
ರಾಜೇಶ್ವರಿ ಬಿಷ್ಟನಗೌಡರಿಗೆ ದಾದಾ ಸಾಹೇಬ್ ಫಾಲ್ಕೆ ಸೇವಾರತ್ನ ಪ್ರಶಸ್ತಿ
ಹಾವೇರಿ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾವೇರಿಯ ರಾಜೇಶ್ವರಿ ಬಿಷ್ಟನಗೌಡ್ರು ಇವರಿಗೆ ಸಂಗೀತ ಮತ್ತು ಸಮಾಜ ಸೇವೆಗೆ ಕ್ಷೇತ್ರದಲ್ಲಿನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಸೇವಾ ರತ್ನ ಪ್ರಶಸ್ತಿಯನ್ನು ದಾದಾಸಾಹೇಬ್ ಫಾಲ್ಕೆ ಅವರ ಮೊಮ್ಮಗ ಚಂದ್ರಶೇಖರ ಫಸಲ್ಕರ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ಚಲನ ಚಿತ್ರೋದ್ಯಮ ಸಂಯೋಜಕ ಎಸ್.ಕೆ.ಆನಂತ, ಕಾರ್ಯಕ್ರಮ ಆಯೋಜಕ ಬಸವರಾಜ ಎಂ, ಚಲನಚಿತ್ರ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ, ದಾದಾ ಸಾಹೇಬ್ ಪಾಲ್ಕೆ ಅವರ ಮೊಮ್ಮಗಳು ನೇಹ ಬಂಡೋಪಾಧ್ಯಾಯ ಮತ್ತಿತರರು ಇದ್ದರು. ರಾಜೇಶ್ವರಿ ಅವರಿಗೆ ಗಣರಾಜ್ಯೋತ್ಸವ ದಿನದಂದು ಹಾವೇರಿ ಜಿಲ್ಲಾಡಳಿತ ಸಮಾಜ ಸೇವೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿಗೌರವಿಸಿತ್ತು.

