
ಹಾವೇರಿಯ ಐಎಎಸ್ ಅಧಿಕಾರಿ ಪವನ್ಕುಮಾರ್ಗೆ ತ.ನಾಡು ಸಿಎಂ ಸನ್ಮಾನ
ಹಾವೇರಿ: ಹಾವೇರಿ ಮೂಲದ ಸದ್ಯ ತಮಿಳುನಾಡಿನಲ್ಲಿ ಕೊಯಮತ್ತೂರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪವನಕುಮಾರ ಗಿರಿಯಪ್ಪನವರ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರು ಇತ್ತೀಚೆಗೆ ತಮಿಳುಣಾಡು ಸಕಾರದವತಿಯಿಂದ ಮೆಚ್ಚುಗೆ ವ್ಯಕ್ತ ಪಡಿಸಿ ಪ್ರಶಸ್ತಿ ನೀಡಿ ಸನ್ಮಾನಿ ಗೌರವಿಸಿದರು. ಪವನ್ಕುಮಾರ್ ಹಾವೇರಿಯ ದಾನೇಶ್ವರಿನಗರದ ನಿವಾಸಿ ಹಿರಿಯ ನ್ಯಾಯವಾಗಿ ಜಿ.ಸಿ.ಗಿರಿಯಪ್ಪನವರ ಪುತ್ರರಾಗಿದ್ದಾರೆ.

