
ಫೆ.೧೪ರಂದು ಬೆಳಿಗ್ಗೆ ೮-೧೫ರ ಸುಮಾರಿಗೆ ನಮ್ಮೂರ ಐತಿಹಾಸಿಕ ಹೆಗ್ಗೇರಿಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆರೆಗೆ ಹೊಂದಿಕೊಂಡಿರುವ ಹೊಲದಲ್ಲಿ ಕಪ್ಪ ಬಣ್ಣ ಹೊಂದಿದ ಬಿಳಿ ಕತ್ತಿನ ಜೋಡಿ ಕೊಕ್ಕರೆಗಳು ಕಂಡು ಬಂದವು. ಕೊಕ್ಕರೆಗಳ ಏಕಾಂತಕ್ಕೆ ಧಕ್ಕೆ ಬರದ ಹಾಗೆ ಅವುಗಳಿಗೆ ಮರೆಯಾಗಿ ಮುಳ್ಳಿನ ಕಂಟಿಯ ಹಿಂದೆ ನಿಂತು ಅವುಗಳ ಪೋಟೋಗಳನ್ನು ಸೆರೆಹಿಡಿರುವೆ.
ಪಕ್ಷಿಗಳಲ್ಲಿ ವಿವಿಧ ಬಗೆಯ ಕೊಕ್ಕರೆಗಳನ್ನು ಗುರುತಿಸಲಾಗಿದೆ. ಬಹುತೇಕ ಕೊಕ್ಕರೆಗಳ ಪುಕ್ಕ ಒಂದು ಅಥವಾ ಎರಡು ಬಣ್ಣಗಳಲ್ಲಿ ಇರುತ್ತದೆ. ವಿವಿಧ ಬಣ್ಣದ ಪುಕ್ಕದಿಂದ ಕಂಗೊಳಿಸುವಂತಹ ಕೊಕ್ಕರೆಗಳು ಕೆಲವು ಮಾತ್ರ. ಅವುಗಳಲ್ಲಿ ಬಿಳಿ ಕತ್ತಿನ ಕೊಕ್ಕರಡ ಕೂಡ ಒಂದು. ಇದನ್ನು ಇಂಗ್ಲಿಷ್‌ನಲ್ಲಿ ವೈಟ್ ನೆಕ್ಟ್ ಸ್ಟಾರ್ಕ್ (Whiಣe-ಓeಛಿಞeಜ Sಣoಡಿಞ) ಎನ್ನುತ್ತಾರೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಅಪರೂಪದ ಪಕ್ಷಿಯ ಯ ಬಗ್ಗೆ ತಿಳಿಯೋಣ..
ಕಪ್ಪು, ಕೆಂಪು ಮತ್ತು ಗಾಢ ಹಸಿರು ಬಣ್ಣದ ಪುಕ್ಕ ದೇಹವನ್ನು ಅವರಿಸಿದ್ದರೆ, ಕತ್ತಿನ ಭಾಗವೆಲ್ಲಾ ಸಂಪೂರ್ಣ ಬಿಳಿ ಬಣ್ಣದ ಪುಕ್ಕದಿಂದ ಕೂಡಿರುತ್ತದೆ. ಹೀಗಾಗಿಯೇ ಇದನ್ನು ಬಿಳಿಕತ್ತಿನ ಸ್ಟಾರ್ಕ್ ಎನ್ನುತ್ತಾರೆ. ತಲೆಯ ಮೇಲೆ ಕಪ್ಪು ಬಣ್ಣದ ಪುಕ್ಕ ಬೆಳೆದಿರುತ್ತದೆ. ದೃಢವಾದ ಕೊಕ್ಕು ನೀಳವಾಗಿದ್ದು, ಕಪ್ಪು ಮತ್ತು ಕೆಂಪು ಮಿಶ್ರಿತ ಬೆಣ್ಣದಲ್ಲಿರುತ್ತದೆ. ನೀಳವಾದ ಕಾಲುಗಳು ಕೂಡ ಕಪ್ಪು-ಕೆಂಪು ಮಿಶ್ರಿತ ಬಣ್ಣಗಳಲ್ಲಿ ಇರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಗಾಢಕಂದು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ. ಬಹುತೇಕ ಕೊಕ್ಕರೆಗಳಿಗಿರುವಂತೆ ಸಪೂರ ದೇಹವನ್ನು ಹೊಂದಿರುತ್ತದೆ. ಹೆಣ್ಣು ಮತ್ತು ಗಂಡು ಕೊಕ್ಕರೆಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಕಂಡು ಬರುವುದಿಲ್ಲ.
