ಗೌ.ಡಾ. ಅವರು ಮಾರುತ್ತಾರೆ…. ಇವರು ಕೊಳ್ಳುತ್ತಾರೆ…
ಕೆಲವುತಿಂಗಳುಗಳ ಹಿಂದೆ ಪ್ರತಿಷ್ಠಿತ ವಿವಿಯೊಂದು ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಗೌರವ ಡಾಕ್ಟರೇಟ್ ಕೊಡಲು ಮುಂದೆ ಬಂದಿತ್ತು. ಅದನ್ನು ಅವರು ನಯವಾಗಿ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಮಾತ್ರ ಅರ್ಥಗರ್ಭಿತವಾಗಿತ್ತು ನನ್ನ ಹೆಂಡತಿ ಡಾಕ್ಟರೇಟ್ ಆಗಬೇಕಾದರೆ ಏಳು ವರ್ಷ ಹಗಲಿರುಳು ಓದಿ ಸಾಧನೆ ಮಾಡಿದ್ದಾರೆ. ಅಂಥ ಸಾಧನೆಯನ್ನು ನಾನೇನೂ ಮಾಡಿಲ್ಲ ಹೀಗಾಗಿ ನನಗೆ ಡಾಕ್ಟರೇಟ್ ಬೇಡ ಎಂದು ಹೇಳಿ ದ್ರಾವಿಡ್ ಬರೀ ದ್ರಾವಿಡ್ ಆಗಿಯೇ ಉಳಿದು ಮಹಾನ್ ಎನಿಸಿಕೊಂಡರು.
ಇದೇ ಸಾಲಿಗೆ ಇತ್ತೀಚೆಗೆ ಸೇರಿಕೊಂಡವರು ಕನ್ನಡದ ಪ್ರತಿಭಾನ್ವಿತ ನಟ ಸುದೀಪ್, ತುಮಕೂರು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಕೊಡುವುದೆಂದು ತೀರ್ಮಾನಿಸಿ ಈ ವಿಷಯವನ್ನು ತಿಳಿಸಿದಾಗ ಸುದೀಪ್ ಈ ಕೊಡುಗೆಯನ್ನು ನಿರಾಕರಿಸಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡರು. ಸುದೀಪ್ ಡಾಕ್ಟರೇಟ್ ನಿರಕರಿಸಿದರು ಎನ್ನುವುದೇ ಆ ದಿನದ ಮಟ್ಟಿಗೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಟ್ರೆಂಡಿಂಗ್ ಸುದ್ದಿಯಾಗಿತ್ತು. ನಾಡಿನ ಪ್ರಮುಖ ಪತ್ರಿಕೆಗಳು ಕೂಡ ಸುದೀಪ್ ಡಾಕ್ಟರೇಟ್ ನಿರಾಕರಿಸಿದ ವಿಚಾರವನ್ನು ಪ್ರಮುಖ ಸುದ್ದಿಯಾಗಿ ಮರುದಿನ ಪ್ರಕಟಿಸಿದವು. ಎಲ್ಲಾದರೂ ಸುದೀಪ್ ಡಾಕ್ಟರೇಟ್ ಸ್ವೀಕರಿಸಲು ಒಪ್ಪಿದ್ದರೆ ಆ ವಿಚಾರಕ್ಕೆ ಮಾಧ್ಯಮಗಳು ಇಷ್ಟು ಮಹತ್ವ ಕೊಡುತ್ತಿರಲಿಲ್ಲ. ಅದು ಒಂದು ಮಾಮೂಲು ಚಿಕ್ಕ ಸುದ್ದಿಯಾಗುತ್ತಿತ್ತಷ್ಟೆ.
