ಹಾವೇರಿಯ ಹೆಗ್ಗೇರೆಕೆರೆಯಲ್ಲಿ ಹಾವಕ್ಕಿಗಳ ಕಾದಾಟ!

Date:

????????????????????????????????????

ಹಾವೇರಿ; ಇಲ್ಲಿನ ಐತಿಹಾಸಿಕ ಹೆಗ್ಗೇರೆಕೆರೆಯಲ್ಲಿ ಏ.೧೦ರಂದು ಬುಧವಾರ ಬೆಳಿಗ್ಗೆ ೮-೩೦ರಸುಮಾರಿಗೆ ಅಪರೂಪದ ಹಾವಕ್ಕಿಗಳು (ಡಾರ್ಟರ್/ಸ್ನೇಕ್ ಬರ್ಡ್)  ಕಾಣಿಸಿಕೊಂಡಿದ್ದು, ಎರಡು ಹಾವಕ್ಕಿಗಳ ಕಾದಾಡುತ್ತಿದ್ದವು. ಕಾದಾಟದ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಹಾವಕ್ಕಿಯೊಂದು ಕೆರೆಯ ಪ್ರದೇಶದಲ್ಲಿ ಮೀನು ಬೇಟೆಯಲ್ಲಿ ತೊಡಗಿದ್ದ ವೇಳೆ, ಇನ್ನೊಂದು ಹಾವಕ್ಕಿ ಆಸ್ಥಳಕ್ಕೆ ಆಗಮಿಸಿದ ವೇಳೆ ಎರಡು ಹಾವಕ್ಕಿಗಳು ಕಾದಾಟಕ್ಕಿಳಿದವು. ಈ ವೇಳೆ ಒಂದನೊಂದು ಹಟ್ಟಿಸಿಕೊಂಡು ಕಾದಾಡಿದವು. ಈ ಅಪರೂಪದ ದೃಶ್ಯಗಳು ನನ್ನ ಕ್ಯಾಮರಾಕಣ್ಣಿನಲ್ಲಿ ಸೆರೆಯಾದವು.
ಹಾವಕ್ಕಿಗಳು (ಡಾರ್ಟರ್/ಸ್ನೇಕ್ ಬರ್ಡ್) ಹದ್ದಿನಷ್ಟು ಮೈ ಗಾತ್ರವನ್ನು ಹೊಂದಿರುವ ಈ ಹಕ್ಕಿಯು ನೀರಿನ ಹಕ್ಕಿಯೂ ಆಗಿದೆ. ಕಪ್ಪು ಕಾರ್ಮೊರೆಂಟ್ ಹಕ್ಕಿಯಂತಿದ್ದು, ಬೆನ್ನ ಮೇಲೆ ಬೆಳ್ಳಿ-ಬೂದು ಬಣ್ಣದ ಗೆರೆಗಳಿದ್ದರೆ, ತಲೆ ಮತ್ತು ಕುತ್ತಿಗೆಯು ಕಂದು ವೆಲ್ವೆಟ್ ಬಣ್ಣವನ್ನು ಹೊಂದಿರುತ್ತದೆ. ಅದರ ಗಲ್ಲ ಹಾಗೂ ಕಂಠ ಬಿಳಿಯಾಗಿದ್ದು, ಉದ್ದನೆಯ ನೆಟ್ಟಗಿರುವ ಹಾಗೂ ಬೆಣೆಯಾಕಾರದ ತುದಿಯ ಬಾಲವಿರುತ್ತದೆ. ತೆಳುವಾದ ಮತ್ತು ಆಕರ್ಷಕವಾದ ಹಾವಿನಂತಹ ಕತ್ತು, ಕಿರಿದಾದ ತಲೆ, ಚೂಪಾದ ಕಠಾರಿಯಂತಹ ಕೊಕ್ಕು ಈ ಹಕ್ಕಿಯಲ್ಲಿ ಎದ್ದು ಕಾಣುವ ಲಕ್ಷಣಗಳು. ಹೆಣ್ಣು-ಗಂಡುಗಳೆರಡೂ ಒಂದೇ ರೀತಿ ಇರುತ್ತವೆ.
