
ಡೆಸ್ಕ್‌ಟಾಪ್ ಪಬ್ಲಿಷಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಹಾವೇರಿ : ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿಯಲ್ಲಿ ಆಗಸ್ಟ್ ಮಾಹೆಯಲ್ಲಿ ನಿರುದ್ಯೋಗಿ ಯುವಕರಿಗೆ ೪೫ ದಿನಗಳ ಡೆಸ್ಕ್‌ಟಾಪ್ ಪಬ್ಲಿಷಿಂಗ್ ತರಬೇತಿ ಆಯೋಜಿಸಲಾಗಿದೆ.
ವಿಸಿಟಿಂಗ್ ಕಾರ್ಡ್, ಮದುವೆ ಆಮಂತ್ರಣ ಪತ್ರಿಕೆ, ಪಾಸ್‌ಪೋರ್ಟ್ ಆಳತೆ ಫೋಟೋ ಎಡಿಟಿಂಗ್, ಅಲ್ಬಮ್ ಡಿಸೈನಿಂಗ್ ಪ್ಲೆಕ್ಸ್ ಬೋರ್ಡ್, ಬ್ಯಾನರ್ ಇತ್ಯಾದಿ ತರಬೇತಿ ನೀಡಲಾಗುವುದು. ಜಿಲ್ಲೆಯ ೧೮ ರಿಂದ ೪೫ ವರ್ಷದೊಳಗಿನ ಯುವಕರು ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಬ್ಯಾಂಕ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿ, ಡಿ.ಸಿ ಆಫೀಸ್ ಕಟ್ಟಡದ ಹಿಂಭಾಗ, ದೇವಗಿರಿ- ಹಾವೇರಿ, ಮೊ. ೯೬೧೧೬೪೫೯೦೭ ಹಾಗೂ ೮೬೬೦೨೧೯೩೭೫ ಸಂಪರ್ಕಿಸಲು ಕೋರಲಾಗಿದೆ.

