ಮಣ್ಣಿನ ಲಾರಿ ಬಿಡುಗಡೆಗೆ ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಹನುಮಂತ ಶಿರಹಟ್ಟಿ ಬಂಧನ

Date:

ಹಾವೇರಿ: ಮಣ್ಣಿನ ಟಿಪ್ಪರ್‌ಲಾರಿಗಳ ಬಿಡುಗಡೆಗೆ ಶುಕ್ರವಾರ ಲಂಚ ಸ್ವೀಕರಿತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಗೆ ಜಿಲ್ಲೆಯ ರಾಣೆಬೆನ್ನೂರು ತಹಶೀಲ್ದಾರ ಬಲೆಗೆ ಬಿದ್ದಿದ್ದು, ಈವೇಳೆ ತಹಶೀಲ್ದಾರ ವಾಹನ ಚಾಲಕನನ್ನು ಸಹ ಲೋಕಾಯುಕ್ತರು ಬಂಧಿಸಿದ್ದಾರೆ.
ರಾಣೆಬೆನ್ನೂರಿನ ಮಂಜುನಾಥ ನಾಗಪ್ಪ ವಾಲೀಕಾರ ತಮ್ಮ ಟಿಪ್ಪರ್ ಲಾರಿಗಳಲ್ಲಿ ಗಂಗಾಪುರದಿಂದ ರಾಣೆಬೆನ್ನೂರಿನ ಶನೈಶ್ವರ ಮಠಕ್ಕೆ ಮಣ್ಣನ್ನು ಸಾಗಿಸುವಾಗ ತಹಶೀಲ್ದಾರ ಹನುಮಂತ ಶಿರಹಟ್ಟಿ ಅವರು ಲಾರಿಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಟಿಪ್ಪರ್ ಲಾರಿ ಡ್ರೈವರ್ ಮೊಬೈಲ್ ಹಾಗೂ ಗಾಡಿ ಕೀಲಿಗಳನ್ನು ಕಸಿದುಕೊಂಡು, ರೂ ೧೦,೦೦೦/- ಗಳಂತೆ ಎರಡೂ ವಾಹನಗಳಿಗೂ ರೂ. ೨೦,೦೦೦/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಲಾರಿ ಚಾಲಕ ಹಾಗೂ ಮಾಲಿಕ ಚೌಕಾಸಿ ಮಾಡಿದ ನಂತರ ರೂ ೧೨,೦೦೦/- ಗಳಿಗೆ ಒಪ್ಪಿ ಜ.೦೫ ರಂದು ಡ್ರೈವರ್ ಮಾಲತೇಶ ಮಡಿವಾಳರ್ ಮೂಲಕ ರೂ ೧೨,೦೦೦/- ಲಂಚದ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿ ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರಅವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರಾದ ಆಂಜನೇಯ ಎನ್ ಎಚ್, ಮಂಜುನಾಥ ಪಂಡಿತ್ ಪಿ ಎನ್, ಸಿಬ್ಬಂದಿ ಸಿ.ಎಮ್. ಬಾರ್ಕಿ, ಎಮ್.ಕೆ.ನದಾಫ, ಟಿ.ಇ. ತಿರುಮಲೆ, ಬಿ.ಎಮ್. ಕರ್ಜಗಿ, ಎಮ್.ಕೆ. ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್.ಎನ್. ಕಡಕೋಳ, ಬಿ.ಎಸ್. ಸಂಕಣ್ಣನವರ, ಎನ್.ಬಿ. ಪಾಟೀಲ್, ಎ.ಜಿ. ಶೆಟ್ಟರ್, ಎಮ್.ಸಿ.ಅರಸೀಕೆರೆ, ಎಮ್.ಎಸ್. ಕೊಂಬಳಿ, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸದರಿ ಆರೋಪಿತರನ್ನು ರಾಣೆಬೆನ್ನೂರ ನಗರದ ವೀರಭದ್ರೇಶ್ವರ ಲೇಔಟ್‌ನಲ್ಲಿರುವ ತಹಶೀಲ್ದಾರ ವಾಸ ಇರುವ ಬಾಡಿಗೆ ಮನೆಯಲ್ಲಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...