
ಮೈಲಾರ ಮಹಾದೇವಪ್ಪ ಟ್ರಸ್ಟ್ಗೆ ಸಂಜೀವಕುಮಾರ ನೀರಲಗಿ ನೇಮಕ
ಹಾವೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿರುವ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ಗೆ ನೂತನ ಅಧ್ಯಕ್ಷರು, ಸದಸ್ಯರುಗಳನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಆದೇಶ ಹೊರಡಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿ ಹಾವೇರಿಯ ಸಂಜೀವಕುಮಾರ ನೀರಲಗಿ, ಸದಸ್ಯರಾಗಿ ಬೆಂಗಳೂರಿನ ಎಚ್.ಸಿ.ಮಹದೇವಪ್ಪ, ಪ್ರೇಮಾನಂದ ಲಕ್ಕಣ್ಣನವರ, ಕೊರಡೂರಿನ ಡಾ.ಜಿ.ಪಿ.ಕಲಕೋಟಿ ರಾಣೇಬೆನ್ನೂರಿನ ಮನೋಹರ ಮಲ್ಲಾಡದ, ಹಾನಗಲ್ಲನ ದೀಪಾ ಗೋನಾಳ, ರಟ್ಟಿಹಳ್ಳಿಯ ಡಾ.ನಿಂಗಪ್ಪ ಚಳಗೇರಿ, ಬ್ಯಾಡಗಿಯ ಗಣೇಶ ಪೂಜಾರ, ಮಲಗುಂದದ ಶಿವು ತಳವಾರ, ಯತ್ತಿನಹಳ್ಳಿಯ ಅಬ್ದುಲ್ ಹುಬ್ಬಳ್ಳಿ ಅವರನ್ನು ಸದಸ್ಯರನಾಗಿ ಹಾಗೂ ಕಾರ್ಯದರ್ಶಿಗಳಾಗಿ ಹಾವೇರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

