ವಿಧಾನಸಭಾ ಚುನಾವಣೆ- ಹಾವೇರಿ ಜಿಲ್ಲೆಯಲ್ಲಿ ಶೇ. ೮೧.೫೦ ರಷ್ಟು ಮತದಾನ ಮೇ ೧೩ ರಂದು ಮತ ಎಣಿಕೆ – ಬಿಗಿಭದ್ರತೆಯಲ್ಲಿ ಮತಯಂತ್ರ

Date:

ವಿಧಾನಸಭಾ ಚುನಾವಣೆ- ಹಾವೇರಿ ಜಿಲ್ಲೆಯಲ್ಲಿ ಶೇ. ೮೧.೫೦ ರಷ್ಟು ಮತದಾನ
ಮೇ ೧೩ ರಂದು ಮತ ಎಣಿಕೆ – ಬಿಗಿಭದ್ರತೆಯಲ್ಲಿ ಮತಯಂತ್ರ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಮೇ ೧೦ ರಂದು ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ.೮೧.೫೦ ರಷ್ಟು ಮತದಾನವಾಗಿದೆ. ಮೇ ೧೩ರ ಬೆಳಿಗ್ಗೆ ೮ ರಿಂದ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಜರುಗಲಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಮತ ಯಂತ್ರಗಳನ್ನು ಸ್ಟ್ರಾಂಗ್‌ರೂಂನಲ್ಲಿ ಇರಿಸಲಾಗಿದೆ.

