
ಅರಸು ನಿಗಮಕ್ಕೆ ಎಮ್. ಎನ್. ಹೊನಕೇರಿ ನೇಮಕ
ಹಾವೇರಿ: ಜಿಲ್ಲೆಯ ಶಿಗ್ಗಾವ್ ತಾಲೂಕಿನ ಬಂಕಾಪುರ ನಗರದ ನಿವಾಸಿ ಕರ್ನಾಟಕ ಪ್ರದೇಶ ಕುರುಬ ಸಂಘದ ಮುಖಂಡ. ಹಾಗೂ ಹಾವೇರಿ ಜಿಲ್ಲಾ ಭಾರತಿ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಮ್. ಎನ್. ಹೊನಕೇರಿ ಇವರನ್ನು ಡಿ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಬೆಂಗಳೂರು ಇದರ ನಾಮನಿರ್ದೇಶಕ ಸದಸ್ಯರನ್ನಾಗಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಆದೇಶದ ಮೇರೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

