ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಶಿಕ್ಷಿತರು ಚಲಾಯಿಸಿದ ೯೫೧ ಅಂಚೆ ಮತ ತಿರಸ್ಕೃತ
ಹಾವೇರಿ:: ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ೧೦,೪೮೭ ಅಂಚೆ ಮತಗಳು ಚಲಾವಣೆಯಾಗಿದ್ದು, ಈ ಪೈಕಿ ೯೫೧ ಮತಗಳು ತಿರಸ್ಕೃತಗೊಂಡಿವೆ.
ಶಿಗ್ಗಾಂವ ಕ್ಷೇತ್ರದಲ್ಲಿ ೧೫೨೧ ಅಂಚೆ ಮತಗಳು ಚಲಾವಣೆಗೊಂಡಿದ್ದು, ೧೨೦ ಮತಗಳು ತಿರಸ್ಕೃತಗೊಂಡಿವೆ, ೧೪೦೧ ಸಿಂಧು ಮತಗಳ ಪೈಕಿ ೯೪೩ ಮತಗಳನ್ನು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ೩೦೬ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಪಠಾಣ ಯಸೀರಖಾನ್ ಅವರು, ೧೦೪ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಶಶಿಧರ ಯಲಿಗಾರ ಪಡೆದಿದ್ದಾರೆ. ನೋಟಾಪರ ಐದು ಮತ ಚಲಾವಣೆಯಾಗಿವೆ. ಉಳಿದ ಮತಗಳನ್ನು ವಿವಿಧ ಅಭ್ಯರ್ಥಿಗಳ ಪಾಲಾಗಿವೆ.
ಹಾನಗಲ್ ಕ್ಷೇತ್ರದಲ್ಲಿ ಚಲಾವಣೆಗೊಂಡ ೧,೪೩೪ ಅಂಚೆ ಮತಗಳ ಪೈಕಿ ೧,೩೨೨ ಸಿಂಧುವಾಗಿದ್ದು, ಪೈಕಿ ೧೧೦ ಮತಗಳು ತಿರಸ್ಕೃತಗೊಂಡಿವೆ. ಎರಡು ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಶಿವರಾಜ ಸಜ್ಜನರ ಅವರು ೬೧೨, ಶ್ರೀನಿವಾಸ ಮಾನೆ ಅವರು ೫೯೩ ಮತಗಳನ್ನು ಹಾಗೂ ಮನೋಹರ ತಹಶೀಲ್ದಾರ ಅವರು ೯೭ ಮತಗಳನ್ನು ಪಡೆದಿದ್ದು, ಉಳಿದ ಮತಗಳನ್ನು ಕಣದಲ್ಲಿದ್ದ ಇತರರು ಪಡೆದುಕೊಂಡಿದ್ದಾರೆ.
ರಾಣೇಬೆನ್ನೂರ ಕ್ಷೇತ್ರದಲ್ಲಿ ೨,೧೬೯ ಅಂಚೆ ಮತಗಳು ಚಲಾವಣೆಯಾಗಿದ್ದು, ಈ ಪೈಕಿ ೧೫೭ ಮತಗಳು ತಿರಸ್ಕೃತಗೊಂಡಿವೆ. ೧,೯೯೯ ಸಿಂಧು ಮತಗಳ ಪೈಕಿ ೬೨೨ ಮತಗಳನ್ನು ಕಾಂಗೈ ಅಭ್ಯರ್ಥಿ ಪ್ರಕಾಶ ಕೋಳಿವಾಡ, ೭೭೯ ಮತಗಳು ಬಿಜೆಪಿ ಅಭ್ಯರ್ಥಿ ಅರುಣಕುಮಾರ, ೪೪೫ ಮತಗಳನ್ನು ಆರ್.ಶಂಕರ್, ೭೪ ಮತಗಳನ್ನು ಸಂತೋಷಕುಮಾರ ಪಾಟೀಲ, ೬೦ ಮತಗಳನ್ನು ಗೌಡಶಿವಣ್ಣನವರ ಪಡೆದಿದ್ದಾರೆ. ನೋಟಾಕ್ಕೆ ೧೩ ಚಲಾವಣೆಯಾಗಿದ್ದು, ಉಳಿದ ಮತಗಳನ್ನು ಇತರರು ಹಂಚಿಕೊಂಡಿದ್ದಾರೆ.
ಹಿರೇಕೆರೂರು ಕ್ಷೇತ್ರದಲ್ಲಿ ೧೮೯೬ ಅಂಚೆ ಮತಗಳು ಚಲಾವಣೆಯಾಗಿದ್ದು, ಈ ಪೈಕಿ ೧೬೧ ಮತಗಳು ತಿರಸ್ಕೃತಗೊಂಡಿವೆ, ೧೭೩೫ ಸಿಂಧು ಮತಗಳ ಪೈಕಿ ಯು.ಬಿ.ಬಣಕಾರ ಅವರು ೮೬೦, ಬಿ.ಸಿ.ಪಾಟೀಲ ಅವರು ೮೫೧ ಮತಗಳು ಪಡೆದರೆ, ೧೦ ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಉಳಿದ ಮತಗಳು ಇತರರ ಪಾಲಾಗಿವೆ.
ಬ್ಯಾಡಗಿ ಕ್ಷೇತ್ರದಲ್ಲಿ ೧,೪೧೫ ಅಂಚೆ ಮತಗಳು ಚಲಾವಣೆಯಾಗಿದ್ದು, ಈ ಪೈಕಿ ೭೧ ಮತಗಳು ತಿರಸ್ಕೃತಗೊಂಡಿವೆ, ೧೩೩೫ ಸಿಂಧು ಮತಗಳ ಪೈಕಿ ಬಸವರಾಜ ಶಿವಣ್ಣನವರಿಗೆ ೬೮೮, ವಿರುಪಾಕ್ಷಪ್ಪ ಬಳ್ಳಾರಿ ೬೨೯, ನೋಟಾಕ್ಕೆ ೯ ಮತಗಳು ಚಲಾವಣೆಯಾಗಿದ್ದು, ಉಳಿದಂತೆ ಕಣದಲ್ಲಿದ್ದ ಇತರ ಅಭ್ಯರ್ಥಿಗಳಿಗೆ ಮತ ಚಲಾವಣೆಯಾಗಿವೆ.
ಹಾವೇರಿ ಕ್ಷೇತ್ರದಲ್ಲಿ ೨,೦೫೭ ಅಂಚೆ ಮತದಾನ ಚಲಾವಣೆಯಾಗಿದ್ದು, ಈ ಪೈಕಿ ೪೦೩ ಮತಗಳು ತಿರಸ್ಕೃತಗೊಂಡಿವೆ, ೧೬೪೧ ಸಿಂಧು ಮತಗಳ ಪೈಕಿ ೮೩೨ ಮತಗಳು ಗವಿಸಿದ್ದಪ್ಪ ದ್ಯಾಮಣ್ಣನವರಿಗೆ, ೭೭೩ ಮತಗಳು ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ, ೮ ಮತಗಳು ನೋಟಾಕ್ಕೆ, ಉಳಿದಂತೆ ಇತರ ಅಭ್ಯರ್ಥಿಗಳಿಗೆ ಹಂಚಿಕೆಯಾಗಿವೆ.

Date: