ಹಾವೇರಿಯಲ್ಲಿ ಶೃದ್ಧಾ ಭಕ್ತಿಯಿಂದ ಜರುಗಿದ ಶ್ರೀಪುರಸಿದ್ದೇಶ್ವರ ರಥೋತ್ಸವ

Date:

ಹಾವೇರಿ: ನಗರದ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನದ ರಥೋತ್ವವು ಬುಧವಾರ ಸಂಜೆ ನಗರದಲ್ಲಿ ಸಾವಿರಾರು ಭಕ್ತರ ಶೃದ್ಧಾ ಭಕ್ತಿಯ ನಡುವೆ ಅದ್ದೂರಿಯಾಗಿ ಜರುಗಿತು. ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ, ಗುರುಪಾದದೇವರಮಠದ ಶಿವಯೋಗಿ ಶಿವಾಚಾರ್ಯಸ್ವಾಮಿಜಿ, ಸಿದ್ದೇಶ್ವರ ಮೂರ್ತಿಗೆ, ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಥವನ್ನು ಪುರದಓಣಿಯ ಗಜಾನನ ಸರ್ಕಲ್ ವರೆಗೆ ಭಕ್ತರು ಎಳೆದು ನಂತರ ದೇವಸ್ಥಾನಕ್ಕೆ ತಂದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.
ಸಿಡಿಮದ್ದಿನ ಆಕರ್ಷಣೆ: ರಥೋತ್ವವ ಆರಂಭಕ್ಕೂ ಮುನ್ನ ಸುಮಾರು ೨೦೦ಅಡಿವರೆಗೆ ಸಿಡಿಮದ್ದಿನ ಸರವನ್ನು ಸುಡಲಾಯಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಶಾಸಕರು ಹಾಗೂ ಪ.ಜಾ.ಪ,ಪಂ ಆಯೋಗದ ಅಧ್ಯಕ್ಷ ನೆಹರು ಓಲೇಕಾರ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಬಸಪ್ಪ ಹಲಗಣ್ಣನವರ, ಪರಶುರಾಮ ಅಡಕಿ, ಜಗದೀಶ ಕನವಳ್ಳಿ, ಜಗದೀಶ ಸವಣೂರು, ಗಿರೀಶ ಗುಮಕಾರ, ಈರಣ್ಣ ಶೀಲವಂತರ, ಗುರಣ್ಣ ಸೀಮಿಕೇರಿ, ಶಿವಯೋಗಿ ಯರಶೀಮಿ,ಕರಬಸಪ್ಪ ಹಲಗಣ್ಣನವರ, ಬಸವರಾಜ ಜಾಬೀನ, ಸುರೇಶ ಮುರುಡಣ್ಣನವರ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...