
ಹಾವೇರಿ: ಖಾಸಗಿ ಬಸ್ ಪಲ್ಟಿ-ಸ್ಥಳದಲ್ಲೇ ಇಬ್ಬರು ಸಾವು, ೬ ಜನರಿಗೆ ಗಂಭೀರ ಗಾಯ
ಹಾವೇರಿ; ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ೬ ಜನರಿಗೆ ಗಂಭೀರ ಗಾಯಗಳಾಗಿದ್ದು, ೨೯ ಜನ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿ ನಡೆದ ಘಟನೆ ಸೋಮವಾರ ರಾತ್ರಿ ೧೨ರಸುಮಾರಿಗೆ ನಡೆದಿದೆ.
ಈಅಪಘಾಥದಲ್ಲಿ ಅರ್ನವಿ(೧೧) ಎಂಬ ಬಾಲಕಿ ಹಾಗೂ ಯಶ್ ಎಂಬ ಸುಮಾರು ೨೦ ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿಬಸ್ ಮಹಾರಾಷ್ಟ್ರದ ಸಾಂಗ್ಲಿಯಿಂದ ತಮಿಳುನಾಡು ಕಡೆಗೆ ಹೊರಟಿತ್ತು. ಮೊಟೇಬೆನ್ನೂರು ಗ್ರಾಮದ ಬಳಿ ಬಸ್ ಮುಂದೆ ಇದ್ದ ಕಾರ್ ಅಡ್ಡ ಬಂದಿತ್ತು ಎನ್ನಲಾಗಿದೆ, ಕಾರ್ಗೆ ಅಪಘಾತವಾಗೋದನ್ನ ತಪ್ಪಿಸಲು ಹೋಗಿ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ, ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದ ಬಸ್ ಬಳಿಕ ಪಲ್ಟಿ ಆಗಿದೆ.
ಈಅಪಘಾತದಲ್ಲಿ ಹಲವು ಪುಟ್ಟ ಮಕ್ಕಳಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಗಾಯಾಳುಗಳ ರಕ್ಷಣಾ ಕಾರ್ಯಕೈಗೊಂಡರು. ಸ್ಥಳಕ್ಕೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಭೇಟಿ ನೀಡಿದ್ದರು.

