” ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ” ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರಿಂದ ಶನಿವಾರ ತೀರ್ಪು

Date:

ಹಾವೇರಿ : ಹೆಂಡತಿ ಮೇಲೆ ದೈಹಿಕ ಹಲ್ಲೆ ನಡೆಸಿ ಅವಳ ಸಾವಿಗೆ ಕಾರಣನಾದ ಶಿಗ್ಗಾಂವ ತಾಲೂಕು ಹಿರೇಮಣಕಟ್ಟಿ ಗ್ರಾಮದ ಆರೋಪಿ ಮಲ್ಲನಗೌಡ ಗದಿಗೆಪ್ಪಗೌಡ ಪಾಟೀಲ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಶನಿವಾರ ತೀರ್ಪು ನೀಡಿದ್ದಾರೆ.
ಆರೋಪಿ ಮಲ್ಲನಗೌಡ ಗದಿಗೆಪ್ಪಗೌಡ ಪಾಟೀಲ ಇತನು ಅದೇ ಗ್ರಾಮದ ದೀಪಾ ಎಂಬ ಯುವತಿಯನ್ನು ಪ್ರೀತಿಸಿ ದಿನಾಂಕ ೧೧-೧೨-೨೦೧೮ ರಂದು ಮದುವೆಯಾಗಿದ್ದನು. ದೀಪಾ ತನಗೆ ಗೊತ್ತಿಲ್ಲದೆ ಮೊಬೈಲ್ ಇಟ್ಟುಕೊಂಡು ಬೇರೆಯವರೊಂದಿಗೆ ಮಾತನಾಡುತ್ತಾಳೆ ಎಂದು ಅನುಮಾನಗೊಂಡು ದಿನಾಂಕ ೧೩-೦೪-೨೦೧೯ ರಂದು ತಾವು ವಾಸವಿದ್ದ ಶಿಗ್ಗಾಂವ ಪಟ್ಟಣದ ಮನೆಯಲ್ಲಿ ದೀಪಾಳ ಕೆನ್ನೆಗೆ ಜೋರಾಗಿ ಹೊಡೆದಿದ್ದರಿಂದ ತಲೆಯು ಗೋಡೆಗೆ ಬಡೆದು ಜ್ಞಾನ ತಪ್ಪಿದ್ದರಿಂದ ಶಿಗ್ಗಾಂವ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹುಬ್ಬಳ್ಳಿಗೆ ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ದಿನಾಂಕ೧೯-೦೪-೨೦೧೯ ರಂದು ಚಿಕಿತ್ಸೆ ಫಲಕಾರಿಯಾಗದೇ ದೀಪಾ ಮೃತಪಟ್ಟಿದ್ದಳು. ಆರೋಪಿಯು ದೀಪಾಳನ್ನು ಸಾಯಿಸುವ ಉದ್ದೇಶದಿಂದ ಕಪಾಳಕ್ಕೆ ಹೊಡೆದಿದ್ದಾಗಿ ದೂರು ದಾಖಲಾಗಿತ್ತು.
ಈ ಪ್ರಕರಣದ ಕುರಿತು ಹಾವೇರಿ ಡಿಎಸ್‌ಪಿ ಕುಮಾರಪ್ಪ ಎಲ್. ಅವರು ತನಿಖೆ ಕೈಗೊಂಡು, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿತ ಮಲ್ಲನಗೌಡ ಪಾಟೀಲನ ಮೇಲೆ ವಿವಿಧ ಕಲಂಗಳಡಿ ಆಪಾದನೆಗಳು ರುಜುವಾತಾದ ಹಿನ್ನಲೆಯಲ್ಲಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ.೩೨ ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...