ಹಾವೇರಿ : ಸ್ವಯಂ ಸೇವಕ ಗೃಹರಕ್ಷಕ ಗೌರವ ಸ್ಥಾನಗಳ ನೇಮಕಕ್ಕೆ ಅರ್ಜಿ ಆಹ್ವಾನ

Date:

ಹಾವೇರಿ : ಹಾವೇರಿ ಜಿಲ್ಲೆಯ ಗೃಹರಕ್ಷಕದಳದ ಎಲ್ಲಾ ತಾಲೂಕು ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ ಗೌರವ ಸದಸ್ಯ ಸ್ಥಾನಗಳಿಗೆ ಅರ್ಹರಿರುವ ಹಾಗೂ ಸೇವಾ ಮನೋಭಾವ ಹೊಂದಿರುವ ಹಾವೇರಿ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಕನಿಷ್ಠ ೧೯ ರಿಂದ ೫೦ ವರ್ಷದ ಒಳಗಿರಬೇಕು, ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು.ತಮ್ಮ ವಾಸಸ್ಥಳದಿಂದ ಘಟಕಗಳಿಗೆ ೬ ಕಿ.ಮೀ.ವ್ಯಾಪ್ತಿಯೊಳಗಿರಬೇಕು, ಧೃಡಕಾಯರಾಗಿದ್ದು ಆರೋಗ್ಯವಂತರಾಗಿರಬೇಕು.
ಅರ್ಜಿ ನಮೂನೆಯೊಂದಿಗೆ ಎಸ್.ಎಸ್.ಎಲ್.ಸಿ., ಉತ್ತೀರ್ಣತೆಯ ಅಂಕ ಪಟ್ಟಿ, ಜನ್ಮ ದಿನಾಂಕದ ದೃಢೀಕರಣದ ಪ್ರತಿ, ಆಧಾರ್ ಕಾರ್ಡ್‌ನ ಪ್ರತಿ, ಚುನಾವಣಾ ಗುರುತಿನ ಚೀಟಿಯ ಪ್ರತಿ, ವೈದ್ಯಕೀಯ ಪ್ರಮಾಣ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್‌ನ ಪ್ರತಿ ಹಾಗೂ ಅಂಚೆ ಲಕೋಟೆ-೨ (ರೂ-೫)ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ದಿನಾಂಕ ೨೦-೦೩-೨೦೨೫ ರೊಳಗಾಗಿ ಸಂಬಂಧಿಸಿದ ಘಟಕಗಳ ಘಟಕಾಧಿಕಾರಿಗಳು ಹಾಗೂ ಜಿಲ್ಲಾ ಗೃಹರಕ್ಷಕದಳದ ಕಚೇರಿಗೆ ಸಲ್ಲಿಸಬೇಕು. ಹಾವೇರಿ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ದಿನಾಂಕ ೦೫-೦೩-೨೦೨೫ ರಿಂದ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಹಾವೇರಿ ಜಿಲ್ಲಾ ಗೃಹರಕ್ಷಕದಳದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ, ಉಚಿತವಾಗಿ ಅರ್ಜಿ ನಮೂನೆ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕಮಾಂಡೆಂಟ್, ಜಿಲ್ಲಾ ಗೃಹರಕ್ಷಕದಳದ ಕಾರ್ಯಾಲಯ, ವಿದ್ಯಾನಗರ, ಪಿ.ಬಿ. ರಸ್ತೆ, ಹಾವೇರಿ-೫೮೧೧೧೦, ದೂರವಾಣಿ ಸಂಖ್ಯೆ: ೦೮೩೭೫-೨೩೬೧೬೦ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...