ವಾಹನ ಬಿಡುಗಡೆಗೆ ಹಣದ ಬೇಡಿಕೆ ಇಟ್ಟ ಪೊಲೀಸ್ ರಮೇಶ ಭಜಂತ್ರಿ
ಅಮಾನತು
ಹಾವೇರಿ: ವಾಹನ ಬಿಡುಗಡೆಗೆ ಸಾರ್ವಜನಕರಿಂದ ಹಣದ ಬೇಡಿಕೆಯನ್ನು ಇಟ್ಟ ಜಿಲ್ಲೆಯ
ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ರಮೇಶ ಭಜಂತ್ರಿಯನ್ನು ಅಮಾನತು ಗೊಳಿಸಿ ಜಿಲ್ಲಾ ಪೊಲೀಸ್ ಗರಿಷ್ಠ ಅಂಶುಕುಮಾರ ನ.೨೩ರಂದು ಗುರುವಾರ ರಾತ್ರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಮೇಶ ಭಜಂತ್ರಿ ಪ್ರಕರಣವೊಂದರ ವಾಹನವನ್ನು ಬಿಡುಗಡೆ ಮಾಡಲು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವ್ಯಾಪಕವಾಗಿ ಚರ್ಚಿಯಾಗಿತ್ತು.
ಜವಾಬ್ದಾರಿಯುತ ಹುದ್ದೆಯಲ್ಲಿರುವ ಸದರಿ ಸಿಹೆಚ್ ಸಿ ರಮೇಶ ಭಜಂತ್ರಿ
ಗಂಭೀರ ದುರ್ನಡತೆಯನ್ನು ಪ್ರದರ್ಶಿಸಿರುತ್ತಾರೆ.
ಆದ್ದರಿಂದ ರಮೇಶ ಭಜಂತ್ರಿ, ಸಿಹೆಚ್ ಸಿ-631, ಶಿಗ್ಗಾವಿ ಪೊಲೀಸ್ ಠಾಣೆ ಅವರನ್ನು ತಕ್ಷಣ ಸೇವೆಯಿಂದ ಅಮಾನತ್ತು ಮಾಡಲಾಗಿದ್ದು, ಇಲಾಖಾ ವಿಚಾರಣಾ ನಡೆಸಿ ಅವರ ಮೇಲೆ ಮುಂದಿನಕಾನೂನು ಕ್ರಮ ಜರುಗಿಸಲಾಗುವದುಎಂದು ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