ಒಂದರಹಿಂದೆ ಒಂದು ಬೆನ್ನುಹತ್ತಿರುವ ಗಡಿಯಾರದ ಸಣ್ಣ-ದೊಡ್ಡ ಮುಳ್ಳುಗಳು…… ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ಮಳೆಗಾಲದ ಅತಿಥಿಗಳು………….

Date:

ಮಘ(ಮಗಿ)ಮಳೆಯ ಲೀಲೆಯೋ, ವಾತಾವರಣದಲ್ಲಿನ ಏರು-ಪೇರೋ? ಒಮ್ಮೆ ಮಳೆ, ಒಮ್ಮೆ ಬಿಸಿಲು,ಇನ್ನೊಮ್ಮೆ ತಂಡಿ- ಬಿರುಗಾಳಿ ವಾತಾವರಣಕ್ಕೆ ದೇಹ ಜರ್ಜಿರತಗೊಂಡು ಶೀತಬಾಧೆಯಿಂದ ನರಳಿ ಹಾಸಿಗೆಯಿಂದ ಏಳಲು ಸೋಮಾರಿ ಮನಸ್ಸು ಬಿಡಲಿಲ್ಲ. ಆ.೨೧-೨೦೨೪ರ ಬುಧವಾರ ಅದಾಗಲೇ ಗಡಿಯಾರದಲ್ಲಿನ ಸಣ್ಣ-ದೊಡ್ಡ ಮುಳ್ಳುಗಳು ಒಂದರ ಹಿಂದೆ ಒಂದು ಬೆನ್ನುಹತ್ತಿದ್ದವು. ಸಮಯ ೮-೧೫ ದನ್ನು ದಾಟಿ ಮುನ್ನಡೆದಿದ್ದವು. ಅಷ್ಟರಲ್ಲಿಯೇ, ನನ್ನ “ಜಂಗಮವಾಣಿ” ಬಡಿದುಕೊಳ್ಳಲಾರಂಭಿಸಿತು. ಕೀರಲು ಧ್ವನಿಯಲ್ಲಿ ಯಾರು? ಎಂದೇ. ಆ ಕಡೆಯಿಂದ ಸರ್, ನಾನು ಬಾಪು ಮಾತಾಡೋದು, “ನಮ್ಮೂರು ಚಿಕ್ಕಲಿಂಗದಳ್ಳಿಕೆರೆಯೋಳ್ಗ ವಿಚಿತ್ರ, ವಿಚಿತ್ರ ಪ್ರಾಣಿ ಕಾಣಿಸಿಕೊಂಡಾವು, ಸಿಕ್ಕಾಪಟ್ಟೆ ಮೀನಾ ತಿನ್ನಾಕ ಹತ್ಯಾವು, ಬಹುಷ್ಯ ಅವರು ನೀರುನಾಯಿ ಇರಬಹುದು” ಲಗೂನ ಬರ್ರಿ ಎಂದು ಕರೆ ಸ್ಥಗಿತಗೊಳಿಸಿದ.