ಜೀವನಕ್ರಮ ಮತ್ತು ವರ್ತನೆ: ತೀಕ್ಷ್ಣದೃಷ್ಟಿ ಶಕ್ತಿ ಹೊಂದಿರುವ ಹಕ್ಕಿಗಳಲ್ಲಿ ಇದು ಕೂಡ ಬಂದಾಗಿದ್ದು, ರಾತ್ರಿಯಲ್ಲೂ ಸುಲಭವಾಗಿ ಅಹಾರವನ್ನು ಅರಸುತ್ತದೆ. ಆಹಾರ ದೊರೆಯುವ ಪ್ರಮಾಣ ಹೆಚ್ಚಾಗಿದ್ದರೆ, ಪುಟ್ಟ ಗುಂಪು ರಚಿಸಿಕೊಂಡು ಅಲೆಯುತ್ತವೆ. ಸಂಗಾತಿಯೊಂದಿಗೂ ಸುತ್ತುತ್ತದೆ. ವಲಸೆ ಹೋಗುವ ಕೊಕ್ಕರೆಗಳಲ್ಲಿ ಇದು ಕೂಡ ಬಂದಾಗಿದ್ದು, ನೂರಾರು ಕೊಕ್ಕರೆಗಳು ವಲಸೆ ಹೋಗುತ್ತವೆ. ಇದು ಸಂಪೂರ್ಣ ಮಾಂಸಾಹಾರಿ ಪಕ್ಷಿ ವಿವಿಧ ಬಗೆಯ ಮೀನುಗಳು, ಕಪ್ಪೆ, ಹಲ್ಲಿ ಹಾವು, ದೊಡ್ಡಗಾತ್ರದ ಕೀಟಗಳು, ಲಾರ್ವಾಗಳು ಮೃದ್ವಂಗಿಗಳು, ಏಡಿಗಳನ್ನು ಮತ್ತು ನೆಲವಾಸಿ ಕೀಟಗಳನ್ನು ಭಕ್ಷಿಸುತ್ತದೆ.
ಸಂತಾನೋತ್ಪತ್ತಿ: ವಯಸ್ಕ ಗಂಡು ಕೊಕ್ಕರೆ ಸಂಗಾತಿಯನ್ನು ಆರಿಸಿಕೊಂಡ ಬಾಂಧವ್ಯ ಬೆಸೆದುಕೊಳ್ಳುತ್ತದೆ. ನಾಯುವವರೆಗೂ ಒಂದೇ ಸಂಗಾತಿಯೊಂದಿಗೆ ಕೂಡಿ ಬಾಳುವುದು ಬಿಳಿ ಕತ್ತಿನ ಕೊಕ್ಕರೆ ವಿಶೇಷ. ಅಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸೇರಿ, ಅತ್ತಿಮರದ ಚಿಕ್ಕ ಟೊಂಗೆಗಳು, ಕಡ್ಡಿಗಳು, ಹುಲ್ಲು ಎಲೆಗಳನ್ನು ಬಳಸಿ, ನೆಲದಿಂದ ಸುಮಾರು ಗರಿಷ್ಠ ೫೦ ಮೀಟರ್ ಎತ್ತರದ ಮರಗಳ ರೆಂಬೆಯ ಮೇಲೆ ಗೂಡು ನಿರ್ಮಿಸಿಕೊಳ್ಳುತ್ತವೆ.
ಹೆಣ್ಣು ಹಕ್ಕಿ ೨ರಿಂದ ೪ ಮೊಟ್ಟೆಗಳನ್ನು ಇಬ್ಬರೆ ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸೇರಿ ಮೊಟ್ಟೆಗೆ ನಾವು ಕೊಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಪೋಷಕ ಹಕ್ಕಿಗಳು ಆಹಾರ ಉಣಿಸಿ ಬೆಳೆಸುತ್ತವೆ. ೫೫ರಿಂದ ೬೫ ದಿನಗಳ ವರೆಗೆ ಮರಿಗಳು ಗೂಡಿನಲ್ಲೇ ಬೆಳೆಯುತ್ತವೆ. ನಂತರ ಹೊರಬಂದು ಆಹಾರ ಹುಡುಕುವುದನ್ನು ಆರಂಭಿಸುತ್ತವೆ.ಇವುಗಳು ನದಿಗಳು, ಆಳವಿಲ್ಲದ ಜೌಗು ಪ್ರದೇಶದ ಅಂಚುಗಳು, ಹುಲ್ಲುಗಾವಲು ಪ್ರದೇಶಗಳು ಮತ್ತು ಕೀಟಗಳು ಮತ್ತು ಸಣ್ಣ ಕಶೇರುಕಗಳನ್ನು ಇವು ತಿನ್ನುತ್ತವೆ. ಇತ್ತೀಚಿನ ದಿನಗಳಲ್ಲಿ ಇವು ಹಾವೇರಿಭಾಗದಲ್ಲಿ ಕಾಣಿಸಿಕೊಂಡಿರುವುದು ವಿರಳ, ಇದೀಗ ಬೇಸಿಗೆಗೆ ಕೆರೆಯಲ್ಲಿನ ನೀರು ಕಮ್ಮಿಯಾಗುತ್ತಿರುವ ಕಾರಣ ಇವುಗಳಿಗೆ ಅಹಾರ ಸುಲಭವಾಗಿ ಸಿಗುವ ಕಾರಣಕ್ಕೆ ಇವುಗಳು ಹಾವೇರಿಯ ಹೆಗ್ಗೇರೆ ಪ್ರದೇಶದಲ್ಲಿ ಪ್ರತ್ಯಕ್ಷವಾಗಿರಬಹುದು ಎನ್ನುವುದು ನನ್ನ ಅಭಿಪ್ರಾಯ.
ಚಿತ್ರ/ಬರಹ: ಮಾಲತೇಶ ಅಂಗೂರ, ವನ್ಯಜೀವಿಗಳ ಛಾಯಾಗ್ರಾಹಕ, ಹಾವೇರಿ.