ಕಣ್ಮನ ಸೆಳೆವ ನವಿಲುಧಾಮದ “ನವಿಲ ನೃತ್ಯ”

Date:

 ಕಣ್ಮನ ಸೆಳೆವ ನವಿಲುಧಾಮದ “ನವಿಲ ನೃತ್ಯ”
ಕಿರಿಯ ಮಿತ್ರ ಅಮೃತ ಗುಂಜಾಳ ಹೊಸದಾಗಿ ಖರೀದಿಸಿದ ಕ್ಯಾಮೇರ ಹಾಗೂ ಲೈನ್ಸ್‌ನೊಂದಿಗೆ ಸೆ.೧೪-೨೦೨೪ ರಂದು ಶನಿವಾರ ಸಂಜೆ ಮನೆಗೆ ಬಂದು ಕ್ಯಾಮೇರಾವನ್ನು ತೋರಿಸಿ, “ಸರ್ ಹೇಗಿದೆ ಕ್ಯಾಮೇರ ಎಂದ” ನಾನು ಚನ್ನಾಗಿದ ಎಂದೆ. ಸರ್, ಬಂಕಾಪುರ ನವಿಲುಧಾಮಕ್ಕೆ ಹೋಗಿ ಬರೋಣ ಎಂದ. ನಾನು ಭಾನುವಾರದ ಭೇಟಿಯನ್ನು ನಿರ್ಧರಿಸದ ಕಾರಣಕ್ಕೆ  ಬಂಕಾಪುರಕ್ಕೆ ತಾನೆ, ಆಯಿತು ಹೋಗಿ ಬರೋಣ ಎಂದೆ. ಸೆ.೧೫ರ ಬೆಳಿಗ್ಗೆ ೬ಕ್ಕೆ ಅಮೃತನ ಮೊಬೈಲ್ ಕರೆಯಿಂದಾಗಿ ನಿದ್ದೆಗೆ ವಿರಾಮ ಹೇಳಿ, ಮುಖ ಮಾರ್ಜನ ಮಾಡಿಕೊಂಡು ಕ್ಯಾಮೇರಾ ಬ್ಯಾಗಿನೊಂದಿಗೆ ಸಿದ್ದನಾದೆ. ಬೈಕ್‌ನಲ್ಲಿ ನಮ್ಮ ಸವಾರಿ ಹೆದ್ದಾರಿಯ ಮೂಲಕ ಬಂಕಾಪುರದ ಕಡೆಗೆ ಸಾಗಿತು. ೨೫ ನಿಮಿಷಗಳಲ್ಲಿ ೨೨ ಕಿ.ಮೀ. ದೂರ ಕ್ರಮಿಸಿ ನವಿಲುಧಾಮ ಮುಂಭಾಗದಲ್ಲಿ ಬೈಕ್ ನಿಲುಗಡೆ ಮಾಡಿ ಕೋಟೆಯ ಪ್ರದೇಶ ಮಾಡಿದೆವು.
ಅದಾಗಲೇ ನವಿಲುಗಳು ಗಿಡ-ಮರಗಳಿಂದ ಇಳಿದು ಆಹಾರ ಅರಸುತ್ತಾ ಓಡಾಡುತ್ತಿದ್ದವು. ಹೊಸದಾಗಿ ಕ್ಯಾಮೇರಾ ಖರೀದಿಸಿದ ಉಮೇದಿಯಲ್ಲಿದ್ದ ಮಿತ್ರ ನವಿಲುಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲಾರಂಭಿಸಿದ. ನಾನು ಪ್ರಯಾಣದ ಆಯಾಸದಲ್ಲಿ ಸುಧಾರಿಸಿಕೊಂಡು ಹತ್ತಿರದಿಂದ ನವಿಲು ಕಾಣಬಹುದು ಎಂದು ನವಿಲುಗಳ ಹುಡುಕಾಟ ನಡೆಸಿದೆ.
ನವಿಲುಧಾಮದ ಕೋಟೆ ಪ್ರದೇಶದಲ್ಲಿ ಅದಾಗಲೇ ವಾಯು ವಿಹಾರಿಗಳು ಓಡಾಟ ನಡೆಸಿದ್ದರು. ದೂರದಲ್ಲಿ ನವಿಲುಗಳ ಕೂಗು ಕೇಳಿಬರುತ್ತಿತ್ತು. ಅವುಗಳನ್ನು ಅರಸಿ ಹೊರಟಾಗ ಕೋಟೆ ಪ್ರದೇಶದ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಹೊಲದ ಬದುವಿನಲ್ಲಿ ನವಿಲೊಂದು ಗರಿ ಬಿಚ್ಚಿ ಎಳೆ ಬಿಸಿಲಿಗೆ ಮೈಯೊಡ್ಡಿತ್ತು. ತಡಮಾಡದೇ ಇಬ್ಬರು ಕ್ಯಾಮೇರಾ ಪೋಕಸ್ ನವಿಲಿನ ಕಡೆಗೆ ತಿರುಗಿಸಿ ನವಿಲಿನ ನೃತ್ಯದ ನಾನಾ ಭಂಗಿಗಳನ್ನು ಸೆರೆ ಹಿಡಿಯಲಾರಂಭಿದೆವು.
ಬಂಕಾಪುರ ನವಿಲುಧಾಮ ರಾಷ್ಟ್ರೀಯ ನವಿಲು ಧಾಮದಲ್ಲೊಂದು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿರುವ ನವಿಲು ಧಾಮ, ಹಾವೇರಿಯಿಂದ ೨೨ ಕಿ.ಮೀ. ಹಾಗೂ ತಾಲೂಕು ಕೇಂದ್ರ ಶಿಗ್ಗಾವಿಯಿಂದ  ೧೨ ಕಿ.ಮೀ. ದೂರದಲ್ಲಿದೆ. ನವಿಲುಗಳ ರಕ್ಷಣೆಗಾಗಿ ರಚಿತವಾದ ಈ ಧಾಮ ೧೩೯ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ೨೦೦೧ರಲ್ಲಿ ಇದನ್ನು ಅಧಿಕೃತವಾಗಿ ನವಿಲು ಧಾಮ ಎಂದು ಘೋಷಿಸಲಾಯಿತು.
