ಹಾವೇರಿಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ : ಥಂಡಾ ಹೊಡೆದ ಚಿಕನ್, ಮೊಟ್ಟೆ ವಹಿವಾಟು

Date:

* ಕುರಿ ಮಾಂಸ ಖರೀದಿಗೆ ಮುಂದಾದ ಮಾಂಸ ಪ್ರಿಯರು * ಎಗ್ ರೈಸ್ ಅಂಗಡಿಗಳು ಕಾಲಿ… ಕಾಲಿ…!
ಹಾವೇರಿ: ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳಲ್ಲಿ ಹಕ್ಕಿಜ್ವರ ತಾಂಡವಾಡುತ್ತಿದೆ. ಇದು ಬಳ್ಳಾರಿ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಕಾಲಿಟ್ಟಿದೆ. ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಹಾವೇರಿಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಬಹುತೇಕ ಚಿಕನ್ ಪ್ರಿಯರು ಕೋಳಿ ಮಾಂಸದಿಂದ ದೂರ ಆಗಿದ್ದಾರೆ. ಎಲ್ಲಿ ಹಕ್ಕಿಜ್ವರ ಆವರಿಸಿಕೊಳ್ಳುತ್ತದೆಯೋ ಎಂಬ ಭಯದಲ್ಲಿ ಜನ ಕೋಳಿ ಮಾಂಸ ಹಾಗು ಮೊಟ್ಟೆ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದು ಕುಕ್ಕುಟೋದ್ಯಮದ ಮೇಲೆ ಪರಿಣಾಮ ಬೀರಿದೆ.
ಹಾವೇರಿಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲವಾದರೂ ಜನರಲ್ಲಿ ಆತಂಕ ಮಾತ್ರ ಮನೆಮಾಡಿದೆ. ಕೋಳಿ ಮಾಂಸ ತಿಂದ್ರೆ ಏನಾದ್ರು ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಮಾಂಸಪ್ರಿಯರು ಭಯಭೀತರಾಗಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಎಗ್ ರೈಸ್ ಅಂಗಡಿಗಳನ್ನು ಹೊಂದಿರುವ ಹಾವೇರಿಜಿಲ್ಲೆಯಲ್ಲಿ ಇದಿಗ ಈ ಎಗ್ ರೈಸ್ ಅಂಗಡಿಗಳು ಗ್ರಾಹಕರಿಲ್ಲದೇ ಕಾಲಿ, ಕಾಲಿ ಹೊಡೆಯುತ್ತಿವೆ. ಇತ್ತ ಮಾಂಸಪ್ರಿಯರು ಕುರಿಮಟನ್ ಮೊರೆ ಹೋಗಿರುವುದರಿಂದ ಕುರಿಮಟನ್ ದರ ಕೆ.ಜಿಗೆ. ೧೦೦ಗಳಿಂದ ೨೦೦ರೂಗಳಿಗೆ ಏರಿಕೆ ಕಂಡಿದೆ. ಮೊದಲು ಕೆ.ಜಿಗೆ ೬೦೦ರೂಗಳಿಂದ ೬೫೦ರೂಗಳಿಗೆ ದೊರೆಯುತ್ತಿದ್ದ ಕುರಿ ಮಟನ್ ಇದಿಗ ಕೆಜಿಗೆ ೭೦೦ರೂ ಏರಿಕೆ ಕಂಡಿದೆ.
ಕೋಳಿ ಮಾಂಸ, ಮೊಟ್ಟೆ ದರಕ್ಕೆ ಹೊಡೆತ : ಕಳೆದ ಭಾನುವಾರ, ಮಂಗಳವಾರ ಕೋಳಿ ಮಾಂಸದ ಮಾರಾಟದ ವಹಿವಾಟು ಅಷ್ಟಕ್ಕಷ್ಟೆ ಎಂದು ಕೋಳಿ ಫಾರಂ ಮಾಲೀಕ ಬಸಣ್ಣ ಬನ್ನಿಹಳ್ಳಿ ಮಾಹಿತಿ ನೀಡಿದರು.ಕೋಳಿ ಮಾಂಸ ಹಾಗು ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು. “ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ಐದು ರೂಪಾಯಿ ಇದ್ದ ಮೊಟ್ಟೆ ಸಗಟು ಧಾರಣೆ ೪.೨೦ ರೂ.ಗೆ ಇಳಿಕೆಯಾಗಿದೆ. ಕೆಜಿ ಮಾಂಸದ ಕೋಳಿ ಸಗಟು ದರ ೧೧೦-೭೦ ಕ್ಕೆ ಇಳಿಕೆಯಾಗಿದೆ. ಸ್ಕಿನ್ ಲೆಸ್ ಈ ಮೊದಲು ಕೆ.ಜಿಗೆ ೨೪೦ರೂಗಳಿಂದ ೨೮೦ರೂ ಇತ್ತು. ಇದೀಗ ಕೆ.ಜಿ ಗೆ ೨೦೦-೨೨೦ಗಳಾದರೆ, ಸ್ಕಿನ್ ೧೬೦-೧೮೦ಗಳಿಗೆ ಇಳಿದಿದೆ.
ಜಿಲ್ಲೆಯಲ್ಲಿರುವ ಫಾರಂಗಳೆಷ್ಟು, ಕೋಳಿ ಎಷ್ಟಿವೆ ? ಹಾವೇರಿ ಜಿಲ್ಲೆಯಲ್ಲಿ ೧೭೯ ಕೋಳಿ ಫಾರಂಗಳಿವೆ. ಅಲ್ಲಿ ೨.೫ ಲಕ್ಷದಷ್ಟು ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಅಲ್ಲದೆ ೨೦ಕ್ಕೂ ಅಧಿಕ ಮೊಟ್ಟೆ ಕೋಳಿಯ ಫಾರಂಗಳಿದ್ದು, ಅಂದಾಜು ೨೦ ಲಕ್ಷ ಮೊಟ್ಟೆ ಕೋಳಿಗಳಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ಫಾರಂಗಳನ್ನು ರೈತರು ಸಹ ಈ ಉದ್ಯಮ ನಡೆಸುತ್ತಿದ್ದಾರೆ. ಇದೀಗ ಹಕ್ಕಿಜ್ವರದ ಭೀತಿಗೆ ಜಿಲ್ಲೆಯ ಕುಕ್ಕಟೋಧ್ಯಮ ತತ್ತರಿಸಿದೆ. ಮಾಂಸ ಪ್ರಿಯರು ಕೋಳಿಯ ಮಾಂಸದ ಬದಲು ಮಟನ್‌ಗೆ ಮೋರೆ ಹೋಗಿರುವುದರಿಂದ ಮಟನ್ ದರ ಜಿಗಿತ ಕಂಡಿದೆ.ಆದ್ರೆ ಜನ ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕ್ತಿರುವುದು ಮಾತ್ರ ಫಾರಂ ಮಾಲೀಕರನ್ನು ಚಿಂತೆಗೀಡು ಮಾಡಿದೆ.

