೨೭ಲಕ್ಷರೂ ಹಣ ನುಂಗಿದ ಆರೋಪಿಯಿಂದ ಪ್ರಸನ್ನಾನಂದಪುರಿಶ್ರೀ ವಿರುದ್ಧ ಆಪಾದನೆ ಸತ್ಯಕ್ಕೆ ದೂರ
ಹಾವೇರಿ: ರಾಣೆಬೆನ್ನೂರಲ್ಲಿ ವಾಲ್ಮೀಕಿ ಸಮಾಜದ ಧೀಮಂತ ವ್ಯಕ್ತಿ ದಿ. ಎಲ್.ಜಿ.ಹಾವನೂರ ಅವರು ಶಾಲೆ ಸ್ಥಾಪಿಸಲು ಉಚಿತವಾಗಿ ನೀಡಿದ ೧.೫ಎಕರೆ ಜಮೀನನಲ್ಲಿ ಸ್ಥಾಪಿಸಲಾಗಿರುವ ಶಾಲೆಯ ಆಡಳಿತ ಮಂಡಳಿಯ ಹಿಂದಿನ ಉಚ್ಚಾಟಿತ ಕಾರ್ಯದರ್ಶಿ ಹಾಗೂ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಇತನ ಸಹೋದರಿ ಸೇರಿಕೊಂಡು ಶಾಲೆಯ ೨೭ಲಕ್ಷರೂಗಳನ್ನು ದುರುಪಯೋಗ ಪಡಿಸಿಕೊಂಡ ಕಾರಣಕ್ಕೆ ಇವರನ್ನು ಶಾಲೆಯಿಂದ ತಗೆದು ಹಾಕಲಾಗಿದ್ದು, ತನ್ನ ಈ ಹಗರಣವನ್ನು ಮುಚ್ಚಿಕೊಳ್ಳಲು ವಂಚನೆ ಮಾಡಿರುವ ಆರೋಪಿಯೇ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಮಾರುತಿ ಮ್ಯಾನ್ ಪವರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ತಳವಾರ ಹೇಳಿದರು.
ಗುರುವಾರ ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾವನೂರು ಅವರು ನೀಡಿರುವ ಜಮೀನಿನಲ್ಲಿ ಸ್ಕೂಲ್ ಕಟ್ಟಿ, ೧೫೦ಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ವಾಲ್ಮೀಕಿ ಪೀಠದ ಸ್ವಾಮಿಜಿ ನೀಡುತ್ತಿದ್ದಾರೆ. ಈ ಶಾಲೆಯಲ್ಲಿ ಕಾರ್ಯದರ್ಶಿಯಾಗಿದ್ದ ಶ್ರೀಧರ್ ಚಿಕ್ಕಣ್ಣವರ ಮಾಡಿದ ಹಣಕಾಸಿನ ಅಪರಾತಪರಾವನ್ನು ಪ್ರಶ್ನಿಸಿ, ದುರುಪಯೋಗ ಪಡೆಸಿಕೊಂಡ ೨೭ಲಕ್ಷರೂ ಹಣವನ್ನು ವಾಪಾಸ ಮರಳಿಸುವಂತೆ ಈ ಬಗ್ಗೆ ನೋಟಿಸ್ ನೀಡಲಾಗಿತ್ತು. ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆಯ ಡ್ರಾಮಾ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಖಾಸಗಿ ದೂರು ನೀಡಿದ್ದಾರೆ. ಈ ದೂರಿನ ಹಿಂದೆ ಸಮಾಜ ಘಾತುಕ ಶಕ್ತಿಗಳ ಕೈವಾಡ ಇದೆ ಎಂದು ಅವರು ಆರೋಪಿಸಿದರು.
