್ಲಿನ ಕಾಳುಗಳನ್ನು ಭಕ್ಷಿಸುತ್ತವೆ. ಬೆಳೆಗಳಿಗೆ ಮಾರಕವಾದ ಚಿಟ್ಟೆ, ಇತರೆ ಕೀಟಗಳನ್ನ ಭಕ್ಷಿಸಿ ಕೆಲವೊಮ್ಮೆ ಧಾನ್ಯ ರಕ್ಷಿಸಿ ಉಪಕಾರ ಮಾಡುವುದರಿಂದ ಇವುಗಳನ್ನು ರೈತರು ಸಹಿಸಿಕೊಳ್ಳುವುದು ಉಂಟು!. ಇದಲ್ಲದೇ, ಈ ಹಕ್ಕಿಗಳು ಪರಾಗಸ್ಪರ್ಶದಲ್ಲಿ ಬಹುಮುಖ್ಯ ಪಾತ್ರ ವಹಿಸುವುದರಿಂದ ರೈತರಪಾಲಿಗೆ ಇದು ಪ್ರಿಯವಾದ ಪಕ್ಷಿಯಾಗಿದೆ.
ಇವುಗಳು ಮೈನಾ ಹಕ್ಕಿಗಳ ಒಡನಾಟದಲ್ಲಿರುವುದರಿಂದ ಅವುಗಳ ಜೊತೆಗೆ ಸೇರಿಕೊಂಡು ಹಣ್ಣು, ಕಾಳು ತಿನ್ನುತ್ತವೆ. ಹೆಣ್ಣು ಗುಲಾಬಿ ಕಬ್ಬಕ್ಕಿ ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಗಂಡು -ಹೆಣ್ಣು ಸೇರಿ ಮರಿಗಳಿಗೆ ಗುಟುಕು ನೀಡಿ, ಆರೈಕೆ ಮಾಡುತ್ತವೆ. ಗುಲಾಬಿ ಮತ್ತು ಕಪ್ಪು ಕಬ್ಬಕ್ಕಿಗಳು ಸಾಧಾರಣ ಗಾತ್ರದವುಗಳಾಗಿದ್ದು (೨೨ ಸೆಂ)ಕಪ್ಪು, ಎದೆ ಮತ್ತು ತಿಳಿ ಗುಲಾಬಿ ಬಣ್ಣದಹೊಂದಿವೆ.
ಸಾಮಾನ್ಯವಾಗಿ ಕೆರೆಯ ಪ್ರದೇಶದಲ್ಲಿ, ಜೋಳದ ಹೊಲಗಳಲ್ಲಿ ಹೆಚ್ಚಾಗಿ ಕಂಡು ಬರುವ ಗುಲಾಬಿ ಬಣ್ಣದ ಕಬ್ಬಕ್ಕಿಗಳು ನಗರಪ್ರದೇಶದಲ್ಲಿರುವುದು ನನಗೆ ಅಚ್ಚರಿ ಎನಿಸಿತು!. ಇವುಗಳು ನಗರ ಪ್ರದೇಶದಲ್ಲಿ ಕಂಡುಬಂದಿರುವುದಕ್ಕೆ ಕಾರಣ ಹುಡುಕತೊಡಗಿದಾಗ ನನಗೆ ಕಂಡದ್ದು, ಹಾವೇರಿಯ ಕಾರದ ತಿನಿಸುಗಳು. ಕಾರದ ತಿನಿಸುಗಳಿಗೆ ಮರುಳಾದ ಗುಲಾಬಿಬಣ್ಣದ ಕಬ್ಬಕ್ಕಿಗಳು. ತಂತಿಯ ಮೇಲೆ ಕುಳಿತು ಸರತಿಯಲ್ಲ ಹಾರಾಟ ನಡೆಸಿ ಕಾರದ ತಿನಿಸುಗಳು ಬಿದ್ದಿರುವ ಸ್ಥಳಕ್ಕೆ ಹಾರಿ ಹೋಗಿ ಅಲ್ಲಿಂದ ಕಾರದತಿನಿಸುಗಳನ್ನು ಹೆಕ್ಕಿಕೊಂಡು ತಿಂದು ಮತ್ತೆ ವಿದ್ಯುತ್ ತಂತಿಯಮೇಲೆ ಬಂದು ವಿಶ್ರಮಿಸುತ್ತವೆ.