ಜಿಲ್ಲೆಯಲ್ಲಿ ಈವರೆಗೆ ಕೋಳಿ ಶೀತ ಜ್ವರ ಪ್ರಕರಣಗಳು ಕಂಡುಬಂದಿಲ್ಲ

ಜಿಲ್ಲಾಧಿಕಾರಿ ಡಾ.ವಿಜಯಮಾಹಾಂತೇಶ ದಾನಮ್ಮನವರ ಈ ಬಗ್ಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋಳಿ ಶೀತ ಜ್ವರ ಪ್ರಕರಣಗಳು ಕಂಡುಬಂದಿಲ್ಲ, ಆದಾಗ್ಯೂ ಕೋಳಿ ಶೀತ ಜ್ವರ ನಿಯಂತ್ರಣಕ್ಕೆ ಹಾಗೂ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಕೋಳಿ ಫಾರ್ಮ್‌ಗಳ ಮೇಲೆ ನಿಗಾವಹಿಸಬೇಕು ಎಂದು ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇರೆ ಬೇರೆ ಪ್ರದೇಶಗಳಿಂದ ಬರುವ ಮೊಟ್ಟೆ ಅಥವಾ ಕೋಳಿ ವಾಹನಗಳನ್ನು ಸ್ಯಾನಿಟೈಜೇಷನ್ ಮಾಡಬೇಕು. ಕೋಳಿ ಫಾರ್ಮ್‌ನಲ್ಲಿ ಕೆಲಸಮಾಡುವ ಸಿಬ್ಬಂದಿಗಳು ಹಾಗೂ ಮಾಲೀಕರು ಅಗತ್ಯ ರಕ್ಷಾ ಕವಚಗಳನ್ನು ಉಪಯೋಗಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹೊರ ಜಿಲ್ಲೆಗೆ ಹಾಗೂ ಹೊರ ರಾಜ್ಯಗಳಿಂದ ಬರುವ ಕೋಳಿ ಮೊಟ್ಟೆ ಹಾಗೂ ಕೋಳಿ ಮರಿಗಳ ವಾಹನಗಳ ಮಾಹಿತಿಯನ್ನು ಪಶು ಸಂಗೋಪನಾ ಇಲಾಖೆ ನೀಡಬೇಕು ಎಂದು ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
.

