ಹುಂಡುಕೋಳಿ-ನೆಲಕುಟುಕದ ಬೆನ್ನುಹತ್ತಿ…………………

Date:

ಹುಂಟಕೋಳಿಯ ಸ್ವಚ್ಚಂದ  ಓಡಾಟ…………………..

ಆಹಾರ  ಅರಸತ್ತಿರವ ಹಂಡಕೋಳಿ…..
ನೆಲಕುಟುಕನ ಭರ್ಜರಿ ಬೇಟಡ………………..

ಹುಂಡುಕೋಳಿ-ನೆಲಕುಟುಕದ ಬೆನ್ನುಹತ್ತಿ…………………
ಭಾನುವಾರ ಕ್ಯಾಮರಾದೊಂದಿಗೆ ಬಂಕಾಪುರದ ನವಿಲುಧಾಮದ ಕಡೆಗೆ ನನ್ನ ಬೈಕ್ ಸವಾರಿ ನಡೆಯಿತು. “ನವಿಲುಗಳಿಲ್ಲದೇ ನವಿಲುಧಾಮ ಕಾಲಿ… ಕಾಲಿ.. ಎನಿಸಿತು”. “ಕೆಲವೇ ವರ್ಷಗಳ ಹಿಂದೆ ಇಲ್ಲಿ ನೂರಾರು ಸಂಖ್ಯೆಂiiಲ್ಲಿದ್ದ ನವಿಲುಗಳ ಸಂತತಿ ಇದೀಗ ಕೇವಲ ಹತ್ತಾರು ಸಂಖ್ಯೆಗೆ ಕುಸಿದಿರುವುದು ತೀರಾಕಳವಳಕಾರಿಯಾದ ಸಂಗತಿಯಾಗಿದೆ”. ಹೀಗೆ ನವಿಲು ಧಾಮದ ಸುತ್ತಾಟದ ವೇಳೆ ಬಂಕಾಪುರ ಕೋಟೆ ಪ್ರದೇಶದಲ್ಲಿ ಕಲವು ಅಪರೂಪದ ಪಕ್ಷಿಗಳು ಕಂಡು ಬಂದವು. ಅದರಲ್ಲಿ ಪ್ರಮುಖವಾಗಿ ಹುಂಡುಕೋಳಿ ಮತ್ತು ನೆಲಕುಟುಕ ಪ್ರಮುಖವಾದವುಗಳು.
ಹುಂಡುಕೋಳಿ ಸಾಮಾನ್ಯವಾಗಿ ಈಜಾಡುವ ಹಕ್ಕಿಯಲ್ಲ. ಆದರೆ ಇದು ನೀರಿನ ಹತ್ತಿರ ಆಹಾರಾನ್ವೇಷಣೆಗೆ ಓಡುವುದನ್ನು ಕಾಣಬಹುದು. ನೀರಾವರಿ ಪ್ರದೇಶದಲ್ಲಿ, ಜೌಗುಗಟ್ಟಿ ನಿಂತ ನೀರಿನ ಗುಂಡಿಗಳಲ್ಲಿಯು ಆಹಾರ ಅರಸುತ್ತದೆ. ಹೆಚ್ಚಾಗಿ ಸಂಜೆಹೊತ್ತಿನಲ್ಲಿ ಮೊದೆಗಳೊಳಗೆ ಕುಳಿತು ಕೊರೊಕೊಕ್ ಕೊಕ್ ಎಂದು ಅವಿರತವಾಗಿ ಕೂಗುತ್ತದೆ.
“ಜೂನ್‌ನಿಂದ ಅಕ್ಟೋಬರ್‌ವರೆಗೆ ಕೆರೆದಡದ ಪೊದೆಗಳಲ್ಲಿ, ಜೊಂಡಿನಲ್ಲಿ ಗೂಡು ಮಾಡುತ್ತದೆ. ಕಾಗೆಗಿಂತ ಕೊಂಚ ದೊಡ್ಡದಾದ ಕೋಳಿಗಿಂತ ಚಿಕ್ಕದಾದ ನೀರಿನ ಕೋಳಿ, ರೆಕ್ಕೆ, ಬೆನ್ನು, ಬಾಲದ ಮೇಲ್ಬಾಗ, ಎಲ್ಲ ಕಂದು ಕಪ್ಪು ಬಣ್ಣ. ಕೊಕ್ಕರೆಗಳಿಗಿರುವಂತೆ ಉದ್ದವಾದ ಕಾಲುಗಳು ನೀಲಿಕಪ್ಪು ಬಣ್ಣಕ್ಕಿವೆ. ಚೋಟು ಬಾಲವನ್ನು ನಡೆಯುತ್ತಾ ಮೇಲೆ ಕೆಳಗೆ ಆಡಿಸುವಾಗ ಬಾಲದ ಕೆಳಗಿನ ಕೆಂಪು ಬಣ್ಣ ಪ್ರಧಾನವಾಗಿ ಕಾಣುತ್ತದೆ. ಕೊಕ್ಕು