
ಹಾವೇರಿ: ಕೋಟ್ಯಾಂತರರೂಗಳ ಸಾಲಮಾಡಿ ದೇಶ ಬಿಟ್ಟು ಫಲಾಯನಮಾಡಿದವರ ಬಗ್ಗೆ ಓದಿದ್ದೇವೆ, ಆದರೆ ಎರಡುಕೋಟಿರೂ ಸಾಲಮಾಡಿದ ಮಹಿಳೆಯೊಬ್ಬಳು ತುಂಬಿಹರಿವ ತುಂಗಭದ್ರಾನದಿಗೆ ಆತ್ಮಹತ್ಯೆಗೆಂದು ನದಿಗೆ ಜೀಗಿದು ಗಿಡ-ಗಂಟೆಗಳ ಸಹಾಯದಿಂದ ಜೀವ ಉಳಿಸಿಕೊಂಡು ಕೊನೆಗೆ ಜಿಲ್ಲಾಡಳಿತದ ಕ್ರಮದಿಂದ ಜೀವ ಉಳಿಸಿಕೊಂಡಿರುವ ಘಟನೆ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ನಿಟ್ಟಪಳ್ಳಿ ಗ್ರಾಮದಬಳ ಗುರುವಾರ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ರಟ್ಟಿಹಳ್ಳಿ ಗ್ರಾಮದ ರೂಪಾ ಶಿವಪ್ಪ ಅಂಬಲಿ ಎಂಬ ಮಹಿಳೆ ತುಂಗಭದ್ರಾ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ ಮಹಿಳೆ ಸುಮಾರು ಎರಡು ಕೋಟಿ ಸಾಲ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
೪೨ರವಯೋಮಾನದ ರೂಪಾ ಶಿವಪ್ಪ ಅಂಬಲಿ ಸಾಲಗಾರರ ಕಾಟಕ್ಕೆ ಬೇಸತ್ತು ಮನೆ ಬಿಟ್ಟಿದ್ದಳು. ನಂತರ ಕುಟುಂಬಸ್ಥರು ಹುಡುಕಾಟ ನಡೆಸಿ ಸಂಬಂಧಿಕರ ಮನೆಯಲ್ಲಿ ಇರಿಸಿದ್ದರು. ಬುಧವಾರ ತಡರಾತ್ರಿ ಮನೆಯಿಂದ ಹೊರಗೆ ಬಂದು ನಂದಿಗುಡಿ ಸೇತುವೆಯಿಂದ ತುಂಗಭದ್ರಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಅದೃಷ್ಟವಶಾಶ ಅವಳ ನಿಟ್ಟಪಳ್ಳಿ ಬಳಿ ಗಿಡಗಂಟಿ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ ಎಂದು ಡಿಸಿ ಹೇಳಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯನ್ನು ನಮ್ಮ ಪೊಲೀಸ ಇಲಾಖೆ, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮಹಿಳೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಉದಬತ್ತಿ ಉದ್ಯಮಕ್ಕೆಂದು ಸಾಲ: ರೂಪಾ ಶಿವಪ್ಪ ಅಂಬಲಿ ಉದಬತ್ತಿ ಉದ್ಯಮಕ್ಕೆಂದು ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ತುಂಗಭದ್ರಾ ನದಿಗೆ ಹಾರಿದ್ದಳೆಂದು, ಇಡೀ ರಾತ್ರಿ ನದಿಯಲ್ಲಿನ ಗಿಡ-ಗಂಟೆಗಳನ್ನು ಹಿಡಿದು ಜೀವ ಉಳಿಸಿಕೊಂಡಳೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹರಿಹರ ತಾಲೂಕಿನ ನಂದಿಗುಡಿ ಸೇತುವೆಯಿಂದ ನದಿಗೆ ಬುಧವಾರ ರಾತ್ರಿ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಳು. ಆದರೆ, ಇವಳಿಗೆ ಈಜು ಬರುತ್ತಿದ್ದ ಕಾರಣ ಸುಮಾರು ಕಿ.ಮೀ.ನಷ್ಟು ದೂರ ಈಜುತ್ತ ಬಂದು ಕೋಟಿಹಾಳ-ನಿಟಪಳ್ಳಿ ಗ್ರಾಮದ ಬಳಿ ನದಿ ಮಧ್ಯೆ ದೊರೆತ ಗಿಡ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾಳೆ.
ನಸುಕಿನ ಜಾವ ಮಹಿಳೆಯ ಕೂಗಾಟ ಕೇಳಿದ ಸ್ಥಳಿಯರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ತೆರಳಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಮಹಿಳೆಯನ್ನು ರಾಣೇಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಈ ಸಮಯದಲ್ಲಿ ಮಾತನಾಡಿದ ರೂಪಾ, ಉದಬತ್ತಿ ಮಾಡುವ ಸಲುವಾಗಿ ೨೨ ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಅದು ಈಗ ೨ ಕೋಟಿ ರೂ. ಅಧಿಕವಾಗಿದೆ. ಅಲ್ಲದೆ ಸಾಲಗಾರರ ಕಾಟದಿಂದ ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಹೇಳಿಕೊಂಡಳು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಾಲದ ಹಣಕ್ಕಾಗಿ ತೊಂದರೆ ನೀಡಿದವರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.
