
ಅಪಘಾತದಲ್ಲಿ ಮೃತಪಟ್ಟ ರುದ್ರಪ್ಪ ತಂದೆಗೆ ಸಾಂತ್ವನ ಹೇಳಿದ ಸಚಿವ ಶಿವಾನಂದ ಪಾಟೀಲ್
ಹಾವೇರಿ: ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಂಜುನಾಥ (ರುದ್ರಪ್ಪ) ಅಂಗಡಿ ಅವರ ಮನೆಗೆ ಸೋಮವಾರ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದರು.
ಹಾವೇರಿ ನಗರದ ಇಜಾರಿಲಕಮಾಪುರದಲ್ಲಿರುವ ರುದ್ರಪ್ಪ ಅಂಗಡಿ ಮನೆಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ್ ರುದ್ರಪ್ಪ ತಂದೆ ತಾಯಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ರುದ್ರಪ್ಪ ಅವರ ತಂದೆ “ನಮಗೆ ವಯಸ್ಸಾಗಿದೆ, ನಾವು ಆರಾಮ ಇದ್ದೇವೆ, ಆರಾಮ ಇರ್ತೇವೆ ಎಂದು ಭಾವುಕರಾದರು. ಮಗ ಸೊಸೆ ಮೊಮ್ಮಕ್ಕಳು ಎಲ್ಲರನ್ನು ಕಳೆದುಕೊಂಡಿದ್ದೇವೆ” ಎಂದು ಕಣ್ಣೀರು ಹಾಕಿದರು.
ಈ ಸಂದರ್ಭದಲ್ಲಿ ರುದ್ರಪ್ಪ ತಂದೆಗೆ ಸಾಂತ್ವನ ಹೇಳಿದ ಸಚಿವ ಶಿವಾನಂದ ಪಾಟೀಲ್ ಈ ರೀತಿಯ ಘಟನೆ ನಡೆಯಬಾರದಿತ್ತು ನಡೆದಿದೆ. ಸರ್ಕಾರದಿಂದ ಎಲ್ಲ ರೀತಿಯ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮುಂಜಾನೆ ವಾಹನಗಳನ್ನು ಚಲಾಯಿಸಬಾರದು. ಇವರು ನಸುಕಿನಜಾವ ಪಯಣಿಸಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ” ಎಂದು ಸಾಂತ್ವನ ಹೇಳಿದರು.
ಈಸಂದರ್ಭದಲ್ಲಿ ವಿಧಾನಸಭೆಯ ಉಪ ಸಭಾಪತಿರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮತ್ತಿತರರು ಇದ್ದರು.