“ಅನಾರೋಗ್ಯ” ಎಂದು ಹೇಳಬೇಕೆನ್ನುಷ್ಟರಲ್ಲಿಯೇ, ಕರೆ ಅಂತ್ಯಗೊಂಡಿದ್ದರಿಂದ ಲಗೂಬಗೆಯಿಂದ ಮುಖ ಮಾರ್ಜನ ಮಾಡಿಕೊಂಡು, “ದೂಳು ಹಿಡಿದಿದ್ದ ಕ್ಯಾಮೇರಾ ಬ್ಯಾಗಿನ ದೂಳು ಕೊಡವಿ, ಕ್ಯಾಮೇರಾ, ಬ್ಯಾಟರಿಯನ್ನು ಚೆಕ್ ಮಾಡಿಕೊಂಡೆ. ಆರಾಮಿಲ್ಲ ಎಂದವರು ಎಲ್ಲಿಗೋ ಹೊರಟಿದ್ದಾರೆ ಎನ್ನುವ ತಕರಾರಿನ ಮುಖಭಾವದಿಂದ ಸೂಕ್ಷ್ಮವಾಗಿ ನನ್ನ ಕಡೆ ನೋಡುತ್ತಿದ್ದ ಮನೆಯಾಕೆ, “ರಾತ್ರಿ ಪೂರಾ ನರಳಿದ್ದೀರಿ, ಹೊರಗಡೆ ತಂಡಿ ವಾತಾವರಣ ಇದೆ, ಸುಮ್ಮನೆ ಬಿದ್ದಕೊಳ್ಳ್ರೀ. ಯಾಕಬೇಕು? ಇಂತಾ ಹೊತ್ತಿನ್ಯಾಗ ಪ್ರಾಣಿ-ಪಕ್ಷಿ ಫೋಟೋ ತಗಿಯೋದು? ಇಂತಾ ಹುಚ್ಚುಮಳಿ, ಚಳಿಯೋಳ್ಗ ಕೆರೆ-ಕಟ್ಟಿಕಡೆಗೆ ಹೋಗುವುದು ಬೇಡ ಎಂದು ಗದರಿದಳು”.
ಕಿರಿಯ ಮಿತ್ರ ಮಾರುತಿ ಮರಾಠ ನನ್ನ “ಕಾಡು-ಮೇಡು” ಅಲೆಯುವ ಹವ್ಯಾಸ ಕಂಡು ತಿರುಗಾಟದ ವೇಳೆ ಹಾಕಿಕೊಳ್ಳಲು ನೀಡಿದ್ದ ಬೆಚ್ಚನೆ ಜಾಕೆಟ್ ಧರಿಸಿ ನಾನಾ ಅದಾಗಲೇ ಕ್ಯಾಮೇರಾ ಬ್ಯಾಗ ಹೆಗಲೇರಿಸಿಕೊಂಡು ವ ಬೈಕ್ ಕಿಕ್ ಹೊಡೆದಿದ್ದೆ. ಕೊಟ…. ಕೊಟ…. ಎನ್ನುತ್ತಾ ಹೊಗೆ ಚೆಲ್ಲಿದ ಬೈಕ್ ಸವಾರಿಗೆ ಸಿದ್ದವಾಗಿತ್ತು. ಇನ್ನು, ಇವನನ್ನು ತಡೆಯುವುದು ಸಾಧ್ಯವಿಲ್ಲ! ಎಂದು ಮನಸ್ಸಿನಲ್ಲಿ ಬೈದುಕೊಂಡ ಮನೆಯಾಕೆ “ನಾನು ಇದ್ದಲ್ಲಿಗೇ ಬಿಸಿಯಾದ ಕಷಾಯ ತಂದು ಕೊಟ್ಟಳು. ಕಾಷಾಯ ಕುಡಿದು ಕಾಗಿನೆಲೆ ಮಾರ್ಗದಲ್ಲಿ ಬೈಕ್ ಓಡಿಸಿ ೧೦ನಿಮಿಷದಲ್ಲಿ ಚಿಕ್ಕಲಿಂಗದಹಳ್ಳಿ ಕೆರೆ ತಲುಪಿದೆ”. “ಅದಾಗಲೇ ಹತ್ತಾರು ಯುವಕರು, ವಯಸ್ಸಾದವರು ಕೆರೆಯ ಸುತ್ತ ನೆರೆದು ಕೆರೆಯಲ್ಲಿ ವಿಚಿತ್ರಪ್ರಾಣಿಗಳು ಮೀನು ಭಕ್ಷಿಸುತ್ತಿರುವುದನ್ನು ವೀಕ್ಷಿಸುತ್ತಿದ್ದರು”.
