೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

Date:

ಹಾವೇರಿ: ನಗರದ ನಾಗೇಂದ್ರ ಮಟ್ಟಿಯ ಶಾಂತಿನಗರದಲ್ಲಿ ನಿರ್ಮಾಣ ಮಾಡುತ್ತಿರುವ ಜಿ+೧ ಮಾದರಿಯ ಆಶ್ರಯ ಮನೆಗಳ ಕಾಮಗಾರಿ ಸ್ಥಳಕ್ಕೆ ಭಾನುವಾರ ವಿಧಾನಸಭೆಯ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಶ್ರಯ ಮನೆಗಳ ಕಾಮಗಾರಿಯೂ ನಿಧಾನಗತಿಯಿಂದ ಕೈಗೊಂಡಿರಿವ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಉಪ ಸಭಾಧ್ಯಕ್ಷರು ಎರಡು ತಿಂಗಳು ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದರು.
ಅಲೆಮಾರಿ ಮತ್ತು ಅರೆ ಅಲೆಮಾರಿ ಪಲಾನುಭವಿಗಳ ಮನವಿ : ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಅವರು ಆಶ್ರಯ ಮನೆಗಳ ಪರಿಶೀಲನೆಯ ವಿಷಯ ಗೊತ್ತಾಗುತ್ತೆದಂತೆ ಸ್ಥಳಕ್ಕೆ ಆಗಮಿಸಿದ ಅಲೆಮಾರಿ ಸಮಾಜದ ಫಲಾನುಭವಿಗಳು, ನಮಗೆ ಮಳೆಗಾಲದಲ್ಲಿ ಮನೆ ಇಲ್ಲದೆ ಇರುವುದರಿಂದ ತುಂಬಾ ತೊಂದರೆಯಾಗುತ್ತಿದ್ದು ಮಕ್ಕಳೊಂದಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ನಾವು ಅಲೆಮಾರಿ ಸಮಾಜದವರಾಗಿದ್ದು ಪ್ರತಿದಿನ ದುಡಿದರಷ್ಟೇ ಹೊಟ್ಟೆ ತುಂಬುತ್ತದೆ, ಆದ ಕಾರಣ ನಮಗೆ ನಮ್ಮ ಕುಟುಂಬದ ಮತ್ತು ಮಕ್ಕಳ ರಕ್ಷಣೆಗಾಗಿ ಆದಷ್ಟು ಬೇಗನೆ ಮನೆಗಳನ್ನು ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ರುದ್ರಪ್ಪ ಲಮಾಣಿ ಮಾತನಾಡಿ ಅಲೆಮಾರಿ ಸಮಾಜ ಮತ್ತು ಎಲ್ಲಾ ಬಡ ಫಲಾನುಭವಿಗಳಿಗೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಆದಷ್ಟು ಬೇಗನೆ ಮನೆಗಳನ್ನು ಹಸ್ತಾಂತರಿಸುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ್ ನೇರಲಗಿ, ಆಶ್ರಯ ಸಮಿತಿ ಸದಸ್ಯ ಕುಮಾರ್ ಇನಾಮ್ದಾರ್, ಮಲ್ಲೇಶಪ್ಪ ಪಟ್ಟಣಶೆಟ್ಟಿ, ದಾಸಪ್ಪ ಕರ್ಜಗಿ, ನಾಗರಾಜ್ ಬಡಮ್ಮನವರ್ ಸೇರಿದಂತೆ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ: ಡಿಸಿ ಡಾ. ವಿಜಯಮಾಹಾಂತೇಶ್ 

ಹಾವೇರಿ :  ಏಪ್ರಿಲ್ ೧ರಿಂದ ೧೫ರವರೆಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ...

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!

ಹಾವೇರಿಯ ಶಿವಜ್ಯೋತಿ ಆಸ್ಪತ್ರೆಯ ಒಳಗಡೆ ನುಗ್ಗಿದ ಕಾರು -ಅಪಾಯದಿಂದ ಪಾರು!  ಹಾವೇರಿ :...