–ಕರ್ತವ್ಯಲೋಪ; ಹಾವೇರಿಜಿಲ್ಲೆಯ ಇಬ್ಬರು ಪಿಡಿಓ ಅಮಾನತು
ಹಾವೇರಿ: ಕರ್ತವ್ಯಲೋಪ ಎಸಗಿದ ಆರೋಪದಡಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಪಿಡಿಒ ಶಾಂತಿನಾಥ ಜೈನ್ ಹಾಗೂ ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದ ಪಿಡಿಒ ಮಾಬುಸಾಬ್ ಹೊಟ್ಟೆಫಕ್ಕೀರಣ್ಣನವರನ್ನು ಅಮಾನತುಗೊಳಿಸಿ ಸಿಇಒ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪ್ರಗತಿ ಬಗ್ಗೆ ಮಂಗಳವಾರ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಜಿಲ್ಲೆಯ ಎಲ್ಲ ಪಿಡಿಒಗಳ ಕೆಲಸದ ಮಾಹಿತಿ ಪಡೆದರು. ಇಬ್ಬರೂ ಪಿಡಿಒಗಳು ತಮ್ಮ ಕೆಲಸದಲ್ಲಿ ಪೂರ್ಣ ಪ್ರಮಾಣದ ನಿಷ್ಠೆ ಹಾಗೂ ಪ್ರಾಮಾಣಿಕತೆ ತೋರಲು ವಿಫಲರಾಗಿದ್ದಾರೆ. ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವುದು ತನಿಖಾ ವರದಿಯಿಂದ ಕಂಡುಬಂದಿದ್ದರಿಂದ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.
೪ ವರ್ಷ ಕೆಲಸ, ಕರ್ತವ್ಯಲೋಪ: ಪಿಡಿಒ ಶಾಂತಿನಾಥ ಜೈನ್, ೨೦೨೧ರಿಂದ ೨೦೨೫ರವರೆಗೆ ಕೆಲಸ ಮಾಡುತ್ತಿದ್ದರು. ಹಣಕಾಸು ವ್ಯವಹಾರದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ೨೦೨೪-೨೫ನೇ ಸಾಲಿನ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ೫೯,೦೭೫ ತೆರಿಗೆ ವಸೂಲಿ ಮಾಡದೇ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ. ಗ್ರಾಮ ನಿಧಿಯಡಿ ಸಾಮಗ್ರಿ ಖರೀದಿಗೆ ?೬.೨೪ ಲಕ್ಷ ವ್ಯಯಿಸಿದ್ದು. ಇದಕ್ಕೆ ಯಾವುದೇ ದೃಢೀಕರಣ ನೀಡಿಲ್ಲ. ೧೫ನೇ ಹಣಕಾಸು ಯೋಜನೆಯಡಿ ಸಾಮಗ್ರಿ ಖರೀದಿಸಲು ರೂ ೯.೩೪ ಲಕ್ಷ ಹಾಗೂ ಗ್ರಾಮ ನಿಧಿಯಡಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಇತರೆ ವಸ್ತು ಖರೀದಿಗೆ ರೂ ೫.೬೬ ಲಕ್ಷ ಭರಿಸಿದ್ದು, ಇದರಲ್ಲಿಯೂ ನಿಯಮ ಉಲ್ಲಂಘಿಸಿದ್ದಾರೆ.’
ನಿವೃತ್ತ ಸ್ವೀಪರ್ ಮಹದೇವಪ್ಪ ಹರಿಜನ ಅವರು ೧೯೬೪ರ ನವೆಂಬರ್ ೧೩ರಂದು ಜನಿಸಿದ್ದು, ೨೦೨೪ರ ನವೆಂಬರ್ ೩೦ರಂದು ನಿವೃತ್ತಿಯಾಗಬೇಕು. ಆದರೆ, ೨೦೨೪ರ ಡಿಸೆಂಬರ್ನಿಂದ ೨೦೨೫ರ ಆಗಸ್ಟ್ವರೆಗೂ ಮಹದೇವಪ್ಪ ಅವರಿಗೆ ರೂ ೧.೫೦ ಲಕ್ಷ ವೇತನ ಪಾವತಿಯಾಗಿದೆ. ಸೇವಾ ದಾಖಲೆಗಳನ್ನು ಪರಿಶೀಲಿಸದೇ ಪಿಡಿಒ ಅವರು ವೇತನ ಪಾವತಿಸಿದ್ದಾರೆ. ೨೦ ಹೊಲಿಗೆ ಯಂತ್ರ, ನೀರು ಎತ್ತುವ ಯಂತ್ರ ಹಾಗೂ ಇತರೆ ವಸ್ತುಗಳ ಖರೀದಿಯಲ್ಲೂ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಕೊಠಡಿ ಹಾಗೂ ಕಚೇರಿ ನವೀಕರಣದಲ್ಲೂ ನಿಯಮ ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನರೇಗಾ ಜಾರಿಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿ ಹೊಟ್ಟೆಫಕ್ಕೀರಣ್ಣನವರ: ಹಾವೇರಿ ತಾಲೂಕಿನ ಯಲಗಚ್ಚ, ಪಿಡಿಒ ಮಾಬುಸಾಬ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ೪,೯೨೦ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಿದರೂ ಕೇವಲ ಕೇವಲ ೨೪೬ ದಿನಗಳನ್ನು ಸೃಜಿಸಿದ್ದಾರೆ. ೨೧ ಕಾಮಗಾರಿಗಳಿಗೆ ಅನುಮೋದನೆ ನೀಡಿದರೂ ಒಂದೂ ಕಾಮಗಾರಿ ಅನುಷ್ಠಾನಗೊಳಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಸ್.ಸಿ.,ಎಸ್.ಟಿ. ಕಲ್ಯಾಣ ಕಾರ್ಯಕ್ರಮಗಳಿಗೆ ೫೫,೦೦೦ ಅನುದಾನವಿದ್ದರೂ, ಕೇವಲ ೧೦,೦೦೦ ವೆಚ್ಚ ಮಾಡಿದ್ದಾರೆ. ೪೫,೦೦೦ ಉಳಿಸಿಕೊಂಡು, ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ತಪ್ಪಿಸಿದ್ದಾರೆ. ೧೫ನೇ ಹಣಕಾಸು ಯೋಜನೆಯಡಿ ಪಂಚಾಯಿತಿಗೆ ೧.೦೫ ಕೋಟಿ ಹಣ ಬಿಡುಗಡೆಯಾಗಿದ್ದು ಕೇವಲ ೧೫.೦೩ ಲಕ್ಷ ಮಾತ್ರ ವಿನಿಯೋಗಿಸಿದ್ದಾರೆ. ರೂ ೮೯,೯೭,೪೨೬ ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ.
ನಿಗದಿತ ಸಮಯಕ್ಕೆ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೮೦ ಮನೆ ನಿರ್ಮಾಣದ ಗುರಿ ನೀಡಿದರೂ ಕೇವಲ ೧೨ ಮನೆಗಳಿಗೆ ಮಾತ್ರ ಅನುಮೋದನೆ ನೀಡಿದ್ದಾರೆ. ಸ್ವಚ್ಛ ವಾಹಿನಿ ವಾಹನದ ವಿಮೆಯನ್ನೂ ನವೀಕರಿಸಿಲ್ಲ. ಹಣಕಾಸು ವ್ಯವಹಾರದ ಪ್ರಕರಣಗಳ ಕುರಿತು ಅನುಪಾಲನಾ ವರದಿ ಸಹ ಸಲ್ಲಿಸದೇ ಲೋಪ ಎಸಗಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.