ಕ್ಯಾಮರಾ ಜೂಮ್ ಮಾಡಿ ನೋಡಿದೇ, “ಕೆರೆಯಲ್ಲಿ ಕಂಡು ಬಂದಿರುವ ವಿಚಿತ್ರಪ್ರಾಣಿಗಳು ಅವು ನೀರುನಾಯಿಗಳಾಗಿದ್ದವು”. ಈ ಹಿಂದೆ ಹಾವೇರಿಯ ಪರಿಸರದಲ್ಲಿ ನೀರುನಾಯಿಗಳ ಇರುವಿಕೆಯ ಬಗ್ಗೆ ದಾಖಲಿಸಿದ್ದೆ, ಅವುಗಳ ಹತ್ಯೆ ನಡೆದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದೆ. ಮೇಲಾಗಿ ಫೆ.೨೪-೨೦೨೪ರಂದು ಹಾವೇರಿಯ ಇತಿಹಾಸ ಪ್ರಸಿದ್ದ ಹೆಗ್ಗೇರೆಕೆರೆಯಲ್ಲಿ ೧೩ಕ್ಕೂ ಹೆಚ್ಚು ನೀರುನಾಯಿಗಳು ಕಂಡಿರುವ ಬಗ್ಗೆ ಅವುಗಳ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದೆ. ಅವುಗಳ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡ ಕಾರಣಕ್ಕೆ ಚಿಕ್ಕಲಿಂಗದಹಳ್ಳಿಗ್ರಾಮಸ್ಥರಿಗೆ ವಿಚಿತ್ರಪ್ರಾಣಿಗಳು ಬೇರೆನು ಅಲ್ಲ, ಅವು ನೀರುನಾಯಿ ಎಂದು ವಿವರಿಸಿದೆ.
ಸಮುದ್ರದವರೆಗಿನ ಹಿನ್ನೀರು ಹಾಗೂ ನದಿಗಳಲ್ಲಿ ಕಂಡು ಬರುವ “ನೀರುನಾಯಿ”ಗಳ ಹಿಂಡು ಹಾವೇರಿ ಐತಿಹಾಸಿಕ ಹೆಗ್ಗೇರೆಕೆರೆಯಲ್ಲಿ ಫೆ.೨೪-೨೦೨೪ರಂದು ಕಂಡು ಬಂದಿದ್ದವು. ಅವುಗಳು ಹೆಗ್ಗೇರೆಕೆರೆಯ ಹತ್ತಿರದಲ್ಲಿರುವ ಚಿಕ್ಕಲಿಂಗದಹಳ್ಳಿಕೆರೆಯಲ್ಲಿ ಸಾಕಷ್ಟು ಮೀನು ಇರುವುದರಿಂದ ಅಲ್ಲಿಂದ ನೀರುನಾಯಿಗಳು ಇಲ್ಲಿಗೆ ಮೀನು ಬೇಟೆಯಾಡಲು ಬಂದಿರಬಹುದು ಎನ್ನುವ ಉಹೇ ನನ್ನದು.
ಕೆರೆಯ ಪರಸರಕ್ಕೆ ಬಂದಿದ್ದು ಹೇಗೆ?: ಕಾವೇರಿ, ಕಾಳಿ, ತುಂಗಭದ್ರಾ ನದಿಗಳ ಪರಿಸರದಲ್ಲಿ ದೊಡ್ಡ ತೊರೆಗಲ್ಲಿ ಕಂಡು ಬರುವ “ಪ್ರೇಶ್ ವಾಟರ್ ಓಟರ್”(ಸಿಹಿನೀರು ನಾಯಿ ) ಹಂಪಿಯ ಪರಿಸರದಲ್ಲಿನ ತುಂಗಭದ್ರಾನದಿಯಲ್ಲಿ ಕಂಡು ಬರುವುದು ಸಾಮಾನ್ಯ. ಜಿಲ್ಲೆಯ ಕೆಲವು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ತುಂಗಭದ್ರಾ ನೀರನ್ನು ಯುಟಿಪಿ ಕಾಲುವೆಗಳ ಮೂಲಕ ಹರಿಸಿದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಒಳಗಾಗಿಯೋ, ಆಗಾಗ ವಲಸೆ ಹೋಗುವ ಇವುಗಳ ಗುಣದಿಂದಲೋ ಏನೋ? ನೀರು ನಾಯಿಗಳು ಇಲ್ಲಿಗೆ ಬಂದಿರುವ ಸಾಧ್ಯತೆಗಳಿವೆ.
