
ಹಾವೇರಿ ಮೂಲದ ಬೆಂಗಳೂರಿಗ ಡಾ.ಎಸ್.ವಿ.ಹಿತ್ತಲಮನಿಗೆ ರಾಜ್ಯೋತ್ಸವ ಪ್ರಶಸ್ತಿ-ಜಿಲ್ಲೆಯ ಸಾಧಕರ ಕಡೆಗಣನೆಗೆ ಆಕ್ರೋಶ
ಹಾವೇರಿ: ಪ್ರಸ್ತಕ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಹಾವೇರಿ ಮೂಲದ ಬೆಂಗಳೂರು ನಿವಾಸಿ ಡಾ.ಎಸ್.ವಿ.ಹಿತ್ತಲಮನಿ ಎನ್ನುವವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ೨೦೨೫ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಡಾ.ಎಸ್.ವಿ.ಹಿತ್ತಲಮನಿ ಅವರು ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರುಗ್ರಾಮದವರಾಗಿದ್ದು, ತೋಟಗಾರಿಕೆ ಇಲಾಖೆಯಲ್ಲಿ ಎಡಿಯಿಂದ ಡಿಡಿವರೆಗೆ ಅಪರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಕೃಷಿ ಕ್ಷೇತ್ರದಲ್ಲಿ ಇವರು ಅಧಿಕಾರಿಯಾಗಿ ಮಾಡಿದ ಸಾಧನೆಯನ್ನು ಗುರುತಿಸಿ ಸರ್ಕಾರ ರಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ಹಾವೇರಿ ಮೂಲದ ಬೆಂಗಳೂರಿಗ ಡಾ.ಎಸ್.ವಿ.ಹಿತ್ತಲಮನಿ ಅವರಿಗೆ ರಾಜ್ಯೋತ್ವವ ಪ್ರಶಸ್ತಿ ಪ್ರಕಟಗೊಂಡಮೇಲೆ ಡಾ.ಹಿತ್ತಲಮನಿ ಅವರು ಹಾವೇರಿಜಿಲ್ಲೆಯ ಕೋಟಾದಡಿ ಪ್ರಶಸ್ತಿ ಪಡೆದಿರುವ ಹಿನ್ನಲೆಯಲ್ಲಿ ಅವರ ಮೊಬೈಲ್ ಸಂಖ್ಯೆ ಹುಡುಕಿ ಪಡೆದು ಅವರನ್ನು ಸಂಪರ್ಕಿಸಿ ಅವರ ಫೋಟೋ ಹಾಗೂ ಅವರ ಪರಿಚಯಪತ್ರವನ್ನು ಪಡೆಯಲು ಹರಸಾಹಸ ಪಡಬೇಕಾಯಿತು. ಅನೇಕಬಾರಿ ಅವರಿಗೆ ಕರೆಂಆಡಿ ಫೋಟೋ ಹಾಗೂ ಪರಿಚಯಪತ್ರವನ್ನು ನೀಡುವಂತೆ ಕೇಳಿದರೂ ಸಹ ಅವರು ತಮ್ಮ ಪರಿಚಯ ಹಾಗೂ ಫೋಟೋ ಕಳಿಸಲಿಲ್ಲ.
ಜಿಲ್ಲೆಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕಿತ್ತು: ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಸಾಧಕರನ್ನು ಕಡೆಗಣಿಸಿದೆ ಎಂದು ಜಿಲ್ಲೆಯ ಸಾಂಸ್ಕ್ರತಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ. ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಸಂಬಳ ಸೇರಿದಂತೆ ಸಕಲ ಸವಲತ್ತುಗಳನ್ನು ಪಡೆದುಕೊಂಡು ಕೆಲಸ ಮಾಡಿದವರನ್ನು ಸರ್ಕಾರ ಗುರುತಿಸಲಿ, ಆದರೆ ಹಾವೇರಿಜಿಲ್ಲೆಯಲ್ಲಿ ಯಾವುದೇ ಫಲಾಪೇಕ್ಷೆಗಳಿಲ್ಲದೇ ಕಲೆ, ಸಾಹಿತ್ಯ, ಸಂಸ್ಕ್ರತಿ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿದ್ದು, ಅಂತವರನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆತ್ತು ಎನ್ನುವ ಮಾತುಗಳು ಕೇಳಿಬಂದಿವೆ.
—