ಮನುಷ್ಯರ ಓಡಾಟ ಕಡಿಮೆ ಪ್ರಮಾಣದಲ್ಲಿರುವುದಕ್ಕೆ ಇದೊಂದು ಉತ್ತಮ ನೆಲೆಯಾಗಿ ಮಾರ್ಪಟ್ಟಿದೆ. ನವಿಲುಗಳ ಸಂರಕ್ಷಣೆ ಹಾಗೂ ಸಂತಾನವೃದ್ಧಿ ಕೇಂದ್ರವಾಗಿ ಇದು ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ನೂರಾರು  ನವಿಲುಗಳು ಇವೆ ಎಂದು ಅಂದಾಜಿ ಸಲಾಗಿದೆ. ಇದಕ್ಕೆ ಹತ್ತಿರದಲ್ಲೇ ಒಂದು ಕೋಟೆ ಇದೆ. ಇದರ ಸುತ್ತಲು ಇರುವ ಜಾಲಿ ಮತ್ತು ಹಿಪ್ಪೆ ಮರಗಳು ಇಲ್ಲಿಯ ನವಿಲುಗಳಿಗೆ ಆಶ್ರಯ ತಾಣಗಳಾಗಿವೆ. ದಟ್ಟವಾದ ಪೊದೆಗಳು ನವಿಲಮರಿಗಳಿಗೆ ಆಶ್ರಯ ತಾಣವಾಗಿವೆ.
ನವಿಲುಗಳಲ್ಲಿ ಗಂಡು ನಾವಿಲು  ಹೆಚ್ಚು ಸುಂದರವಾಗಿರುತ್ತದೆ. ನವಿಲುಧಾಮದಲ್ಲಿ ಉದ್ದನೆಯ ಗರಿಗಳನ್ನು ಬಿಚ್ಚಿ ನೃತ್ಯ ಮಾಡುತ್ತಿದ್ದ ನವಿಲಿನ ಆ ಸೊಬಗನ್ನು ಬಣ್ಣಿಸಲಸಾಧ್ಯ. ಅದೇನಿದ್ದರೂ ಕಣ್ತುಂಬಿಕೊಳ್ಳಬೇಕಷ್ಟೇ.  ಮನದಣಿಯುವಷ್ಟು ನವಿಲ ನೃತ್ತದ ಅನೇಕ ಛಾಯಾಚಿತ್ರಗಳನ್ನು  ಸೆರೆಹಿಡಿದುಕೊಳ್ಳವುದರ ಜೊತೆಗೆ ಹತ್ತಿರಿಂದ ನವಿಲ ನೃತ್ಯವನ್ನು ವೀಕ್ಷಿಸಿದ್ದು ಸಂತಸ ಇಮ್ಮುಡಿಗೆ ಕಾರಣವಾಗಿತ್ತು. ಈ ಧಾಮದಲ್ಲಿ ನವಿಲನ್ನು ಹೊರತು ಪಡಿಸಿದರೆ ಮರಕುಟಿಕ, ಗೂಬೆ, ಬ್ಯಾಬ್ಲರ್, ಮಡಿವಾಳ ಹಕ್ಕಿ, ನೊಣ ಹಿಡುಕ, ನೈಟ್ ಜಾರ್, ಚುಕ್ಕೆ ಮುನಿಯ, ಬಾಲದಂಡೆ ಹಕ್ಕಿ, ಇಂಡಿಯನ್ ರಾಬಿನ್, ಸ್ಪಾಟೆಡ್ ಡವ್, ಗಿಳಿ, ಮಿಂಚುಳ್ಳಿ, ಬೂದು ಮಂಗಟ್ಟೆ ಹಾಗೂ ದರ್ಜಿ ಹಕ್ಕಿ ಸೇರಿದಂತೆ ಅನೇಕ ಪಕ್ಷಿಗಳನ್ನು ಕಾಣಬಹುದು.
ನವಿಲ ನೃತ್ಯದ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಾ ಸಮಯ ಹೋದದ್ದು ತಿಳಿಯಲಿಲ್ಲ. ಅದಾಗಲೇ ಸಮಯ ೯-೩೦ ಆಗಿತ್ತು. ಬೆಳೆಗ್ಗೆ ಛಾಹಾ ಸೇವಿಸದೇ ಹೋರಟ ಕಾರಣಕ್ಕೆ ತಿರುಗಾಟಕ್ಕೆ ಹೊಟ್ಟೆ ಚುರಗುಟ್ಟುತ್ತಿತ್ತು. ಬಾರವಾದ ಮನಸ್ಸಿನಿಂದ ಕ್ಯಾಮೇರಾಗಳನ್ನು ಬ್ಯಾಗಿಗೆ ಸೇರಿಸಿ ಊರಿಗೆ ಮರಳಿದೆವು.
ಚಿತ್ರ/ಲೇಖನ: ಮಾಲತೇಶ ಅಂಗೂರ, ಹಾವೇರಿ.

malatesh angur
sub-editor
kourava daily,
haveri

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...