“ನೀರು ನಾಯಿಗಳ ಪ್ರಮುಖ ಆಹಾರ ಮೀನು, ಇವುಗಳು ಪ್ರತ್ಯೇಕವಾಗಿ ಬೇಟೆಯಾಡುತ್ತವೆ. ಆದರೆ ಒಟ್ಟಿಗೆ ಮಲವಿಸರ್ಜನೆ ಮಾಡುವ ಮೂಲಕ ತಮ್ಮ ಗಡಿ ಗುರುತಿಸುವ ಕಾರ್ಯವನ್ನು ಇವು ಒಟ್ಟಗೆ ಮಾಡುತ್ತವೆ. ವೈರಿಗಳು ತಮ್ಮ ಪ್ರದೇಶಕ್ಕೆ ನುಗ್ಗದಂತೆ ಇವು ಎಚ್ಚರಿಕೆ ನೀಡುತ್ತವೆ. ವನ್ಯಜೀವಿಗೆ ಯಾವುದೇ ಗಡಿ ತಿಳಿದಿಲ್ಲ ತನ್ನ ಸಂರಕ್ಷಣೆಗಾಗಿ ಹೋರಾಟ ಈ ಸಂರಕ್ಷಿತ ಪ್ರದೇಶದ ಹೊರಗೆ ನಡೆಯುತ್ತದಂತೆ!”.
ನೀರುನಾಯಿಗಳು ಅರೆ-ಜಲ ಪ್ರಾಣಿಗಳಾಗಿವೆ. ಮೀನು ಮತ್ತು ಕಠಿಣ ಚರ್ಮಿಗಳ ಮೇಲಿರುವ ಆಹಾರವನ್ನು ಹೊಂದಿರುವ ವಿಶ್ವದ ೧೩ ಒಟರ್ಗಗಳಲ್ಲಿ ಮೂರು ಪ್ರಭೇದಗಳಿಗೆ ಭಾರತ ನೆಲೆಯಾಗಿದೆ. ದೇಶದಲ್ಲಿ ಮೂರು ಜಾತಿಗಳ ಪೈಕಿ ಅತಿದೊಡ್ಡ-ಹೊದಿಕೆಯ “ನೀರುನಾಯಿ”ಗಳು, ಸಾಂಪ್ರದಾಯಿಕವಾಗಿ ಒಂದು ಸಿಹಿನೀರಿನ ಪ್ರಭೇದವಾಗಿದೆ. ಅಲ್ಲದೇ ಅತಿ ಚಿಕ್ಕ ನೀರುನಾಯಿ ಪ್ರಭೇದ ಹಾವೇರಿಯ ಪರಿಸರದಲ್ಲಿ ಕಂಡಿವೆ.