ಗೌರವ ಡಾಕ್ಟರೇಟ್ ಪದವಿಯನ್ನು ಯಾರು ಸ್ವೀಕರಿಸುತ್ತಾರೆ ಎಂಬಷ್ಟೇ ಯಾರು ಕೊಡುತ್ತಾರೆ ಎಂಬುದೂ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಅದು ಕೊಡು-ಕೊಳ್ಳುವ ಒಂದು ದಂಧೆ ಅಥವಾ ವ್ಯವಹಾರವಾಗುತ್ತದೆ. ಅರ್ಹರಿಗೆ ಗೌರವ ಡಾಕ್ಟರೇಟ್, ಪ್ರಶಸ್ತಿ ದೊರೆತಾಗ ಅದರ ಮೌಲ್ಯವೂ ಹೆಚ್ಚುತ್ತದೆ. ಅರ್ಹತೆಯಿಂದ ಡಾಕ್ಟರೇಟ್ ಸಂಪಾದಿಸಿದವರು ಎದುರಿಸುವ ಮುಜುಗರವೂ ತಪ್ಪುತ್ತದೆ.
ಇಲ್ಲಿ ಹೇಳಿರುವ ಇನ್ನೂ ವಿಚಾರಗಳು ನಕಲಿ ಡಾಕ್ಟರೇಟ್‌ಗೆ ಸಂಬಂಧಿಸಿದ್ದೆ ಹೊರತು ಸರಕಾರದ ಅಧೀನದಲ್ಲಿರುವ ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಕೊಡ ಮಾಡುವ ಗೌರವ ಡಾಕ್ಟರೇಟ್ ಕುರಿತಾಗಿ ಅಲ್ಲ. ಆದರೆ, ಈಗೀಗ ಈ ವಿವಿಗಳು ಕೋಡುವ ಡಾಕ್ಟರೇಟ್ ಗೌರವ ಕೂಡ ವಿವಾದಕ್ಕೊಳಗಾಗುತ್ತಿರುವುದು ಮಾತ್ರ ದುರಂತ ಬೆಳವಣಿಗೆ ಸಾಧಕರಿಗೆ ಮಾತ್ರ ಮೀಸಲಾಗಿದ್ದ ಈ ಡಾಕ್ಟರೇಟ್‌ಗಳು ಉದ್ಯಮಿಗಳು, ರಾಜಕಾರಣಿಗಳು, ಸಿನೆಮಾ ನಟರಂಥವರ ಪಾಲಾಗುತ್ತಿರುವುದೇ ಇದಕ್ಕೆ ಕಾರಣ ಹಾಗೆಂದು ಇಂಥವರಿಗೆ ಡಾಕ್ಟರೇಟ್ ಕೊಡಬಾರದು ಎಂದು ಅಲ್ಲ. ಅದರೆ, ಅವರ ಸಾಧನೆ ಏನು? ಎನ್ನುವುದನ್ನು ಸಮಾಜ ಅರಿತಿರಬೇಕು.
ಹಗರಣ ಮಾಡಿ ಜೈಲಿಗೆ ಹೋದ ಮುಖಂಡನಿಗೆ, ಒಂದಷ್ಟು ಕಮರ್ಶಿಯಲ್ ಚಿತ್ರಗಳಲ್ಲಿ ನಟಿಸಿದ ನಾಯಕನಿಗೆ, ಕೋಟಿಗಟ್ಟಲೆ ದುಡ್ಡು ಮಾಡಿಕೊಂಡಿರುವ ಉದ್ಯಮಿ ಕುಳಗಳಿಗೆ, ಸಾಮಾಜಸೇವೆಯ ಹೆಸರಿನಲ್ಲಿ ಒಂದಷ್ಟು ಹೆಸರುಮಾಡಿದವರಿಗೆ, ತಲೆಯಮೇಲಿನ ಮಾಸ ಆರದವರಿಗೆ ಡಾಕ್ಟರೇಟ್ ಕೊಟ್ಟರೆ ಆಗ ಅನುಮಾನ ಮೂಡುವುದು ಸಹಜ.