ಪಕ್ಷಿ ಪ್ರೇಮಿ ಟೀಕಾಲಾಲ್ ಪಟೇಲ ಚೌದರಿ ಕಾರದ ಹಾಗೂ ಸಿಹಿ ತಿನಿಸುಗಳು ತಯಾರಕರಾಗಿದ್ದು, ಪಕ್ಷಿ ಪ್ರೇಮಿಯಾಗಿರುವ ಇವರು ಹಾವೇರಿನಗರದ ದಾನೇಶ್ವರಿನಗರದಲ್ಲಿನ ಹೆಗ್ಗೆರೆಕೆರೆಗೆ ಹೊಂದಿಕೊಂಡಿರುವಂತೆ ಇವರು ಸಿಹಿ ತಿನಿಸು ತಯಾರಿಸುವ ಘಟಕಹೊಂದಿದ್ದು, ಇವರು  ತಿಂಡಿ-ಕರಿದ ಪದಾರ್ಥಗಳನ್ನು ಈ ಪಕ್ಷಿಗಳಿಗೆ ನೀಡುವುದರ ಜೊತೆಗೆ ನೀರಿನ ತೊಟ್ಟಿಯನ್ನಿಟ್ಟು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಕಾರಣಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಗುಲಾಬಿ ಬಣ್ಣದ ಕಬ್ಬಕ್ಕಿಗಳು ಇವರ ಅಂಗಡಿಯ ಸುತ್ತ ನೆರೆಯುತ್ತವೆ.   ಕಾರದ ತಿನಿಸುಗಳಿಗೆ ಮನಸೋತ ಗುಲಾಬಿ ಬಣ್ಣದ ಕಬ್ಬಕ್ಕಿಗಳು ಸ್ಥಳೀಯ ಗೊರವಂಕ, ಕಾಗೆಗಳ ಜೊತೆಗೆ ಆಗಾಗ ಈ ಪ್ರದೇಶಕ್ಕೆ ಬಂದು ಸುಲಬವಾಗಿ, ಸರಳವಾಗಿ ಸಿಗುವ ಕಾರದತಿನಿಸುಗಳನ್ನು ತಿಂದು ಹಾರುತ್ತವೆ.
ಗುಲಾಬಿ ಬಣ್ಣದ ಕಬ್ಬಕ್ಕಿಗಳ ಆಹಾರ ಕಾಳು-ಕಡಿ, ಮೀಡತೆ, ಕ್ರೀಮಿ-ಕೀಟಗಳಾಗಿದ್ದ, ಆದರೆ ಇವುಗಳೇಕೆ ಕಾರದ ತಿನಿಸುಗಳ ರುಚಿಹಚ್ಚಿಕೊಂಡಿವೆ? ಈ ಕಾರದ ತಿನಿಸುಗಳು ಗುಲಾಬಿಬಣ್ಣದ ಕಬ್ಬಕ್ಕಿಗಳ ಆರೋಗ್ಯಮೇಲೆ ಪರಿಣಾಮ ಬಿರುವುದಿಲ್ಲವೇ? ಕಾಡಿನಲ್ಲಿ ಆಹಾರದ ಕೊರತೆಯ ಕಾರಣಕ್ಕೆ ಈ ಕಬ್ಬಕ್ಕಿಗಳು ನಾಡಿಗೆ ಲಗ್ಗೆ ಇಟ್ಟಿವಿಯೇ? ಎನ್ನುವ ಪ್ರಶ್ನೆ ನನ್ನದಾಗಿದೆ.

ಚಿತ್ರ/ಲೇಖನ: ಮಾಲತೇಶ ಅಂಗೂರ, ವನ್ಯಜೀವಿ ಛಾಯಾಗ್ರಾಹಕ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...