ನೀಲಿಕಷ್ಟು, ಕುತ್ತಿಗೆಯ ಮುಂಭಾಗ, ಎದೆ, ಹೊಟ್ಟೆ ಅಚ್ಚ ಬಿಳಿಯ ಬಣ್ಣ, ಚೌಗು ಪ್ರದೇಶದ ಸುತ್ತಮುತ್ತಲಿನ ಪೊದೆಗಳೆಡೆಯಲ್ಲಿ ಮತ್ತು ಜೊಂಡಿನ ಸಂದುಗೊಂದುಗಳಲ್ಲಿ ಹಗುರ ಹೆಜ್ಜೆಗಳನ್ನಿಡುತ್ತಾ ನಡೆದಾಡುವ ಚುರುಕಾದ ಪಕ್ಷಿ ಇದಾಗಿದೆ”. ಇದು ಬಂಕಾಪುರ ಕೋಟೆ ಪ್ರದೇಶದಲ್ಲಿ ಆಹಾರ ಅರಸುತ್ತಿದ್ದ ವೇಳೆ ನನ್ನ ಕ್ಯಾಮರಾಕಣ್ಣಿಗೆ ಸೆರೆಯಾಯಿತು.
“ನವಿಲುಗಳ ಪೋಟೋಗಳನ್ನು ಚಿತ್ರಿಸಲು ಒಡಾಡುತ್ತಿದ್ದ ವೇಳೆ ಆಹಾರ ಅರಸುತ್ತಿದ್ದ ನೆಲಕುಟುಕ ಮನ ಸೆಳೆಯಿತು”. “ಕೀಟದ ಭಕ್ಷಣೆಯಲ್ಲಿ ತೊಡಗಿದ್ದ ನೆಲ ಕುಟುಕ ನೋಡಲು ಅತ್ಯಾಕರ್ಷಕವಾಗಿ ಕಾಣುವ ಹಕ್ಕಿಯಾಗಿದೆ. ಈ ಹಕ್ಕಿಯ ಮೈಮೇಲೆಲ್ಲ ಜೀಬ್ರಾ ಪಟ್ಟೆಗಳಂತೆ ಕಪ್ಪು ಬಿಳಿ ಪಟ್ಟೆಗಳಿವೆ. ಕುತ್ತಿಗೆ, ಎದೆ ಕಿತ್ತಳೆ ಬಣ್ಣ. ತಲೆಯ ಮೇಲೆ ನವಿಲಿಗಿರುವಂತೆ ಬೀಸಣಿಗೆ ಚೊಟ್ಟಿ ಇದೆ. ಚೊಟ್ಟಿಯ ತುದಿಯಲ್ಲಿ ಕಪ್ಪು ಮಚ್ಚೆಗಳಿವೆ. ಚೊಟ್ಟಿಯನ್ನು ಇದು ಮಡಚಿಕೊಂಡಾಗ ಹಿಮ್ಮುಖನಾಗಿರುವ ಇನ್ನೊಂದು ಕೊಕ್ಕಿನಂತೆ ಕಾಣುತ್ತದೆ. ಒಂಟಿಯಾಗಿ ಯಾವಾಗಲೂ ನೆಲ ಕೆದಕುತ್ತಾ ಇರುತ್ತದೆ”. ಹುಲ್ಲು ಮೈದಾನಗಳಲ್ಲಿ, ತೋಟ-ಪಟ್ಟಿಗಳಲ್ಲಿ, ನೀರಾವರಿ ಪ್ರದೇಶದ ಹೊಲಗಳಲ್ಲಿ, ಇವು ಇರುವುದು ಹೆಚ್ಚು. ನೆಲ ಕೆದಕಿ ಹುಳುಗಳನ್ನು ಹಿಡಿದು ತಿನ್ನುತ್ತವೆ. ಫೆಬ್ರವರಿಯಿಂದ ಮೇ ವರೆಗೆ ಕಟ್ಟಡಗಳ ಸಂದುಗಳಲ್ಲಿ, ಮರದ ಪೊಟರೆಗಳಲ್ಲಿ ಹುಲ್ಲಿನ ಗೂಡು ನಿರ್ಮಿಸಿಕೊಂಡು ಇವು ಸಂತಾನಾಭಿವೃದ್ಧಿ ಮಾಡುತ್ತವೆ. ಹೀಗೇ ನವಿಲುಧಾಮದ ಸುತ್ತಾಟದಲ್ಲಿ ಹಲವು ನವಿಲುಗಳ ಚಿತ್ರಗಳ ಜೊತೆಗೆ ಇತರೇ ಪಕ್ಷಿಗಳು ಸಹ ಕ್ಯಾಮರಾ ಕಣ್ಣಿಗೆ ಬಿದ್ದವು, ಅವುಗಳ ಬಗ್ಗೆ ಪುಟ್ಟ ವಿವರಣೆ ಹಾಗೂ ಛಾಯಾಚಿತ್ರಳಿವು.
ಚಿತ್ರಗಳು/ಲೇಖನ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...