ಈಗ ಗೌರವ ಡಾಕ್ಟರೇಟ್ ಪಡೆಯುವುದೆಂದರೆ ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್‍ಟ್ ಪಡೆಯುವುದಕ್ಕಿಂತ ಸುಲವಾಗಿದೆ. ಪ್ಲೆಕ್ಸ್ ಬೋರ್ಡ್ ಮೇಲೆ ಮನಸ್ಸಿಗೆ ಬಂದಂತೆ ಬರೆಯಿಸಿಕೊಂಡಷ್ಟೇ ಸಲೀಸು. ಅಕ್ಷರದ ಗಂಧಗಾಳಿ ಇಲ್ಲದವರೂ ಗೌರವ ಡಾಕ್ಟರೇಟ್ ಪಡೆದುಕೊಳ್ಳಬಹುದು. ಇಂಟರ್‌ನೆಟ್ ಮೂಲಕ ಗೌರವ ಡಾಕ್ಟರೇಟ್ ಪಡೆದುಕೊಳ್ಳುವುದಂತೂ ಇನ್ನೂ ಸುಲಭ. ನೆಟ್‌ನಲ್ಲಿ ಫಾರ್ಮ್ ಭರ್ತಿ ಮಾಡಿ, ಕ್ರೆಡಿಟ್ ಕಾರ್ಡ್ ಮೂಲಕ ಒಂದಷ್ಟು ರೂಪಾಯಿ ಪಾವತಿ ಮಾಡಿದರೆ ಕ್ಷಣಾರ್ಧದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತದೆ. ಬಣ್ಣದ ಪ್ರಿಂಟೌಟ್ ತೆಗೆಸಿ, ಪ್ರೇಮು ಹಾಕಿ ಗೋಡೆಗೆ ನೇತು ಹಾಕಿಕೊಂಡರೆ ಡಾಕ್ಟರ್ ಆದಂತೆ. ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡಿನಲ್ಲಿ ಡಾ’ ಎಂದು ಬರೆದುಕೊಂಡು, ಪತ್ರಿಕೆಯಲ್ಲಿ ಎರಡು ಸಲ ‘ಡಾ.’ ಎಂದೇ ಪ್ರಿಂಟಾದರೆ ಡಾಕ್ಟರ್ ಉಪಾಧಿಕಾಯಂ.
ಇಂಟರ್‌ನೆಟ್‌ನಲ್ಲಿ ಈ ರೀತಿ ಗೌರವ ಡಾಕ್ಟರೇಟ್ ನೀಡುವ ಸಾವಿರಾರು ನಕಲಿ ವಿಶ್ವವಿದ್ಯಾಲಯಗಳು ಕಾಣಸಿಗುತ್ತವೆ. ದುಡ್ಡು ಪಡೆದು ಗೌರವ ಡಾಕ್ಟರೇಟ್ ನೀಡುವುದಕ್ಕೆ ಮಾತ್ರ ಇವುಗಳ ಅಸ್ತಿತ್ವ. ಈ ಕೊಟ್ಟಿ ಅಸ್ತಿತ್ವದಲ್ಲೇ ಇಲ್ಲದ, ಬೋರ್ಡೋ ಇಲ್ಲದ, ಅಡ್ರೆಸ್ ಇಲ್ಲದ ವಿವಿಗಳು ನೀಡುವ ಗೌರವ ಡಾಕ್ಟರೇಟನ್ನು ಅನೇಕರು ತಮ್ಮ ಹೆಸರಿನೊಂದಿಗೆ ಅಂಟಿಸಿಕೊಂಡು ಹುಸಿ ಖುಷಿಯಲ್ಲಿ ಬೀಗುತ್ತಿರುತ್ತಾರೆ.
