

ಹಾವೇರಿ:ಕೊಬ್ಬರಿಹೋರಿ ಹಾಯ್ದು ಒಂದೇ ದಿನ ಮೂವರ ದುರ್ಮಾರಣ
ಹಾವೇರಿ; ದೀಪಾವಳಿ ಹಬ್ಬದ ಅಂಗವಾಗಿ ಅ.೨೨ರಂದು ಹಾವೇರಿ ಜಿಲ್ಲೆಯ ವಿವಿಧೆಡೆ
ನಡೆದ ಕೊಬ್ಬರಿ ಹೋರಿ ಓಟದ ಸ್ಪರ್ಧೆ ಯ ವೇಳೆ ಭಾರೀ ಪ್ರಮಾಣದಲ್ಲಿ ಅನಾಹುತಗಳು ನಡೆದಿದ್ದು, ಒಂದೇ ದಿನ ಮೂವರು ಉಸಿರು ಚೆಲ್ಲಿರುವ ಘಟನೆಗಳು ನಡೆದಿವೆ.
ಹಾವೇರಿನಗರದ ದಾನೇಶ್ವರಿನಗರದ ನಿವಾಸಿ, ಹೆಸ್ಕಾಂ ನಿವ್ರತ್ತ ನೌಕರ ಚಂದ್ರಶೇಖರ ಕೋಡಿಹಳ್ಳಿ (೭೦)ಎನ್ನುವವರು ಹಳೆಪಿ. ಬಿ.ರಸ್ತೆಯ ಲ್ಲಿ ನಡೆದುಕೊಂಡು ಹೊಗುತ್ತಿದ್ದ ವೇಳೆ ಕೊಬ್ಬರಿ ಹೋರಿ ಹಾಯ್ದು ಮ್ರತಪಟ್ಟಿದ್ದಾರೆ.
ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದಜಾತ್ರೆಯ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದ ರಸ್ತೆ ಯಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿಯಿಂದ ಈ ಅವಘಡ ನಡೆದಿದೆ.
ಇತ್ತ ೨೨ರಂದು ತಾಲ್ಲೂಕಿನ ದೇವಿಹೊಸೂರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ ಕಾಲಕ್ಕೆ
ಎತ್ತುಗಳನ್ನು ಸಾರ್ವಜನಿಕವಾಗಿ ಮರವಣಿಗೆ ಮಾಡುವ ಕಾರ್ಯಕ್ರಮದಲ್ಲಿ ಒಂದು ಎತ್ತು ಬೆದರಿ
ಮಧ್ಯಾಹ್ನ ೩-೩೦ ಗಂಟೆಯ ಸುಮಾರಿಗೆ ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆಯ
ಮೇಲೆ ಕುಳಿತುಕೊಂಡಿದ್ದ ಘನಿಸಾಬ ಮಹಮ್ಮದಹುಸೇನ ಬಂಕಾಪೂರ, (೭೫ ) ಈತನ
ಕುತ್ತಿಗೆಗೆ ಮತ್ತು ಎದೆಗೆ ಕೊಂಬಿನಿಂದ ತಿವಿದು ಭಾರಿ ಗಾಯ ಪಡಿಸಿದ್ದರಿಂದ ಸದರಿಯವನಿಗೆ ಚಿಕಿತ್ಸೆಗಾಗಿ
ಹಾವೇರಿಯ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮರಣ ಹೊಂದಿರುತ್ತಾರೆ. ಈ ಘಟನೆ ಆಕಸ್ಮಿಕವಾಗಿ ನಡೆದಿದ್ದುಯಾರ ಮೇಲೆ ಕೇಸ್ ವಗೈರೆ ಇರುವುದಿಲ್ಲಾ.
ಮತ್ತೊಂದು ಘಟನೆಯಲ್ಲಿಹಾನಗಲ್ ತಾಲ್ಲೂಕಿನ ತಿಳವಳ್ಳಿಗ್ರಾಮದ ಭರತ ರಾಮಪ್ಪ ಹಿಂಗಮೇರಿ ( ೨೪) ಎನ್ನುವ ಯುವಕದಿನಾಂಕ: ೨೨-೧೦-೨೦೨೫ ರಂದು ಸಾಯಂಕಾಲ ೧೬-೦೦ ಘಂಟೆಯ ಸುಮಾರಿಗೆ ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಕಾರ್ಯಕ್ರಮವನ್ನು ನೋಡಲು ಹೋಗಿ ತಿಳವಳ್ಳಿ ಗ್ರಾಮದ ದುರ್ಗಾಂಬಾ ರೆಸ್ಟೋರೆಂಟ್ ಹತ್ತಿರ ನಿಂತುಕೊಂಡಿದ್ದಾಗಯಾವುದೋ ಒಂದು ಹೋರಿಯು ಗೇಟ್ ರಸ್ತೆ ಕಡೆಯಿಂದ ಒಮ್ಮೆಲೆ ಓಡಿ ಬಂದು ಮೃತನ ಎದೆಗೆ ಗುದ್ದಿದ್ದು ಇದರಿಂದ ಮೃತನು ಹಿಂದೆ ರಸ್ತೆಯ ಮೇಲೆ ತಲೆ ಹಚ್ಚಿ ಬಿದ್ದು ಆತನ ಹಿಂದಲೆಗೆ ಭಾರೀ ಗಾಯಪೆಟ್ಟು ಆಗಿ ಆತನನ್ನುಉಪಚಾರಕ್ಕೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದು, ಸದರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಪಚಾರ
ಹೊಂದುತ್ತಿದ್ದ ಗಾಯಾಳು ಭರತ ಉಪಚಾರ ಫಲಿಸದೆ ರಾತ್ರಿ 08-೦೦ ಘಂಟೆಯ ಸುಮಾರಿಗೆ ಮೃತಪಟ್ಟಿದ್ದಾನೆ.
ಹೋರಿ ಓಟದ ವೇಳೆ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಇವರನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ.