ನೀರುನಾಯಿಗಳು ಉತ್ಸಾಹದ ಚುರುಕುಬುದ್ಧಿಯದಾಗಿದ್ದು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಭೂಮಿ ಮತ್ತು ನೀರಿನ ಮೇಲೆ ವೇಗವಾಗಿ ಚಲಿಸುತ್ತವೆ. ಇವುಗಳು ಆಹಾರ ಮೀನು, ಹಾವುಗಳು, ಉಭಯಚರಗಳು, ಇಲಿ, ಹೆಗ್ಗಣ, ಸಣ್ಣ ಸಸ್ತನಿಗಳು ಮತ್ತು ಚಿಕ್ಕ ಹಕ್ಕಿಗಳನ್ನು ಇವು ಬೇಟೆಯಾಡುತ್ತವೆ. ಇವುಗಳ ವಿಶಿಷ್ಟ ಜೀವಿತಾವಧಿ ೪ ರಿಂದ ೧೦ ವರ್ಷಗಳು, ಆದರೆ ಯಾವುದೇ ನಿರ್ಣಾಯಕ ಅಧ್ಯಯನಗಳನ್ನು ಮಾಡಲಾಗಿಲ್ಲ. ಹಾವೇರಿಯ ಪರಿಸರದಲ್ಲಿ ಪತ್ತೆಯಾಗಿರುವ”ನೀರು ನಾಯಿ” ಯಾವ ಪ್ರಬೇದವಾಗಿದೆ ಎನ್ನುವುದನ್ನು ಸಂಶೋಧಿಸಬೇಕಿದೆ. ನನ್ನ ಗಮನಕ್ಕೆ ಬಂದಂತೆ ಚಿಕ್ಕಲಿಂಗದಹಳ್ಳಿ ಕೆರೆಯಲ್ಲಿ ೧೬ ನೀರುನಾಯಿಗಳು ಕಂಡಿವೆ. ಇವುಗಳಲ್ಲಿ ಆರು ಮರಿಗಳು, ಆರು ದೊಡ್ಡ ಅಂದಾಜು ಸುಮಾರು ೧ ಮೀ ಯಿಂದ ೨ ಮೀಟರ್ ಉದ್ದ ಇರುವ ನೀರು ನಾಯಿಗಳಿವೆ.
ಅಭಿವೃದ್ಧಿಯ ನೆಪದಲ್ಲಿ ಮೂಲ ಸೌಕರ್ಯದ ಬೆಳವಣಿಗೆಗಳು ಹೊಂದುತ್ತಿರುವುದರಿಂದ “ನೀರು ನಾಯಿ”ಗಳು ಹರಿವ ನೀರಿನ ಮೂಲಕ ಇಲ್ಲಿಗೆ ಬಂದಿರುವ ಸಾಧ್ಯಗಳು ಹೆಚ್ಚು!. ಇವುಗಳ ಆವಾಸಸ್ಥಾನದ ವಿನಾಶವು ಸಹ ಇದಕ್ಕೆ ಕಾರಣವಾಗಿದ್ದು, ಓಟರ್ ಸಂಖ್ಯೆಯನ್ನು ಅತ್ಯಂತ ದುರ್ಬಲಗೊಳಿಸುತ್ತಿದೆ. ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ವಿಷಗಳು ನೀರಿನಲ್ಲಿ ಬೆರೆತು ನೀರುನಾಯಿಗಳು ಬೇಟೆಯಾಡುವ ಮೀನು ಮತ್ತಿತರ ಪ್ರಾಣಿ-ಪಕ್ಷಿಗಳ ದೇಹ ಸೇರಿ ಆವುಗಳನ್ನು ತಿನ್ನುವ ನೀರುನಾಯಿಗಳ ದೇಹ ಸೇರಿ ನೀರುನಾಯಿಗಳು ಅಪಾಯಕ್ಕೆ ಸಿಲುಕಿವೆ ಎನ್ನುವ ಆಕ್ಷೇಪಣೆಗಳಿವೆ.
