ಕೋಣನತಂಬಗಿ ಕೃಷಿಕಾರ್ಮಿಕನ ಪುತ್ರ ಕುಮಾರ ಶಾಂತವೀರಯ್ಯ ಕುಲಕರ್ಣಿಗೆ ಐಆರ್‌ಬಿ ಅಚಿವರ್ಸ್ ಅವಾರ್ಡ್

Date:

ಹಾವೇರಿ: ತಾಲೂಕಿನ ಕೋಣನತಂಬಗಿ ಗ್ರಾಮದ ನಿವಾಸಿ ಬಂಕಾಪುರ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ಕುಮಾರ ಶಾಂತವೀರಯ್ಯ ವೀರಯ್ಯ ಕುಲಕರ್ಣಿ ಅವರು ವಿದ್ಯಾರ್ಥಿಗಳಲ್ಲಿ ಕೃತಕ ಬುದ್ದಿ ಮತ್ತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಶಾಲೆಗಳಲ್ಲಿ ಎಐ ಅವೆರನಸ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅವರ ಮಹತ್ವದ ನಿರಂತರ ಪ್ರಯತ್ನದಿಂದ ಅನೇಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಪಡೆದು, ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ದಿಕ್ಕನ್ನು ಕಂಡುಕೊಂಡಿದ್ದಾರೆ. ಅತಿ ಚಿಕ್ಕ ವಯಸ್ಸಿ (ಹದಿನೆಂಟು ವರ್ಷದ ಒಳಗೆ )ನಲ್ಲಿ ಈ ರೀತಿಯ ವಿಶೇಷ ಹಾಗೂ ಪರಿಣಾಮಕಾರಿ ಸೇವೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೇಕಾಡ್ಸ್ ಸಂಸ್ಥೆ ಇವರಿಗೆ ಐಆರ್‌ಬಿ ಅಚಿವರ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.
ಎಐ ಉಪಯೋಗಗಳು, ಭವಿಷ್ಯದ ಅವಕಾಶಗಳು ಮತ್ತು ಅದರ ಮಹತ್ವವನ್ನು ಸರಳ ಹಾಗೂ ಸುಲಭವಾದ ಭಾಷೆಯಲ್ಲಿ ವಿವರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಜೂನ್ ತಿಂಗಳಲ್ಲಿ ಹಾವೇರಿ ಗೌರಿಮಠದ ಉತ್ತಮ ಕಟ್ಟಡ ಹಾಗೂ ಅನುಭವಿ ಸಿಬ್ಬಂದಿ ಇರುವ ಶ್ರೀಮಲ್ಲಿಕಾರ್ಜುನ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಾಗೂ ಪೂಜ್ಯಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಿಪಿಟಿ ಮೂಲಕ ಮಾಡಿದ ಎಐ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿತ್ತು.
ಕುಮಾರ ಶಾಂತವೀರಯ್ಯ ಕುಲಕರ್ಣಿ ಅವರ ನಿರಂತರ ಪ್ರಯತ್ನದಿಂದ ಅನೇಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಪಡೆದು, ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ದಿಕ್ಕನ್ನು ಕಂಡುಕೊಂಡಿದ್ದಾರೆ. ಅತಿ ಚಿಕ್ಕ ವಯಸ್ಸಿ (ಹದಿನೆಂಟು ವರ್ಷದ ಒಳಗೆ )ನಲ್ಲಿ ಈ ರೀತಿಯ ವಿಶೇಷ ಹಾಗೂ ಪರಿಣಾಮಕಾರಿ ಸೇವೆಯನ್ನು ಗುರುತಿಸಿಇಂಡಿಯನ್ ಬುಕ್ ಆಫ್ ರೇಕಾಡ್ಸ್ ಸಂಸ್ಥೆ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಕುಮಾರ ಶಾಂತವೀರಯ್ಯ ಕಡು ಬಡತನದ ಕುಟುಂಬದ ತಂದೆ ಶಾಂತವೀರಯ್ಯ ತಾಯಿ ಲಲಿತವ್ವ ಅವರ ಪ್ರೀತಿಯ ಪುತ್ರ. ಇವರ ತಂದೆ ವೀರಯ್ಯ ಕೃಷಿ ಕೂಲಿ ಕಾಯಕ ಹಾಗೂ ಚಹಾ ಹೋಟೆಲ್ ಮಾಡುತ್ತ ಕಷ್ಟದಲ್ಲಿ ಮಗನನ್ನು ವಿದ್ಯಾಬ್ಯಾಸ ಮಾಡಿಸುತ್ತಿದ್ದಾರೆ. ಶಾಂತವೀರಯ್ಯ ಕೂಡಾ ಪ್ರಾಥಮಿಕ ಶಿಕ್ಷಣ ಓದುತ್ತಿರುವಾಗ ಶನಿವಾರ ಮತ್ತು ಭಾನುವಾರ ಕೂಲಿ ಕೆಲಸದ ಜೊತೆ ಸಂತೆಯಲ್ಲಿ ಚಹಾ ಮಾರಿ ತಂದೆಗೆ ಸಹಾಯ ಮಾಡುತ್ತಿದ್ದರು.
ಕುಮಾರ ಶಾಂತವೀರಯ್ಯ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಣನತಂಬಗಿಯಲ್ಲಿ, ಪ್ರೌಢ ಶಾಲೆಯನ್ನು ರಾಷ್ಟ್ರ ಕವಿ ಕುವೆಂಪು ಶಾಲೆ ಹೊಸರಿತ್ತಿಯಲ್ಲಿ ಮುಗಿಸಿ, ಇದೀಗ ಬಂಕಾಪುರದ ಶ್ರೀ ಚನ್ನಕೇಶವ ಸರಕಾರಿ ಪಾಲಿಟೆಕ್ ನಿಕ್ ಕಾಲೇಜಲ್ಲಿ ಡಿಪ್ಲೋಮಾ ಓದುತ್ತಿದ್ದಾನೆ.
ಇವರ ಸಾಧನೆಯನ್ನು ನೋಡಿ ಕಾಲೇಜಿನ ಪ್ರಾಂಶುಪಾಲ ಹೇಮಂತ ಹಾಗೂ ಸಿಬ್ಬಂದಿ ವರ್ಗ ಹಾಗೂ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಗೌರಿಮಠದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಟ್ಟಿ ಪೂಜ್ಯ ಬಸವರಾಜ ಮಹಾಸ್ವಾಮಿಗಳು ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿತಷತ್ತ ಕೇಂದ್ರ ಸಮಿತಿ ಹುಬ್ಬಳ್ಳಿ ಹಾಗೂ ಜಿಲ್ಲಾ ಸಮಿತಿ ಹಾವೇರಿ ಮತ್ತು ಕೋಣನತಂಬಗಿ ಹಾಗೂ ಹೊಸರಿತ್ತಿ ಗ್ರಾಮದ ಯುವಕರು ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಒಳಮೀಸಲಾತಿ ಇಲ್ಲದೆ ಉದ್ಯೋಗ ನೇಮಕಾತಿಗೆ ಹೊರಡಿಸಿರುವ ಸುತ್ತೋಲೆ ಕೂಡಲೇ ಹಿಂಪಡೆಯಲು ಆಗ್ರಹ

ಒಳಮೀಸಲಾತಿ ಇಲ್ಲದೆ ಉದ್ಯೋಗ ನೇಮಕಾತಿಗೆ ಹೊರಡಿಸಿರುವ ಸುತ್ತೋಲೆ ಕೂಡಲೇ ಹಿಂಪಡೆಯಲು ಆಗ್ರಹ ಹಾವೇರಿ:ಒಳಮೀಸಲಾತಿ...

ಹಾವೇರಿ ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಾದರಿ ಕಾಲೇಜ್ ಆಗಿ ಆಯ್ಕೆ

 ಹಾವೇರಿ ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಾದರಿ ಕಾಲೇಜ್ ಆಗಿ ಆಯ್ಕೆಹಾವೇರಿ...