ಕೆರೆ ಮತ್ತು ನೀರಿರುವ ಜಾಗಗಳಲ್ಲಿ ಒಂಟಿಯಾಗಿಯೋ, ಒಂದೆರಡಾಗಿಯೋ ಕಾಣಿಸಿಕೊಳ್ಳುತ್ತವೆ.  ಹಾವೇರಿಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಬೇಸಿಗೆಯಕಾಲದಲ್ಲಿ ಇವು ಕಾಣಸಿಗುತ್ತವೆ. ಈ ಹಕ್ಕಿಗಳು ಸಂಘಜೀವಿಗಳಲ್ಲ, ಗುಂಪಾಗಿ ಬೇಟೆಯಾಡುವುದಿಲ್ಲ. ಈಜುವಾಗ ದೇಹವನ್ನು ಮಾತ್ರ ನೀರೊಳಗೆ ಮುಳುಗಿಸಿಕೊಂಡು, ನೀಳವಾದ ಹಾವಿನಂತಹ ಕತ್ತನ್ನು ನೀರ ಮೇಲೆ ಅತ್ತಿಂದಿತ್ತ ಹೊಯ್ದಾಡಿಸುತ್ತ ಹೆಸರಿಗೆ ತಕ್ಕಂತೆ ಈಜುತ್ತವೆ. ಇದರ ಮುಖ್ಯ ಆಹಾರ ಮೀನು. ಹಾವಕ್ಕಿಯು ಮೀನುಗಳನ್ನು ನೀರಿನೊಳಗೆ ಅಟ್ಟಿಸಿಕೊಂಡು, ರೆಕ್ಕೆಗಳನ್ನು ಅರ್ಧ ಮಾತ್ರ ತೆರೆದುಕೊಂಡು, ಈಟಿಯನ್ನು ಎಸೆಯುವವರಂತೆ ಕತ್ತನ್ನು ಅತ್ತಿಂದಿತ್ತ ತೂಗಾಡಿಸುತ್ತ, ಕ್ಷಿಪಣಿಯಂತೆ ಮುನ್ನುಗ್ಗುತ್ತದೆ.
ಈ ಹಕ್ಕಿಯ ಕತ್ತಿನಲ್ಲಿರುವ ಮೂಳೆಗಳು ವಿಶೇಷ ಶಕ್ತಿಯನ್ನು ಹೊಂದಿದ್ದು ನೇರವಾಗಿ ಮೀನಿಗೇ ಗುರಿಯಿಡುವಲ್ಲಿ ಸಹಕರಿಸುತ್ತವೆ. ನೀರ ಮೇಲೆ ಚಾಚಿರುವ ಕೊಂಬೆಗಳ ಉದ್ದಕ್ಕೂ, ನೀರಿನಲ್ಲಿ ಮುಳುಗುತ್ತ, ಎಲ್ಲಾ ದಿಕ್ಕುಗಳಲ್ಲೂ ಈಜುತ್ತಾ ರಕ್ಷಣಾತ್ಮಕವಾಗಿ ದೂರ ದೂರ ಈಜುತ್ತವೆ. ನನಗೆ  ತಿಳಿದಂತೆ ನವೆಂಬರ್-ಡಿಸೆಂಬರ್-ಜನವರಿ-ಫೆಬ್ರವರಿಯಲ್ಲೂ ಇವು ಮರಿ ಮಾಡುತ್ತವೆ. ಕಡ್ಡಿಗಳಿಂದ ನೀರಿನ ಬಳಿ ಇರುವ ಮರಗಳ ಮೇಲಿನ ಕೊಂಬೆಗಳ ಮಧ್ಯೆ ತಮ್ಮ ಜೊತೆಯ ಹಕ್ಕಿಗಳೊಡನೆ ಗೂಡು ಕಟ್ಟಿ, ಮಂಕಾದ ಹಸಿರು-ನೀಲಿ ಮಿಶ್ರ ಬಣ್ಣದ ೩ರಿಂದ ೪ ಮೊಟ್ಟೆಗಳನ್ನು ಇಡುತ್ತವೆ.  ಹಾವೇರಿಯ ಹೆಗ್ಗೇರಿಕೆರೆಯಲ್ಲಿ ಇವು ಕಾಣಿಸಿಕೊಂಡಿವೆ.            ಚಿತ್ರ/ಮಾಹಿತಿ; ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...