
ಕೊಬ್ಬರಿ ಹೋರಿ ತಿವಿತಕ್ಕೆ ಹಾವೇರಿಜಿಲ್ಲೆಯಲ್ಲಿ ಮತ್ತೊಂದು ಬಲಿ, ಹೋರಿಹಬ್ಬದ ಅವಘಡ-ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹಾವೇರಿ: ಕೋಬ್ಬರಿ ಹೋರಿ ತಿವಿತಕ್ಕೆ ಮತ್ತೊಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಹೋರಿ ತಿವಿತಕ್ಕೆ ಬಲಿಯಾದವನನ್ನು ಜಿಲ್ಲೆಯ ಹಾನಗಲ್ಲ ತಾಲೂಕಿನ ಯಳವಟ್ಟಿಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣಕೇರಿ ಎಂದು ತಿಳಿದು ಬಂದಿದೆ. ಈತನ ಸಾವಿನಿಂದಾಗಿ ಹೋರಿ ಹಬ್ಬ ಆರಂಭವಾದ ಎರಡುದಿನಗಳಲ್ಲಿ ನಾಲ್ವರು ಹೋರಿ ಹಬ್ಬದ ಅವಘಡಗಳಿಗೆ ಬಲಿಯಾಗಿದ್ದಾರೆ.
ದೀಪಾವಳಿ ಪಾಡ್ಯದ ನಿಮಿತ್ತ ಯಳವಟ್ಟಿ ಗ್ರಾಮದ ಜನರು ಹೋರಿಗಳನ್ನು ತಮ್ಮ ತಮ್ಮ ಮನೆಯಿಂದ ತೆಗೆದುಕೊಂಡು ಬಂದು ಗ್ರಾಮದ ನಡು ಬೀದಿಯಲ್ಲಿ ಓಡಿಸಿ ಮನೆಗೆ ಹೋರಿಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಹೋರಿ ಓಟದ ಆಯೋಜಕರು ಯಾವುದೇ ರೀತಿಯ ಸೂಕ್ತ ಮುಂಜಾಗೃತೆಯನ್ನು ವಹಿಸದೇ ನಿರ್ಲಕ್ಷತನ ವಹಿಸಿದ್ದು, ಅಲ್ಲದೇ ಮೃತ ಶ್ರೀಕಾಂತ ಗುರುಶಾಂತಪ್ಪ ಕೋಣಕೇರಿ ಆರೋಪಿತನು ಸಹ ಸರಿಯಾದ ರೀತಿಯಲ್ಲಿ ತನ್ನ ಎತ್ತುಗಳನ್ನು ಹಿಡಿದುಕೊಳ್ಳದೇ ಕೇಕೆ ಹಾಕುತ್ತಾ ಪ್ರಾಣಿಗಳ ಬಗ್ಗೆ ನಿರ್ಲಕ್ಷತನದಿಂದ ವರ್ತಿಸಿದ್ದರ ಪರಿಣಾಮ ಎತ್ತುಗಳು ಚಿನ್ನಾಟ್ಟಿಗೆ ಬಿದ್ದು ಆತನ ಎದೆಗೆ ತಿವಿದಿದ್ದು, ಆಗ ಶ್ರೀಕಾಂತ ತಲೆಯನ್ನು ಹಚ್ಚಿ ಕೆಳಗಡೆ ಬಿದ್ದು ತೀವೃವಾಗಿ ಗಾಯಗೊಂಡಿದ್ದ, ಇವನನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಲಾಗಿತ್ತು. ಉಪಚಾರ ಫಲಿಸದೇ ದಿನಾಂಕಃ-೨೩/೧೦/೨೦೨೫ ರಂದು ಮದ್ಯಾಹ್ನ ೨-೧೦ ಗಂಟೆಗೆ ಮೃತಪಟ್ಟಿದ್ದಾನೆ. ಈ ಬಗ್ಗೆ ಹಾನಗಲ್ಲ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.