ಹಾನಗಲ್ ಕ್ಷೇತ್ರದಲ್ಲಿ ಶೇ.೮೪,

ಶಿಗ್ಗಾಂವ ಕ್ಷೇತ್ರದಲ್ಲಿ ಶೇ.೭೯.೯೪,

ಹಾವೇರಿ ಕ್ಷೇತ್ರದಲ್ಲಿ ಶೇ.೭೭.೧೧,

ಬ್ಯಾಡಗಿ ಕ್ಷೇತ್ರದಲ್ಲಿ ಶೇ.೮೩.೬೦,

ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮೪.೮೭,

ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೮೦.೫೮ ರಷ್ಟು ಮತದಾನವಾಗಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮೪.೮೭ ರಷ್ಟು ಹೆಚ್ಚು ಮತದಾನವಾದರೆ ಹಾವೇರಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.೭೭.೧೧ ರಷ್ಟು ಮತದಾನ ದಾಖಲಾಗಿದೆ.
ಜಿಲ್ಲೆಯ ೬,೬೫,೬೧೭ ಪುರುಷರು, ೬,೩೭,೦೧೯ ಮಹಿಳೆಯರು ಹಾಗೂ ೪೭ ಇತರೆ ಒಳಗೊಂಡಂತೆ ೧೩,೦೨,೬೮೩ ಮತದಾರರ ಪೈಕಿ, ೫,೫೨,೭೦೧ ಪುರುಷರು, ೫,೦೮,೯೫೪ ಮಹಿಳೆಯರು ಹಾಗೂ ಇತರೆ ೧೮ ಜನರು ಒಳಗೊಂಡಂತೆ ೧೦,೬೧,೬೭೩ ಮತದಾರರು ಮತ ಚಲಾಯಿಸಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ೯೨,೮೦೭ ಪುರುಷರು, ೮೫,೧೪೦ ಮಹಿಳೆಯರು ಹಾಗೂ ಇತರೆ ಓರ್ವರು ಒಳಗೊಂಡಂತೆ ೧,೭೭,೯೪೮ ಜನರು, ಶಿಗ್ಗಾಂವ ಕ್ಷೇತ್ರದಲ್ಲಿ ೯೫,೫೧೧ ಪುರುಷರು, ೮೫,೨೦೨ ಮಹಿಳೆಯರು ಹಾಗೂ ಇತರೆ ೦೪ ಜನರು ಒಳಗೊಂಡಂತೆ ೧,೮೦,೭೧೭ ಮತದಾರರು, ಹಾವೇರಿ ಕ್ಷೇತ್ರದಲ್ಲಿ ೯೩,೯೨೮ ಪುರುಷರು, ೮೫,೮೦೦ ಮಹಿಳೆಯರು ಹಾಗೂ ಇತರೆ ೦೬ ಜನರು ಒಳಗೊಂಡಂತೆ ೧,೭೯,೭೩೪ ಮತದಾರರು, ಬ್ಯಾಡಗಿ ಕ್ಷೇತ್ರದಲ್ಲಿ ೯೦,೨೨೬ ಪುರುಷರು, ೮೪,೨೮೦ ಮಹಿಳೆಯರು ಹಾಗೂ ೦೩ ಜನರು ಒಳಗೊಂಡಂತೆ ೧,೭೪,೫೦೯ ಮತದಾರರು, ಹಿರೇಕೆರೂರು ಕ್ಷೇತ್ರದಲ್ಲಿ ೮೧,೬೭೧ ಪುರುಷರು ಹಾಗೂ ೭೬,೦೮೫ ಮಹಿಳೆಯರು ಒಳಗೊಂಡಂತೆ ೧,೫೭,೭೫೬ ಮತದಾರರು ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ೯೮,೫೫೮ ಪುರುಷರು, ೯೨,೪೪೭ ಮಹಿಳೆಯರು ಹಾಗೂ ಇತರೆ ೦೪ ಜನರು ಒಳಗೊಂಡಂತೆ ೧,೯೧,೦೦೯ ಮತದಾರರು ಮತ ಚಲಾಯಿಸಿದ್ದಾರೆ.
ನೋಡಲ್ ಅಧಿಕಾರಿಗಳ ನಿಯೋಜನೆ: ದೇವಗಿರಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಜಿಲ್ಲೆಯ ಆರು ಮತ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಈ ಭದ್ರತಾ ಕೊಠಡಿಯ ಕಣ್ಗಾವಲಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಸಾಂಖಿಕ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಆರ್ ಪಾಟೀಲ(೭೨೦೪೩೪೯೪೪೨) ಹಾಗೂ ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ಅಭಿವೃದ್ಧಿಕಾರಿ ಮಹದೇವ ಮಳಲಿ(೯೯೦೨೭೪೫೨೨೭) ಅವರನ್ನು ಮೇ ೧೦ ರಿಂದ ೧೩ರವರೆಗೆ ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೩ ಗಂಟೆವರೆಗೆ ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.
ಗೃಹ ಮಂಡಳಿ ಜಿಲ್ಲಾ ಅಧಿಖಾರಿ ಆರ್.ಬಿ.ನಂದಿ(೯೮೪೫೬೧೩೦೪೧) ಹಾಗೂ ಅಂತರ್ಜಲ ಇಲಾಖೆ ಹಿರಿಯ ಭೂವಿಜ್ಞಾನಿ ಸಂತೋಷ ಪ್ಯಾಟಿಗಾಣಿಗೇರ(೮೧೦೫೫೮೭೨೯೨) ಅವರನ್ನು ಮೇ ೧೦ ರಿಂದ ೧೩ರವರೆಗೆ ಮಧ್ಯಾಹ್ನ ೩ ರಿಂದ ರಾತ್ರಿ ೧೧ ಗಂಟೆವರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಹಾಸ್ ಮಾದಾಪುರಮಠ (೯೯೦೨೭ ೫೯೨೩೬) ಹಾಗೂ ಶಿಗ್ಗಾಂವ ಏತ ನೀರಾವರಿ ಯೋಜನೆ ಧಾರವಾಡ ವಿಭಾಗದ ಸಹಾಯಕ ಕಾರ್ಯಪಾಲಕ ಎ.ಐ.ಹುಗ್ಗಿ(೯೪೪೮೩೨೬೪೩೩) ಅವರನ್ನು ಮೇ ೧೦ ರಿಂದ ೧೩ರವರೆಗೆ ರಾತ್ರಿ೧೧ ರಿಂದ ಬೆಳಿಗ್ಗೆ ೭ ಗಂಟೆವರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹಾಗೂ ಪೊಲೀಸ್ ಹಾಗೂ ಕೇಂದ್ರ ಅರೆ ಸೇನಾಪಡೆ ಅಧಿಕಾರಿ, ಸಿಬ್ಬಂದಿಗಳನ್ನು ಪಾಳೆಯದಲ್ಲಿ ನೇಮಿಸಿ ಬಿಗಿಭದ್ರತೆ ಒದಗಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...