
ಈ ಸ್ವತ್ತುಗೆ ಲಂಚ-ಹಿರೇಕೆರೂರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ ಬಂಧನ
ಹಾವೇರಿ: ಈ ಸ್ವತ್ತು ಮಾಡಿಸಲು ಲಂಚ ಪಡೆದ ಹಿರೇಕೆರೂರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ ಹಿರೇಕೆರೂರು ಪಟ್ಟಣ ಪಂಚಾಯತ ಕಚೇರಿಯಲ್ಲಿ ಜಿಲ್ಲೆಯ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಶನಿವಾರ ನಡೆದಿದೆ.
ಹಿರೇಕೆರೂರು ಪಟ್ಟಣದ ಸ್ವಿವಿಲ್ ಇಂಜನಿಯರ ಮೊಹಮ್ಮದ್‌ಆಖಿಬ ಮತ್ತೂರು ಅವರ ಈ ಸ್ವತ್ತು ಮಾಡಿಸಲು ಮುಖ್ಯಾಧಿಕಾರಿ ಪಂಪಾಪತಿ ನಾಯ್ಕಗೆ ಮೊದಲು ೧೦ಸಾವಿರೂಗಳನ್ನು ಪಡೆದುಕೊಂಡಿದ್ದು, ನಂತರ ಸೆ.೩೦ರಂದು ಮತ್ತೆ ೧೦ಸಾವಿರೂಗಳ ಲಂಚಕ್ಕೆ ಬೇಡಿಕೆಇಟ್ಟ ವೇಳೆ ಅವರ ಕಚೇರಿಯಲ್ಲಿ ಲೋಕಾಯುಕ್ತರು ದಾಳಿ ಮಾಡಿ ಪಂಪಾಪತಿ ನಾಯ್ಕರನ್ನು ಟ್ರಾಪ್ ಮಾಡಿದ್ದಾರೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನ ಹಾವೇರಿಜಿಲ್ಲೆಯ ಲೋಕಾಯುಕ್ತರು ಕೈಗೊಂಡು, ಆರೋಪಿ ಪಂಪಾಪತಿ ನಾಯ್ಕನನ್ನು ಹಿರೇಕೆರೂರು ಪಟ್ಟಣ ಪಂಚಾಯತಿಯಲ್ಲಿ ಬಂಧಿಸಿದ್ದು, ಪ್ರಸ್ತುತ ಹಿರೇಕೆರೂರು ಪಟ್ಟಣದಲ್ಲಿಯೇ ಇರುವ ಅವರ ವಸತಿ ಹದಲ್ಲಿ, ಕಛೇರಿಯಲ್ಲಿಯು ಶೋಧನೆ ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು, ವಸತಿ ಗೃಹದಲ್ಲಿ ಸುಮಾರು ೩,೫೦೦೦೦/- ಹಾಗೂ ಇತರೆ ದಾಖಲಾತಿಗಳು ದೊರೆತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆದಿದೆ.

