ಹಕ್ಕಿಯು ಹಾರುತಿದೇ….ದೂರದತೀರಕೆ,…..

Date:

ಹಕ್ಕಿಯು ಹಾರುತಿದೇ….ದೂರದತೀರಕೆ……....
ಹಾವೇರಿ: ಐತಿಹಾಸಿಕ ಹೆಗ್ಗೇರೆಕೆಯ ಪ್ರದೇಶದಲ್ಲಿ ಫೆ.೧೪ರಂದು ಬೆಳಿಗ್ಗೆ ೮-೪೫ ರ ಸುಮಾರಿಗೆ
ಬೂದು ಕೊಕ್ಕರೆ (ಗ್ರೇ ಹೆರಾನ್) ಹಾರಾಡುತ್ತಾ ಆಹಾರ ಅರಸುತ್ತಿದ್ದವೇಳೆ ಮೀನು ಭಕ್ಷಣೆಯ ವೇಳೆ ನನ್ನ ಕ್ಯಾಮೆರಾಕಣ್ಣಿಗೆ ಸೆರೆಯಾದ ಚಿತ್ರಗಳಿವು. ಬೂದು ಕೊಕ್ಕರೆ ಕಂದು ನೀಲಿ ಬಣ್ಣದ ಹದ್ದಿನಷ್ಟು ದೊಡ್ಡದಾದ ಹಕ್ಕಿ. ಕುತ್ತಿಗೆ ಮತ್ತು ತಲೆ ಬೆಳ್ಳಗಿದ್ದು ತಲೆಯ ಮೇಲೆ ಕರಿಯ ಜುಟ್ಟು ಹಿಮ್ಮುಖನಾಗಿ ಬಾಗಿರುತ್ತದೆ. ಕುತ್ತಿಗೆಯನ್ನು ಯಾವಾಗಲೂ ಕುಡುಗೋಲಿನ ಆಕಾರದಲ್ಲಿ  ಮಡಚಿಕೊಂಡಿರುತ್ತದೆ. ಇದರ ಕುತ್ತಿಗೆಯಲ್ಲಿ ಮೇಲಿನಿಂದ ಕೆಳಗಿನರೆಗೂ ಇರುವ ಕಪ್ಪು ಪುಕ್ಕಗಳ ಗೆರೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಎದೆ ಹೊಟ್ಟೆಗಳೆಲ್ಲ ಕಂದುಬೆಳ್ಳಗಿರುತ್ತದೆ. ಹೊಳೆ ಕೆರೆಗಳ ಪಕ್ಕ ಇರುವ ಜೊಂಡು ಬೆಳೆದ ಚೌಗಿನಲ್ಲಿ ಇದು ಸಾಧಾರಣವಾಗಿ ಆಹಾರಾನ್ವೇಷಣೆ ಮಾಡುತ್ತದೆ. ಏಕಾಂಗಿಯಾಗಿ ಬೇಟೆಯಾಡುವ ಇದು ಗುಂಪುಗಳಲ್ಲಿ ಎಂದೂ ಇರುವುದಿಲ್ಲ. ಮೋಟ್ಟೆ ಇಡುವ ಸಮಯದಲ್ಲಿ ಮಾತ್ರ ಗಂಡು ಹೆಣ್ಣಿನ ಜೋಡಿಗಳಲ್ಲಿರುತ್ತದೆ. ಹಾರುವಾಗ ಕುತ್ತಿಗೆಯನ್ನು ಮಡಚಿಕೊಂಡು ಎರಡು ರೆಕ್ಕೆಗಳ ನಡುವೆ ಹುದುಗಿಸಿ ಹಾರುವುದು ಈ ಕೊಕ್ಕರೆಗಳ ವೈಶಿಷ್ಟ್ಯ. ದಕ್ಷಿಣ ಭಾರತದಲ್ಲಿ ಜುಲೈಯಿಂದ ಸೆಪ್ಟೆಂಬರ್‌ವರೆಗೂ ಉತ್ತರದಲ್ಲಿ ನವೆಂಬರಿನಿಂದ ಮಾರ್ಚ್‌ವರೆಗೂ ಗೂಡು ಕಟ್ಟುತ್ತದೆ. ಸಮಶೀತೋಷ್ಣ ವಲಯದ  ಪಕ್ಷಿ ಇದಾಗಿದೆ.
ಚಿತ್ರಗಳು-ಮಾಹಿತಿ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...