ಹಾಗೆಂದು ಈ ದಂಧೆಯ ಬಗ್ಗೆ ಯಾರಿಗೂ ಅರಿವಿಲ್ಲ ಎಂದು ಭಾವಿಸಬೇಕಾಗಿಲ್ಲ ಕರ್ನಾಟಕದಲ್ಲೇ ಇಂಥ ಡಾಕ್ಟರ್ ದಂಧೆಯ ಬಗ್ಗೆ ಬಹಳ ದೂರುಗಳು ಬಂದಿದ್ದವು. ನಾಲ್ಕು ವರ್ಷದ ಹಿಂದೆ ನಮ್ಮ ವಿಧಾನಸಭೆಯಲ್ಲೂ ನಕಲಿ ಡಾಕ್ಟರೇಟ್‌ಗಳ ಬಗ್ಗೆ ಗಂಭೀರ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ಸರಕಾರ ಹೆಸರಿನ ಮುಂದೆ ಡಾಕ್ಟರ್ ಹಾಕಲು ಕೆಲವು ನಿಯಮಗಳನ್ನು ರಚಿಸಿತ್ತು. ಸುಪ್ರೀಂ ಕೋರ್ಟ್ ಡಾಕ್ಟರ್ ಎಂದು ಹಾಕಿಸಿಕೊಳ್ಳಲು ಮಾರ್ಗಸೂಚಿ ನೀಡಿದೆ. ಆದರೆ ಯಾರೂ ಇಂಥ ನಿಯಮಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದು ಬೇರೆ ವಿಚಾರ.
ಈ ನಕಲಿ ಗೌ.ಡಾ.ಗಳನ್ನು ನೀಡುವ ಕರಾಳ ದಂಧೆ ಹಾವೇರಿಜಿಲ್ಲೆಗೂ ವ್ಯಾಪಿಸಿತ್ತು. ಇಲ್ಲಿನ ಕೆಲವು ಉಪನ್ಯಾಸಕರು, ಏನೇನೋ ದಾನಮಾಡಿರುವುದಾಗಿ ಹೇಳಿಕೊಳ್ಳುವ ಸಮಾಜ ಸೇವಕರು, ತಮ್ಮನ್ನೆ ತಾವು ಕೃಷಿ ತಜ್ಞರು, ಆ ತಜ್ಞರು, ಇ ತಜ್ಞರು ಎಂದು ಹೇಳಿಕೊಳ್ಳುವ ಕೆಲವರು ನಕಲಿ ಗೌ.ಡಾ.ಗಳನ್ನು ಪಡೆದುಕೊಂಡು ತಮ್ಮನ್ನು ತಾವು ಗೌರವ ಡಾಕ್ಟರೇಟ್ ಪಡೆದವರು ಎಂದು ಕೊಂಡು ತಮ್ಮ ಹೆಸರಿನ ಹಿಂದೆ ಡಾ. ಎಂದು ಸೇರಿಸಿಕೊಂಡು ಮೆರದಾಡಿದ್ದರು. ಈಬಗ್ಗೆ ಕೌರವದಿನಪತ್ರಿಕೆಯಲ್ಲಿ ನಕಲಿ ಗೌ.ಡಾ.ಗಳನ್ನು ಕೊಡಿಸುವ ಹಾಗೂ ಪಡೆದುಕೊಳ್ಳುವ, ಪಡೆದುಕೊಂಡವರ ಬಗ್ಗೆ ವಿವಿರವಾದ ವರದಿಯನ್ನು ನಾನು ಬಿತ್ತರಿಸಿದೆ. ಆವೇಳೆ ಕೆಲವರು ತಮ್ಮ ಹೆಸರಿನಿದ ಹಿಂದಿನ ಡಾ.ವನ್ನು ತಗೆದುಹಾಕಿದ್ದರು. ಇನ್ನು ಕೆಲವರು ಡಾ.ತಮ್ಮನ್ನು ಈಗಲೂ ಸಹ ಡಾ. ಎಂದು ಹೆಸರು ಹಾಕಿಕೊಂಡು ಓಡಾಡುತ್ತಿದ್ದಾರೆ. ಕೆಲವು ನಕಲಿ ಗೌ.ಡಾ.ಗಳು ನನಗೆ ಪೋನ ಕರೆಮಾಡಿ ನಾವು ಡಾ. ಎಂದು ಹಾಕಿಕೊಂಡರೇ ನಿಮಗೇನು ಕಷ್ಟ ನಮ್ಮ ತಂಟೆಗೆ ಬರಬೇಡಿ ಎಂದು ಬೆದರಿಕೆಯನ್ನು ಹಾಕಿದ್ದರು. ಈರೀತಿಯ ಬೆದರಿಕೆಗಳನ್ನು , ಮಾನನಷ್ಟಕೊಕದ್ದಮೆಗಳನ್ನು ಸಾಕಷ್ಟು ಎದುರಿಸಿರುವ ನನಗೆ ಇದೇನು ಹೊಸದಾಗಿರಲಿಲ್ಲ.
