
ಹಾವೇರಿಯ ಹಾನಗಲ್ ರಸ್ತೆಯಲ್ಲಿ ಭೀಕರ ಅಪಘಾತ ಅರುಣಕುಮಾರ ಕೋರಿ ಮರಣ
ಹಾವೇರಿ: ನಗರದ ಜಾನುವಾರು ಕಟ್ಟೆ ಯ ಬಳಿಯ ಹಾನಗಲ್ ರಸ್ತೆಯಲ್ಲಿ ಜ.೨೪ರಂದು ಬೆಳಿಗ್ಗೆ ೯-೧೧ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅರುಣಕುಮಾರ ವೀರಣ್ಣ ಕೋರಿ* ಮರಣಹೊಧಿದ್ದಾರೆ.ಹಾನಗಲ್ ರಸ್ತೆ ಯಲ್ಲಿ ಬೈಕ್ ನಲ್ಲಿ ಬರುತ್ತಿದ ಅರುಣಕುಮಾರ ಕೋರಿಅವರ ಬೈಕ್ ಗೆ ಟಪ್ಪರ್ ಲಾರಿ ಬಡಿದಿದೆ ಎಂದು, ಲಾರಿಯ ಕೆಳಗಡೆ ಬಿದ್ಟ ಅರುಣಕುಮಾರ ಅವರ ಮೇಲೆ ಟಿಪ್ಪರ್ ಹರಿದು ಅವರ ದೇವ ಸಂಪೂರ್ಣ ನುಜ್ಜುಗುಜ್ಜಾಗಿತ್ತೆಂದು ಪ್ರತ್ಯೇಕ ದರ್ಶಿಗಳು ತಿಳಿಸಿದ್ದಾರೆ.ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ದ್ದರು. ಟಿಪ್ಪರ ಹಾಗೂ ಟಿಪ್ಪರ್ವಚಾಲಕನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಅರುಣಕುಮಾರ ವೀರಣ್ಣ ಕೋರಿ ನಗರದ ಕ್ಷ್ಮಿ ಆಯಿಲ್ ಮಿಲ್ ಮಾಲಕರೆಂದು ಮೂಲಗಳು ತಿಳಿಸಿವೆ.


Malatesh sir, car,byke galige nujjugujjaagittu ennuva pada balasi..manushyara body ge sari hondalla