ಕೂಡಲಸಂಗಮ ಮಾದರಿಯಲ್ಲಿ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಅಭಿವೃದ್ಧಿಗೆ ಒತ್ತಾಯ

Date:

ಹಾವೇರಿ: ಅಂಬಿಗರ ಚೌಡಯ್ಯನವರು ೧೨ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವೇಶ್ವರರ ಸಮಕಾಲೀನರು. ಅವರ ಜೊತೆ ಅನುಭವ ಮಂಟಪದಲ್ಲಿ ಭಾಗವಹಿಸಿದ್ದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಸಹ ಒಬ್ಬರು. ತಮ್ಮ ನೇರ, ದಿಟ್ಟ ವಚನಗಳಿಂದ ಸಮಾಜದ ಅಂಕುಡೊಂಕು ತಿದ್ದಿದ್ದ ಚೌಡಯ್ಯ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರದಲ್ಲಿ. ಚೌಡಯ್ಯದಾನಪುರದ ತುಂಗಭದ್ರಾನದಿಯ ಪಾತ್ರದಲ್ಲಿರುವ ನಿಜ ಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಇದ್ದು, ಇದೀಗ ಈ ಐಕ್ಯಮಂಟಪವು ಜಲಾವೃತವಾಗಿದೆ.
ಐಕ್ಯ ಮಂಟಪಕ್ಕೆ ಜಲದಿಗ್ಬಂಧನ: ಇಲ್ಲಿ ಹರಿಯುವ ತುಂಗಭದ್ರಾ ನದಿಯ ತಟದಲ್ಲಿ ಚೌಡಯ್ಯನವರು ಐಕ್ಯರಾಗಿದ್ದು, ಅಲ್ಲಿ ಐಕ್ಯ ಮಂಟಪ ನಿರ್ಮಿಸಲಾಗಿದೆ. ಆದರೆ, ಮಳೆಗಾಲ ಬಂದರೆ ಸಾಕು ಶರಣ ಚೌಡಯ್ಯ ಐಕ್ಯ ಮಂಟಪ ಜಲಾವೃತವಾಗುತ್ತದೆ. ಸದ್ಯ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹಾಗೂ ಗಾಜನೂರುಬಳಿಯ ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಡುತ್ತಿರುವ ಕಾರಣ ತುಂಗಭದ್ರಾ ನದಿ ಮೈತುಂಬಿ ಹರಿಯುತ್ತಿದ್ದು, ಐಕ್ಯ ಮಂಟಪಕ್ಕೆ ಜಲದಿಗ್ಬಂಧನವಾಗಿದೆ. ಇದರಿಂದ ಶರಣ ಅಂಬಿಗರ ಚೌಡಯ್ಯ ಐಕ್ಯ ಮಂಟಪಕ್ಕೆ ಪೂಜೆ ಸಲ್ಲಿಸಲು ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ.
ಭಕ್ತರು ತೆಪ್ಪದಲ್ಲಿ ತೆರಳಿ ಐಕ್ಯ ಮಂಟಪಕ್ಕೆ ಪೂಜೆ ಸಲ್ಲಿಸಿ ಬರುತ್ತಿದ್ದಾರೆ. ತೆಪ್ಪದಲ್ಲಿ ಆರತಿ ತಟ್ಟೆ ಗಂಟೆಯನ್ನ ತಗೆದುಕೊಂಡು ಹೋಗಿ ಭಕ್ತರು ಪೂಜೆ ನೆರವೇರಿಸುತ್ತಿದ್ದಾರೆ. ನೀರಿನ ಹರಿವು ಹೆಚ್ಚಾದರೆ ಅದೂ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಸ್ಥಳೀಯರು. ಆದರೆ, ಅಂಬಿಗರ ಚೌಡಯ್ಯನ ಐಕ್ಯ ಮಂಟಪವನ್ನ ಕೂಡಲಸಂಗಮದಲ್ಲಿರುವ ಬಸವೇಶ್ವರರ ಐಕ್ಯ ಮಂಟಪದಂತೆ ನಿರ್ಮಿಸಬೇಕೆಂಬುದು ಅಂಬಿಗ ಸಮುದಾಯದವರ ಆಗ್ರಹ. ಆದರೆ ಐಕ್ಯ ಮಂಟಪದ ಹತ್ತಿರದಲ್ಲಿರುವ ಪುರಾತತ್ವ ಇಲಾಖೆಗೆ ಸೇರಿದ ೧೧ನೇ ಶತಮಾನದ ಮುಕ್ತೇಶ್ವರ ದೇವಸ್ಥಾನದ ನಿಯಮಗಳು ಇದಕ್ಕೆ ಅಡ್ಡಿಪಡಿಸುತ್ತಿವೆ.
ಪುರಾತತ್ವ ಇಲಾಖೆಗೆ ಸೇರಿದ ಈ ದೇವಸ್ಥಾನದ ನೂರು ಅಡಿ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಬರುವುದಿಲ್ಲ. ದೇವಸ್ಥಾನದಂದ ಕೇವಲ ೨೫ ಮೀಟರ್ ದೂರದಲ್ಲಿ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಈ ಕಾರ್ಯ ಮಾಡಬೇಕಿದೆ. ಹೀಗಾಗಿ ಐಕ್ಯ ಮಂಟಪ ನಿರ್ಮಾಣದ ರೂಪುರೇಷೆಗಳು ಇನ್ನು ಸಿದ್ಧವಾಗಿಲ್ಲ. ಆದರೆ, ಅಂಬಿಗ ಸಮುದಾಯದವರು ಮಾತ್ರ ಆದಷ್ಟು ಬೇಗ ಐಕ್ಯ ಮಂಟಪ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೋರಾಟ ಪ್ರಾರಂಭವಾಗಿ ಮೂರು ದಶಕಗಳೇ ಸಂದಿವೆ: ಪ್ರತಿ ಬಾರಿ ಮಳೆಯಿಂದ ಪ್ರವಾಹ ಉಂಟಾದಾಗ ನಮಗೆ ಇದೇ ಸ್ಥಿತಿ ನಿರ್ಮಾಣವಾಗುತ್ತೆ.ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವನ್ನು ಕೂಡಲ ಸಂಗಮಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಹೋರಾಟ ಪ್ರಾರಂಭವಾಗಿ ಮೂರು ದಶಕಗಳೇ ಸಂದಿವೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಆದಷ್ಟು ಬೇಗ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವನ್ನು ಕೂಡಲಸಂಗಮದಲ್ಲಿರುವ ಬಸವೇಶ್ವರರ ಐಕ್ಯ ಮಂಟಪದ ರೀತಿ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಲಿಂಗಾಯತರಿಗೆ ಕೂಡಲಸಂಗಮವಿದೆ, ಕನಕದಾಸರ ಕಾಗಿನೆಲೆ, ಬಾಡ ಗ್ರಾಮಗಳು ಅಭಿವೃದ್ಧಿಯಾಗಿವೆ. ಆದರೆ ೧೨ನೇ ಶತಮಾನದಲ್ಲಿ ನೇರ, ನಿಷ್ಠುರ ವಚನ ರಚಿಸಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಚೌಡಯ್ಯರ ಐಕ್ಯ ಮಂಟಪ ಮಾತ್ರ ಯಥಾಸ್ಥಿತಿಯಲ್ಲಿರುವುದು ತಮಗೆ ನೋವು ತಂದಿದೆ ಎನ್ನುತ್ತಾರೆ ಸ್ಥಳೀಯರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...

