
ಶ್ರೀ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷ ರು, ಸದಸ್ಯರ ನೇಮಕ
ಹಾವೇರಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಹಾವೇರಿ ಜಿಲ್ಲೆಯಲ್ಲಿರುವ ಶ್ರೀ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ ಸರ್ಕಾರ ಆದೇಶ ಹೊರಡಿಸಿದೆ.
ಅಧ್ಯಕ್ಷರು ಡಾ.ಕೆ.ಆರ್. ಕಮಲೇಶ ಸದಸ್ಯರುಳಾಗಿ ವಸಂತ ರಾಜಪುರೋಹಿತ, ವೆಂಕಟೇಶ ಗಳಗನಾಥ, ಕೊಟ್ರೇಶಪ್ಪ ಬಸೇಗಣ್ಣಿ,
ವೆಂಕಟೇಶ ಮಾಚಕನೂರ, ಡಾ. ರೇವಯ್ಯ ಒಡೆಯರ್,ರಾಜೇಸಾಬ ನದಾಪ, ಉಮೇಶ ಬಳಿಗಾರ, ರೇಣುಕಾ ಗುಡಿಮನಿ, ಪ್ರಮೋದ ನೆಲವಾಗಲು ಅವರು ನೇಮಕವಾಗಿದ್ದು,
ಸದಸ್ಯ ಕಾರ್ಯದರ್ಶಿಯಾಗಿ
ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಜಿಲ್ಲೆ ಇವರನ್ನು ನೇಮಿಸಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ
ಎಸ್. ಗೀತಾಬಾಯಿ ಆ.೧೮ರಂದು ಆದೇಶ ಹೊರಡಿಸಿದ್ದಾರೆ.