“ನೀರು ನಾಯಿ”ಗಳು ಹಲವಾರು ಕಿ.ಮೀ. ದಾಟಿ ಬಯಲು ಅರೆಮಲೆನಾಡು ಪ್ರದೇಶವಾಗಿರುವ ಹಾವೇರಿಯ ಪರಿಸರದಲ್ಲಿ ಕಾಣಿಸಿಕೊಂಡಿದ್ದೇಕೆ? ಎನ್ನುವ ಬಗ್ಗೆ ನೀರುನಾಯಿಗಳ ಬಗ್ಗೆ ಕಾಳಜಿ ಹೊಂದಿರುವ ಸೊಸೈಟಿಯವರು ಸಂಶೋಧನೆ ನಡೆಸಬೇಕು. ಕೆರೆಯ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು. ನೀರುನಾಯಿಗಳ ರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸರ್ಕಾರ ಈಗಲೇ ಮುನ್ನಚ್ಚಿರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವ ಮೂಲಕ ಚಿಕ್ಕಲಿಂಗದಹಳ್ಳಿಯ ಕೆರೆಗೆ ಮಳೆಗಾಲದ ಅತಿಥಿಯಾಗಿರುವ ಅಳುವಿನಂಚಿನಲ್ಲಿರುವ ನೀರುನಾಯಿಗಳನ್ನು (ಪ್ರೇಶ್ ವಾಟರ್ ಓಟರ್) ಸಂರಕ್ಷಿಸುವ ಹೊಣೆ ನಮ್ಮದಾಗಬೇಕಿದೆ ಎಂದು ನನ್ನೊಂದಿಗಿದ್ದ ಚಿಕ್ಕಲಿಂಗದಹಳ್ಳಿಯ ಕಿರಿಯ ಮಿತ್ರ ಬಾಒಉ ನಂದಿಹಳ್ಳಿ ಹಾಗೂ ವಕೀಲ ಮಿತ್ರ ಶಿವಾನಂದ ಸವೂರ ಅವರಿಗೆ ವಿವರಿಸಿದೆ. ಅವರ ಮನೆಯಲ್ಲಿ ಪ್ರೀತಿಯಿಂದ ನೀಡಿದ ಬಿಸಿ ಪಲಾವು, ಚಾಹಾ ಸೇವಿಸಿ ಮೋಡಕವಿದ ವಾತಾವರಣ ಇದ್ದ ಕಾರಣಕ್ಕೆ ಅರೆ-ಬರೆ ಸೆರೆಸಿಕ್ಕ ನೀರುನಾಯಿಗಳ ಛಾಯಾಚಿತ್ರಗಳನ್ನು ಹೇಗೆ ಬಂದಿರುವಹುದು ಎನ್ನುವ ಆಲೋಚನೆಯಲ್ಲಿ ಹಾವೇರಿಕಡೆಗೆ ಬೈಕ್ ತಿರುಗಿಸಿದೆ.
ಚಿತ್ರ/ ಮಾಹಿತಿ: ಮಾಲತೇಶ ಅಂಗೂರ, ಹಾವೇರಿ.
೯೪೮೧೭೪೯೪೪೦

1 COMMENT

  1. ಗುರುಗಳೆ,
    ಪತ್ರಕರ್ತರ ಬದುಕೆ ಹಂಗೆ, ಮಳೆ ಬರಲಿ ಚಳಿ ಇರಲಿ, ತಮ್ಮ ಕರ್ತವ್ಯ ಮರೆತು ಕೈಚಲ್ಲಿ ಕುಳಿತುಕೊಳ್ಳುವ ಜಾಯಮಾನದವರೆ ಅಲ್ಲ. ಯಾರಿಗಾದರೂ ತೊಂದರೆ ಆಗ್ತಿದೆ, ಎಲ್ಲಾದರೂ ಅಪಘಾತ ಆಗಿದೆ. ಇನ್ನೆಲ್ಲಾದರೂ ಏನೋ ವಿಶೇಷತೆ ಅಂದ್ರೆ ಸಾಕು ಹುಷಾರಿಲ್ಲಾ ಅಂದ್ರು ಕೂಡ ನಿಗಧಿತ ಸ್ಥಳಕ್ಕೆ ಧಾವಿಸಿ ಅಲ್ಲಿನ ವಿಷಯಗಳನ್ನು ಕಲೆ ಹಾಕಿ ನಿಖರವಾದ ವಸ್ತುನಿಷ್ಠ ವರದಿಯನ್ನು ನೀಡುವುದು ತಮ್ಮ ಕರ್ತವ್ಯ ಎಂದು ಸದಾ ಸೇವೆಗೆ ನಿಲ್ಲುತ್ತಾರೆ. ಅಂತಹ ಪತ್ರಕರ್ತರು ಇಂದಿನ ದಿನಮಾನಗಳಲ್ಲಿ ವಿರಳ ಅವರ ಪಂಕ್ತಿಯಲ್ಲಿ ತಾವು ಅಗ್ರರು ಎಂದು ಹೇಳಿದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...