“ಎಡ ಪಂಥದವರು ಜಡಪಂಥದವರಾಗಬೇಡಿ” ಹಾವೇರಿಯಲ್ಲಿ‌ ಪ್ರೊ.ಬರಗೂರು ರಾಮಚಂದ್ರಪ್ಪ

"ಎಡ ಪಂಥದವರು ಜಡಪಂಥದವರಾಗಬೇಡಿ" ಹಾವೇರಿಯಲ್ಲಿ‌ ಪ್ರೊ.ಬರಗೂರು ರಾಮಚಂದ್ರಪ್ಪ  ಹಾವೇರಿ: ಧರ್ಮಕ್ಕಿಂತ ಧಾರ್ಮಿಕ ವಾದ,...

ಉತ್ತರಸಭಾ ಪ್ರಾಂತ್ಯದ ಕ್ರಿಶ್ಚಿಯನ್ ಸಮುದಾಯದ ಆಡಳಿತದಲ್ಲಿ ಅಕ್ರಮ-ಆರೋಪ: ಶೀರ್ಘದಲ್ಲಿ ಹೋರಾಟ

ಉತ್ತರಸಭಾ ಪ್ರಾಂತ್ಯದ ಕ್ರಿಶ್ಚಿಯನ್ ಸಮುದಾಯದ ಆಡಳಿತದಲ್ಲಿ ಅಕ್ರಮ-ಆರೋಪ: ಶೀರ್ಘದಲ್ಲಿ ಹೋರಾಟ   ಹಾವೇರಿ:...