ಶಾಲೆಯಲ್ಲಿ ನಡೆದ ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಕನ್ನಡ ಸಹಶಿಕ್ಷಕಿಯಾಗಿದ್ದ ಜಯಶೀಲ ಚಿಕ್ಕಣ್ಣವರನ್ನು ಅಮಾನತು ಮಾಡಲಾಗಿದೆ. ಡಿಡಿಪಿಐ ಅವರಿಗೆ ವಿಚಾರಣೆ ನಡೆಸಿಸಲು ಪತ್ರ ಬರೆಯಲಾಗಿದೆ. ಶ್ರೀಧರ ಅವರಿಗೆ ನೋಟೀಸ್ ನೀಡಲಾಗಿತ್ತು. ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಈ ಕೆಲಸ ಮಾಡಿದ್ದು, ಸಮಾಜದ ಉನ್ನತಿಗೆ ಹಗಲಿರುಳ ಶ್ರಮಿಸುತ್ತಿರುವ ಗುರುಗಳ ಬಗ್ಗೆ ಕಪೋಲ ಕಲ್ಲಿತ ಆರೋಪ ಮಾಡಿರುವುದನ್ನು ವಾಲ್ಮೀಕಿ ಸಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಶ್ರೀಧರ ೨೭ಲಕ್ಷ ಹಣ ದುರುಪಯೋಗ ಪಡೆಸಿಕೊಂಡು, ದಾಖಲೆಗಳಿಗೆ ೨೯೬ ಬಾರಿ ವೈಟ್ನರ್ ಹಚ್ಚಿದ್ದಾರೆ. ೧೩ ಲಕ್ಷರೂಗಳನ್ನು ಶಾಲಾವಾಹನದ ಮೇಲೆ ರಿಲೋನ್ ಮಾಡಿದ್ದಾರೆ. ಲಕ್ಷಾಂತರ ರೂಗಳನ್ನು ತಮ್ಮಖಾತೆಗೆ ಬಳಸಿಕೊಂಡು ವಾಹನದ ಬ್ಯಾಟರಿಯನ್ನು ಸಹ ಕಳವು ಮಾಡಿಕೊಂಡಿದ್ದು, ಈ ಅವ್ಯವಹಾರದ ಬಗ್ಗೆ ೮ಬಾರಿ ನೋಟಿಸ್ ಕೊಡಲಾಗಿದೆ. ಅಮಾನತು ಆದಮೇಲೆ ಪಿಸಿಆರ್ ಹಚ್ಚಿದ್ದಾರೆ. ಡಿಡಿಪಿಐ ಅವರು ನೀಡುವ ವರದಿ ಆಧರಿಸಿ ಕಾನೂನು ಪ್ರಕಾರ ಕ್ರಮ ತಗೆದುಕೊಳ್ಳಲಾಗುವುದು, ಈ ಬಗ್ಗೆ ತನಿಖೆಗೆ ಈಗಾಗಲೇ ಉಪ ಸಮಿತಿ ರಚನೆ ಮಾಡಲಾಗಿದೆ. ಹಣಕಾಸಿನ ಅವ್ಯವಹಾರ ಋಜುವಾತು ಆದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬಸವರಾಜ ತಳವಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ ಶ್ರೀಗಳಿಗೆ ಶುಗರ್ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರ ಸಲಹೆಯಂತೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀಗಳು ಗುಣಮುಖರಾಗುತ್ತಿದ್ದಾರೆ. ವಾಲ್ಮೀಕಿ ಸಮಾಜದ ಪರಿಶಿಷ್ಟ ಪಂಗಡಕ್ಕೆ ಅನ್ಯ ಸಮುದಾಯದವರನ್ನು ಸೇರಿಸುವ ಹುನ್ನಾರದ ವಿರುದ್ಧ ವಾಲ್ಮೀಕಿ ಶ್ರೀಗಳು ಪ್ರಭಲ ಹೋರಾಟ ರೂಪಿಸುತ್ತಿದ್ದ ಈ ಸಂದರ್ಭದಲ್ಲಿ ಕೆಲವರು ಕುಮ್ಮಕ್ಕಿನಿಂದ ಅವರ ಮೇಲೆ ಸುಳ್ಳ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಮುಖಂಡರುಗಳಾದ ನಾಗರಾಜ ಹಳ್ಳಳ್ಳೆಪ್ಪನವರ, ಚಂದ್ರಪ್ಪ ಬೇಡರ, ಹನುಮಂತಪ್ಪ ಮೀನುಕಟ್ಟೆ, ವಿಜಯ ಹಿತ್ತಲಮನಿ, ಸುರೇಶ್ ಮಲ್ಲಾಪುರ, ಮಂಜುನಾಥ ಮುಗದೂರ, ಕರವಸಪ್ಪ, ಬಸವರಾಜ ತಳವಾರ ಬಿಟಿ, ಸಂತೋಷ ಬುಳ್ಳಮ್ಮನವರ, ಶಿವಕುಮಾರ್ ತಳವಾರ ಮೊದಲಾದವರು ಇದ್ದರು.

—