ಹಾವೇರಿ ಸರಕಾರಿ ಹೆರಿಗೆ ಆಸ್ಪತ್ರೆ ಯಲ್ಲಿ ಜನನವಾಗಿದ್ದ ನವಜಾತ ಶಿಶುವನ್ನು ಅಪಹರಿಸಿರುವ ನರ್ಸ ವೇಶದ ಮಹಿಳೆ
ಹಾವೇರಿ; ಇಲ್ಲಿನ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ11/03/2023 ಶನಿವಾರ ಸಾಯಂಕಾಲ ಚಿಕಿತ್ಸೆ ಕೊಡಿಸುವ ನೆಪದಲ್ಲಿ ನರ್ಸ ವೇಷ ಧರಿಸಿದ ಮಹಿಳೆಯೊಬ್ಬಳು ಅಜ್ಜಿಯಿಂದ ಮಗುವನ್ನ ಪಡೆದು ಪರಾರಿಯಾಗಿದ್ದಾಳೆಜಿಲ್ಲಾ ಆಸ್ಪತ್ರೆಯಿಂದ, ಪಂಡಿತ ಹಾಸ್ಪಿಟಲ್ ವರೆಗೂ ಹಿಂಬಾಲಿಸಿ ಪಂಡಿತ ಆಸ್ಪತ್ರೆಯಲ್ಲಿ ಅಜ್ಜಿ ಕೈಯಲ್ಲಿದ್ದ ಮಗುವನ್ನು ಪಡೆದು,ನೀನು ಹಣ್ಣು ತೆಗೆದುಕೊಂಡು ಬಾ ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಹಣವನ್ನು ಕೊಟ್ಟು ಕಳಿಸಿದ್ದಾಳೆ. ಅಜ್ಜಿ ಹಣ್ಣು ತೆಗೆದುಕೊಂಡು ಬರುವಷ್ಟರಲ್ಲಿ ನರ್ಸ ವೇಷ ಧರಿಸಿದ ಮಹಿಳೆ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ.. ಈ ಬಗ್ಗೆ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.