
ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್ನಲ್ಲಿಯೇ ನಡೆಸಲು ಎಸ್ಎಫ್ಐ ಒತ್ತಾಯ
ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ಖಾಸಗಿ ಕಾಲೇಜ್ ನಲ್ಲಿ ನಡೆಸುತ್ತಿರುವುದನ್ನು ವಿರೋಧಿಸಿ ಹಾಗೂ ಗೊಂದಲ ಪರಿಹಾರಿಸಿ ವಿವಿ ಕ್ಯಾಂಪಸ್ ನಲ್ಲಿಯೇ ನಡೆಸಲು ಒತ್ತಾಯಿಸಿ ಭಾನುವಾರ ನಗರದ ಪರಿವೀಕ್ಷಣಾ ಮಂದಿರದದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ಕಾರ್ಯಕರ್ತರು ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಹಾವೇರಿ ವಿವಿಯು ಮುಚ್ಚುವ ಸಂದರ್ಭದಲ್ಲಿ ಹಾವೇರಿ ಜನತೆಯ ವಿವಿಧ ಸಂಘಟನೆಗಳು, ಜನತೆಯ ಹೋರಾಟದಿಂದ ಉಳಿಸಿಕೊಳ್ಳಲಾಗಿದೆ, ಆದರಿಂದ ಜಿಲ್ಲೆಯ ಹೆಮ್ಮೆಯ ಕ್ಷಣವಾದ ಮೊದಲ ಘಟಿಕೋತ್ಸವವು ವಿಶ್ವವಿದ್ಯಾಲಯದ ಅಭಿವೃದ್ಧಿ ಕನ್ನೊಟದಿಂದ ಕ್ಯಾಂಪಸ್ ನಲ್ಲಿಯೇ ನಡೆಸಬೇಕೆಂದು ಎಸ್ಎಫ್ಐ ಕಾರ್ಯಕರ್ತರು ಒತ್ತಾಯಿಸಿದರು.
ವಿವಿ ಕ್ಯಾಂಪಸ್ ನಲ್ಲಿ ಘಟಿಕೋತ್ಸವವನ್ನು ನಡೆಸಿದರೆ ರಾಜ್ಯಪಾಲರಿಗೆ ಜನಪ್ರತಿನಿಧಿಗಳಿಗೆ ಗೊತ್ತಾಗುತ್ತದೆ ವಿವಿ ಅನುದಾನ ಒದಗಿಸಿ ಅಭಿವೃದ್ಧಿ ಮಾಡಬೇಕೆಂದು ಎಚ್ಚರಿಕೆ ಪಾಠವಾಗುತ್ತದೆ. ರಸ್ತೆ, ಬಸ್ ನಿಲ್ದಾಣ, ಬಸ್ಸಿನ ಸಮಸ್ಯೆಗಳಿಗೆ ಪರಿಹಾರ, ಕುಡಿಯುವ ನೀರು, ಹಾಸ್ಟೆಲ್ ಸೌಲಭ್ಯ, ಆಟದ ಮೈದಾನ, ಖಾಯಂ ಉಪನ್ಯಾಸಕರು ಸಿಬ್ಬಂದಿ ಕೊರತೆ ಎಲ್ಲಾ ಸರ್ಕಾರದ ಗಮನಾರ್ಹ ವಾಗುತ್ತದೆ ಆದರಿಂದ ವಿವಿ ಆವರಣದಲ್ಲಿಯೇ ಘಟಿಕೋತ್ಸವವನ್ನು ನಡೆಸಲು ತಾವುಗಳ ಸೂಚಿಸಬೇಕೆಂದು ಹಾಗೂ ರಾಜ್ಯಪಾಲರಿಗೂ, ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯಬೇಕೆಂದು ವಿದ್ಯಾರ್ಥಿ ಸಮುದಾಯದ ಪರವಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ, ಶಿಕ್ಷಣ ಪ್ರೇಮಿಗಳು, ಉಪನ್ಯಾಸಕರು ಹಾವೇರಿ ಜಿಲ್ಲೆಯ ಜನತೆಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಯಾವುದೇ ಕಾರಣಕ್ಕೂ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು” ಕ್ಯಾಂಪಸ್ ನಲ್ಲಿ ಬಿಟ್ಟು ಬೇರೆಡೆಗೆ ನಡೆಸಲು ಆಲೋಚನೆ, ಯೋಜನೆ, ತೀರ್ಮಾನವನ್ನು ಕೈಗೊಳ್ಳಬಾರದು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವೀಕರಿಸಿದ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಘಟಿಕೋತ್ಸವ ಕುರಿತು ನನ್ನ ಗಮನಕ್ಕೆ ಇರಲಿಲ್ಲ ಕೂಡಲೇ ವಿವಿ ಕುಲಪತಿ ಅವರ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮುಖಂಡರಾದ ಅರುಣ್ ಕುಮಾರ್ ನಾಗವತ್, ಚೈತ್ರಾ ಕೊರವರ, ಸುನೀಲ್ ಕುಮಾರ್ ಎಲ್, ಧನುಷ್ ದೊಡ್ಡಮನಿ, ಸಂಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