—ಮಹಿಳೆ ನದಿಗೆ ಜಿಗಿದ ಘಟನೆ-ಐವರ ಮೇಲೆ ಪ್ರಕರಣ ದಾಖಲು
ಹಾವೇರಿ: ಮಹಿಳೆ ನದಿಗೆ ಜಿಗಿದ ಘಟನೆಗೆ ಸಂಬಂಧಿಸಿದಂತೆ ಐವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಒಂಟಗೋಡಿ ತಿಳಿಸಿದ್ದಾರೆ. ಈ ಬಗ್ಗೆ ಗುರುವಾರ ರೂಪಾ ನೀಡಿದ ದೂರಿನನ್ವಯ ಕುಂಚೂರಿನ ಚೆನ್ನಬಸಪ್ಪ ಕಿಟ್ಟದ, ರಟ್ಟಿಹಳ್ಳಿಯ ರಮೇಶ ಹೊಸಮನಿ, ಜಟ್ಟೆಪ್ಪ ಮಾಳಗೊಂಡರ, ತೋಟಗಂಟಿಯ ರಮೇಶ, ರಟ್ಟಿಹಳ್ಳಿಯ ಸರೋಜಾ ಸೋಮಶೇಖರ ಹುರಕಡ್ಲಿ ಅವರ ಮೇಲೆ ದೂರು ದಾಖಲಾಗಿದೆ.
ರೂಪಾ ಅವರು ಈ ಐವರಕಡೆಯಿಂದ ವಾರದ ಬಡ್ಡಿ ಹಾಗೂ ತಿಂಗಳ ಬಡ್ಡಿಯಂತೆ ಒಟ್ಟು ೪೮ ಲಕ್ಷ ರೂ ಗಳನ್ನು ಸಾಲವಾಗಿ ಪಡೆದುಕೊಂಡಿದ್ದು, ಅದರಲ್ಲಿ ಅಸಲು ಹಣವನ್ನು ಅರ್ಧದಷ್ಟು ಮುಟ್ಟಿಸಿದ್ದು, ಬಡ್ಡಿಯನ್ನು ಕಟ್ಟುತ್ತಾ ಬಂದಿದ್ದಾರೆ. ಸದರಿ ಹಣದಿಂದ ಉದ್ದಿನಕಡ್ಡಿ ಫ್ಯಾಕ್ಟರಿಯನ್ನು ನಡೆಸಿಕೊಂಡು ಬರುತ್ತಿದ್ದು, ಸದ್ಯ ಫ್ಯಾಕ್ಟರಿ ನಡೆಸಲು ತೊಂದರೆಯಾಗುತ್ತಿದ್ದು, ಸಾಲ ಕೊಟ್ಟ ಸಾಲಗಾರರು ಫ್ಯಾಕ್ಟರಿಯ ಹತ್ತಿರ ಮತ್ತು ಮನೆಯ ಹತ್ತಿರ ಬಂದು ಅಸಲು ಮತ್ತು ಬಡ್ಡಿಯನ್ನು ಕೊಡುವಂತೆ ಕಿರುಕುಳ ಕೊಡುತ್ತಾ ಬಂದಿದ್ದರಿಂದ , ರೂಪಾ ಬೇಜಾರು ಮಾಡಿಕೊಂಡು ಕಳೆದ ೦೩ ತಿಂಗಳ ಹಿಂದೆ ರಟ್ಟಿಹಳ್ಳಿ ಬಿಟ್ಟು ಬೆಂಗಳೂರಲ್ಲಿ ಇದ್ದು, ಒಂದು ವಾರದ ಹಿಂದೆ ತನ್ನ ತಂಗಿಯ ಮನೆ ದಾವಣಗೆರೆಯ ವಡ್ಡಿನಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ.
ಜು. ೩೦. ರಂದು ಮಧ್ಯಾಹ್ನ ೧೨.೦೦ರ ಸುಮಾರಿಗೆ ರಟ್ಟಿಹಳ್ಳಿಗೆ ಹೋಗಿ ಬರುವುದಾಗಿ ಹೇಳಿ ನಂದಿಗುಡಿ ಆಂಜನೇಯ ದೇವಸ್ಥಾನದಲ್ಲಿದ್ದು, ಕತ್ತಲಾದ ನಂತರ ಜು. ೩೧ ರಂದು ರಾತ್ರಿ ೧೨.೦೦ ಗಂಟೆಯ ಸುಮಾರಿಗೆ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ನಂದಿಗುಡಿ ಸೇತುವೆ ಮೇಲಿಂದ ನೀರಿಗೆ ಹಾರಿ ತೇಲುತ್ತಾ ನಿಟಪಳ್ಳಿ ಗ್ರಾಮದ ಹತ್ತಿರ ತುಂಗಭದ್ರಾ ನದಿ ನೀರಿನಲ್ಲಿ ಒಂದು ಮರವನ್ನು ಹಿಡಿದುಕೊಂಡಿದ್ದಾರೆ.
ಇಕೆ ಚೀರಾಡುವದನ್ನು ಕೇಳಿದ ಗ್ರಾಮದ ಕೆಲವರು ಬಂದು ವಿಚಾರಿಸಿ ಈಜುಗಾರರಿಂದ ಮತ್ತು ಅಗ್ನಿಶಾಮಕ ದಳದವರಿಂದ ರಕ್ಷಿಸಿ ಅಂಬುಲೇನ್ನದಲ್ಲಿ ಉಪಚಾರಕ್ಕೆ ರಾಣೇಬೆನ್ನೂರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ ಎಂದು ದೂರನ್ನು ನೀಡಿದ್ದು, ಸದರಿ ದೂರಿನನ್ವಯ ೦೫ ಜನರ ಮೇಲೆ ರಟ್ಟಿಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.