ಆದರೆ ಇತ್ತೀಚೆಗೆ ಮತ್ತೆ ಈ ನಕಲಿ ಗೌ.ಡಾ.ಗಳ ಹಾವಳಿ ಹಾವೇರಿಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ೧೦ಕ್ಕೂ ಹೆಚ್ಚು ಜನರು ಈ ನಕಲಿ ಗೌ.ಡಾ. ಗೌನು ಧರಿಸಿಬಂದಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ನಾನು ಹೇಳಿರುವ ವಿಚಾರಗಳು ನಕಲಿ ಡಾಕ್ಟರೇಟ್‌ಗೆ ಸಂಬಂಧಿಸಿದ್ದೆ ಹೊರತು ಸರಕಾರದ ಅಧೀನದಲ್ಲಿರುವ ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಕೊಡಮಾಡುವ ಗೌರವ ಡಾಕ್ಟರೇಟ್ ಕುರಿತಾಗಿ ಅಲ್ಲ. ಆದರೆ, ಈಗೀಗ ಈ ವಿವಿಗಳು ಕೋಡುವ ಡಾಕ್ಟರೇಟ್ ಗೌರವ ಕೂಡ ವಿವಾದಕ್ಕೊಳಗಾಗುತ್ತಿರುವುದು ಮಾತ್ರ ದುರಂತ ಬೆಳವಣಿಗೆ.
ಈಗ ಯಾರಾದರೂ ತನಗೆ ಡಾಕ್ಟರೇಟ್ ಸಿಕ್ಕಿದೆ ಎಂದು ಹೇಳಿಕೊಂಡರೆ ಅದು ಎಷ್ಟು ದುಡ್ಡು ಕೊಟ್ಟು ಖರೀದಿಸಿದ್ದು ಎಂಬ ಅನುಮಾನ ಉಂಟಾಗುತ್ತದೆ. ರಾಜಕಾರಣಿಗಳು, ಪೆಟ್ರೋಲ್ ಬಂಕ್ ಮಾಲೀಕರು, ಗುತ್ತಿಗೆದಾರರು, ಉದ್ಯಮಿಗಳು, ಸಿನೆಮಾ ನಟ-ನಟಿಯರು ಹೀಗೆ ಯಾರು ಬೇಕಾದರೂ ಗೌರವ ಡಾಕ್ಟರೇಟ್ ಪದವಿ ಪಡೆದುಕೊಳ್ಳುತ್ತಾರೆ. ಕೆಲವರು ದುಡ್ಡುಕೊಟ್ಟು ಹೊಡೆದುಕೊಳ್ಳುತ್ತಾರೆ. ಕೆಲವರಿಗೆ ತಮ್ಮ ಹೆಸರಿನ ಹಿಂದೆ ಬಿರುದನ್ನು ಅಂಟಿಸಿಕೊಳ್ಳುವ ಚಪಲ. ಏನೂ ಮಾಡಲಾಗದಿದ್ದರೂ, ತಾನೇನೋ ಮಹಾನ್ ಸಾಧನೆ ಮಾಡಿದ್ದೇನೆಂದು ಜಗತ್ತಿಗೆ ಸಾರಿ ಹೇಳಬೇಕೆಂಬ ಒಬ್ಬ ಬಡಾಯಿಕೋರನ ವಾಂಭೆ ಅವರಲ್ಲಿ ಉತ್ಕಟವಾಗಿರುತ್ತದೆ.