ರಾಣೇಬೆನ್ನೂರಿನಿಂದ ವಿದೇಶಗಳಿಗೆ ರಪ್ತಾಗುವ ಕೋಳಿ ಮಾಂಸ
ಹಾವೇರಿಜಿಲ್ಲೆಯಲ್ಲಿ ರಾಣೇಬೆನ್ನೂರು ತಾಲೂಕಿನಲ್ಲಿ ೮೬ ಕೋಳಿ ಫಾರಂಗಳಿವೆ. ತಾಲೂಕಿನಲ್ಲಿ ೩.೨೮.೪೧೦ ಕೋಳಿಗಳಿವೆ. ಅಲ್ಲದೆ ಅಂತರಾಷ್ಟ್ರೀಯ ಖ್ಯಾತಿಯ ವೆಂಕಟೇಶ್ವರ ಹ್ಯಾಚರಿಸಿ, ಗೋಲ್ಡನ್ ಹ್ಯಾಚ್‌ರಿಸ್ ಕಾರ್ಖಾನೆಗಳು ರಾಣೇಬೆನ್ನೂರು ಬಳಿ ಇದ್ದು, ನಿತ್ಯ ಇಲ್ಲಿ ೧೦ಸಾವಿರಕ್ಕೂ ಅಧಿಕ ಕೋಳಿಗಳು ಸರಬರಾಜಾಗುತ್ತವೆ. ಇಲ್ಲಿಂದ ಸಂಸ್ಕ್ರರಿಸಿದ ಕೋಳಿಮಾಂಸವನ್ನು ಪ್ಯಾಕ್ ಮಾಡಿ ವಿದೇಶಗಳಿಗೆ ರಪ್ತ ಮಾಡಲಾಗುತ್ತದೆ. ನಿತ್ಯ ಈ ಎರಡು ಕಾರ್ಖಾನೆಳಿಗೆ ಸುತ್ತ ಮುತ್ತಲಿನ ರೈತರು ಸಾವಿರಾರು ಕೋಳಿಗಳನ್ನು ಸರಬರಾಜು ಮಾಡುತ್ತಾರೆ. ರಾಜ್ಯದ ಅಂತರಾಜ್ಯಗಳ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಕೋಳಿಗಳು ಸರಬರಾಜಾಗುತ್ತವೆ. ಇಲ್ಲಿಯವರೆಗೆ ಇಲ್ಲಿ ಯಾವುದೇ ಹಕ್ಕಿಜ್ವರ ಕಂಡು ಬಂದಿಲ್ಲ.

ಜಿಲ್ಲೆಯ ವಿವಿಧತಾಲೂಕಿನಲ್ಲಿರುವ ಕೋಳಿ ಪಾರಂಗಳು
ರಾಣೇಬೆನ್ನೂರು-೮೬
ಬ್ಯಾಡಗಿ -೧೭
ಹಾನಗಲ್-೫
ಹಾವೇರಿ-೨೦
ಹಿರೇಕೆರೂರು-೧೧
ರಟ್ಟಿಹಳ್ಳಿ -೧೩
ಸವಣೂರ – ೧೩
ಶಿಗ್ಗಾಂವ -೧೪ ಒಟ್ಟು ೧೭೯ ಕೋಳಿ ಫಾರ್ಮ್‌ಗಳಿವೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...