
ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ: ಸತೀಶ ಕುಲಕರ್ಣಿ
ಹಾವೇರಿ: ಸಾಧನೆಯ ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತವೆ. ಅದನ್ನು ಉಳಿಸಿಕೊಳ್ಳುವ ಕರ್ತವ್ಯ ನಮ್ಮದಾಗಬೇಕು. ಯಾವುದೇ ಲೇಖಕರಿಗೆ ಪ್ರಶಸ್ತಿಗಳು ಬಂದ ನಂತರ ಅವರ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆಯೆಂದೇ ಅರ್ಥ. ಇದನ್ನು ಅರಿತು ಮುಂದುವರಿಯಬೇಕು ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು. ಸೆ.೨೩ರಂದು ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕ್ರತ ಹಿರಿಯ ಪತ್ರಕರ್ತ, ಸಾಹಿತಿ ಮಾಲತೇಶ ಅಂಗೂರ ಅವರನ್ನು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಿಸರಕ್ಕೆ ಸಂಬಂಧಿಸಿದ ಪ್ರಾಣಿ-ಪಕ್ಷಿಗಳ ಜೀವ ವೈವಿಧ್ಯತೆಯನ್ನು ವಾಸ್ತವ ಜಗತ್ತಿಗೆ ತೆರೆದುಕೊಳ್ಳುವಂತೆ ಬರೆಯುವುದು ಬಹಳ ಕಷ್ಟದ ಕೆಲಸ, ಅಂಗೂರ ಅವರು ತಮ್ಮ ವೃತ್ತಿ ಬದುಕಿನ ಜೊತೆಗೆ ಇಲ್ಲಿನ ಜೀವ ವೈವಿಧ್ಯತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಚಳವಳಿಗಳ ಜತೆಜತೆಗೇ ಬರಹ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು, ಅದೇ ಹಾದಿಯನ್ನು ಅನುಸರಿಸುತ್ತಿರುವ ಅವರಿಗೆ ಪರಿಸರ ಪತ್ರಿಕೋಧ್ಯಮ ಪ್ರಶಸ್ತಿ ಸಂದಿರುವು ಶ್ಲಾಘನೀಯ ಎಂದರು.
ಇನ್ನೋರ್ವ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ ಪರಿಸರ, ಪ್ರಾಣಿ-ಪಕ್ಷಿಗ: ಬಹಳ ಸೂಕ್ಷ್ಮವಾಗಿದ್ದು, ಈ ಬಗ್ಗೆ ಆಳವಾದ ಅಧ್ಯಯನಮಾಡಿದಾಗ ಮಾತ್ರ ಬರವಣಿಗೆ ಸಾಧ್ಯವಾಗುತ್ತದೆ. ಅಂಗೂರ ಅವರು ತಮ್ಮ ಕಾಡು -ಮೇಡು ಕೃತಿಯನ್ನು ವನ್ಯಜೀವಿ ಹಾಗೂ ಮನುಷ್ಯ ಸಂಬಂಧದಬಗ್ಗೆ ಸೂಕ್ಷ್ಮವಾಗಿ ತಿಳಿಸುವ ಮೂಲಕ ನಮ್ಮ ನೆಲದ ಜೀವ ವೈವ ವೈವಿಧ್ಯತೆಯನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಲತೇಶ ಅಂಗೂರ ಪರಿಸರ ಉಳಿದರೇ ನಾವು ಉಳಿಯುತ್ತೇವೆ, ಪರಿಸರ ನಾಶವಾದರೇ ನಮ್ಮ ನಾಶವನ್ನು ನಾವೇ ತಂದು ಕೊಂಡಂತಾಗುತ್ತದೆ. ಪತ್ರಿಕೋದ್ಯಮದ ಜೊತೆಗೆ ಪ್ರಾಣಿ-ಪಕ್ಷಿಗಳನ್ನು ಸೆರಹಿಡಿಯುವುದು ನನ್ನ ಹವ್ಯಾಸವಾಗಿದ್ದು, ಈ ಹವ್ಯಾಸವನ್ನು ಗುರುತಿಸಿ ರಾಜ್ಯ ಸರ್ಕಾರ ೨೦೨೦ನೇ ಸಾಲಿನ ಪರಿಸರ ಪತ್ರಿಕೊದ್ಯಮ ಪ್ರಶಸ್ತಿ ನೀಡಿ ಗೌರವಿಸಿದೆ. ಜೀವಪರ, ಜನಪರ ಕಾಳಜಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆ ಎನ್ನಿಸಿದೆ, ಈ ಪ್ರಶಸ್ತಿಗೆ ಹಾವೇರಿನೆಲಕ್ಕೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ನಗರಸಭೆಯ ಸದಸ್ಯ, ಮಾಜಿ ಅಧ್ಯಕ್ಷ ಐ.ಯು.ಪಠಾಣ ಮಾತನಾಡಿ ನಮಗೆ ಗೊತ್ತೆ ಇರದ ಪ್ರಾಣಿ-ಪಕ್ಷಿಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆಹಿಡಿದು ನಾಡಿಗೆ ಪರಿಚಯಿಸುವ ಕಾರ್ಯದ ಮೂಲಕ ಹಾವೇರಿನೆಲಕ್ಕೆ ಅಂಗೂರ ಗೌರವ ತಂದಿದ್ದಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮ ಅಡಕಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಈರಣ್ಣ ಸಂಗೂರ, ಹಾವೇರಿ ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭುಗೌಡ ಬಿಷ್ಟಣಗೌಡ್ರ, ನಗರಸಭೆ ಮಾಜಿ ಸದಸ್ಯ ರಾದ ಬಾಬುಸಾಬ ಬೊಮಿನಗಾರ, ಶಿವರಾಜ ಮತ್ತಿಹಳ್ಳಿ, ವೆಂಕಟೇಶ ಇಟಗಿ, ಜಗದೀಶ ಕನವಳ್ಳಿ, ಜಿಲ್ಲಾ ವಕ್ಷಬೋರ್ಡಿನ ಮಾಜಿ ಅಧ್ಯಕ್ಷ ಅಲ್ಲಾಧ್ಯಕ್ಷ ತಿಮ್ಮಾಪೂರ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಗದೀಶ ಸವಣೂರ, ಅಲ್ತಾಫ್ ಬೋರಗಲ, ಸುನೀಲ ದಂಡೆಮ್ಮನವರ, ರಿಯಾಜ್‌ಅಹ್ಮದ್ ಶಿಡಗನಾಳ, ಅಮೀರಜಾನ ದೇಪಾರಿ, ಎಸ್.ಎಸ್. ಕೂಡ್ಲಪ್ಪನವರ, ವಿನಯಕುಮಾರ ಪಟ್ಟೇದ, ಅಪ್ಪಾಲಾಲ ಯಾದವಾಡ, ಶಂಕರ ಮೇಹರವಾಡ,ರಾಘವೇಂದ್ರ ಬಾಸೂರ, ಉಮೇಶ ವಾಗ್, ಇಬ್ರಾಯಿಂಸಾಬ ಹವಾಲ್ದಾರ, ಎಸ್.ಎಫ್.ಸುತಾರ, ದಾನೇಶಪ್ಪ ಕೆಂಗೋಂಡ, ಹನುಮಂತಪ್ಪ ಬಾಳಿಕಾಯಿ, ಈರಣ್ಣ ಸವಣೂರ ಸೇರಿದಂತೆ ಆನೇಕ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