ಇಂಥವರೇ ಈ ಡಾಕ್ಟರ್ ದಂಧೆಯ ದಲ್ಲಾಳಿಗಳ ಕೈಗೆ ಸುಲಭವಾಗಿ ಸಿಗುವ ಮಿಕಗಳು ಬೆಂಗಳೂರು, ಮಂಗಳೂರಿನಂಥ ನಗರಗಳಲ್ಲಿ ಇಂಥ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ಸಮಾರಂಭಗಳು ಆಗಾಗ ನಡೆಯುತ್ತಿರುತ್ತವೆ. ಅಸಲಿಗೆ ಇಂಥ ಡಾಕ್ಟರೇಟ್ ಪದವಿ ಕೊಡಬೇಕಾದರೆ ಒಂದು ವಿಶ್ವವಿದ್ಯಾಲಯ ಎಂದು ಇರಬೇಕೆಂದೇನೂ ಇಲ್ಲ ಈಗ ಡಾಕ್ಟರೇಟ್ ಕೊಡುತ್ತಿರುವ ವಿಶ್ವವಿದ್ಯಾಲಯಗಳ ಹೆಸರು ಹೆಚ್ಚಿನವರಿಗೆ ಗೊತ್ತೇ ಇರುವುದಿಲ್ಲ. ಇಷ್ಟಕ್ಕೂ ಇಂಥ ವಿವಿಗಳು ಅಸ್ತಿತ್ವದಲ್ಲೇ ಇರುವುದಿಲ್ಲ. ಇವೆಲ್ಲ ವೆಬ್‌ಸೈಟ್ ವಿವಿಗಳಷ್ಟೇ ಏನೇನೋ ಆಕರ್ಷಕ ಹೆಸರಿನ ವೆಬ್‌ಸೈಟ್‌ಗಳನ್ನು ಮಾಡಿಕೊಂಡು ದಂಧೆ ಮಾಡುವ ಹಲಾಲುಕೋರತನ ಇದು.
ಇಂಟರ್‌ನೆಟ್‌ನಲ್ಲಿ ಈ ರೀತಿ ಗೌರವ ಡಾಕ್ಟರೇಟ್ ನೀಡುವ ಸಾವಿರಾರು ನಕಲಿ ವಿಶ್ವವಿದ್ಯಾಲಯಗಳು ಕಾಣಸಿಗುತ್ತವೆ. ದುಡ್ಡು ಪಡೆದು ಗೌರವ ಡಾಕ್ಟರೇಟ್ ನೀಡುವುದಕ್ಕೆ ಮಾತ್ರ ಇವುಗಳ ಅಸ್ತಿತ್ವ ಈ ಕೊಟ್ಟಿ ಅಸ್ತಿತ್ವದಲ್ಲೇ ಇಲ್ಲದ ಬೋರ್ಡೋ ಇಲ್ಲದ ಆದ್ರೆ ಇಲ್ಲದ ವಿವಿಗಳು ನೀಡುವ ಗೌರವ ಡಾಕ್ಟರೇಟನ್ನು ಅನೇಕರು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡು ಅದೇನು ಸಂತೋಷ ಅನುಭವಿಸುತ್ತಾರೋ ಗೊತ್ತಿಲ್ಲ. ಆದರೆ ಈ ನಕಲಿ ಗೌ.ಡಾ.ಗಳನ್ನು ಮಾರುವ ದಂಧೆಕೋರರಿಗೆ ಬಡಪಾಯಿಗಳು ಕೊಳ್ಳುವ ಮೂಲಕ ಬಕರಾಗಳಾಗುತ್ತಿರುವುದು ದರಂತವೇ ಸರಿ.

Date: