ಜು.೧೨ರಿಂದ ಹಾವೇರಿಯಲ್ಲಿ “ಬಳೆಗಾರ ಹನುಮವ್ವ” ನಾಟಕ

Date:

ಜು.೧೨ರಿಂದ ಹಾವೇರಿಯಲ್ಲಿ “ಬಳೆಗಾರ ಹನುಮವ್ವ” ನಾಟಕ
ಹಾವೇರಿ: ಇಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿನ ಬಯಲಿನಲ್ಲಿ ಹಾಕಲಾಗಿರುವ ಟೆಂಟ್‌ನಲ್ಲಿ ಸಂತ ಶರೀಫ್ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿಪರಿವಾರದ ವತಿಯಿಂದ ಜು.೧೨ರಿಂದ ಹಾಸ್ಯ ಭರಿತ “ಬಳೆಗಾರ ಹನುಮವ್ವ” ನಾಟಕ ನಿತ್ಯ ಎರಡು ಪ್ರದರ್ಶನ ಜರುಗುವವು. ಹಾವೇರಿ ಹಾಗೂ ಸುತ್ತ-ಮುತ್ತಲಿನ ಕಲಾಭಿಮಾನಿಗಳು ನಾಟಕ ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ನಾಟಕ ಕಂಪನಿಯ ಮಾಲಕ ಕತಾಲಸಾಬ ಬಣಗಾರ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ನಾಟಕ ಟೆಂಟ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಬಳಿಗಾರ ಹನುಮವ್ವ” ಸಂಸಾರ ಸಮೇತ ನೋಡುವಂತ ನಾಟಕವಾಗಿದ್ದು, ಉತ್ತರ ಕರ್ನಾಟಕದ ಕಲಾವಿದರು ನಾಟಕ ಅಭಿನಯಿಸುವರು. ನಿತ್ಯ ಮಧ್ಯಾಹ್ನ ೩-೧೫ ಮತ್ತು ಸಂಜೆ ೬-೧೫ಕ್ಕೆ ಎರಡು ಪ್ರದರ್ಶನಗಳು ನಡೆಯುತ್ತವೆ. ನಮ್ಮ ಕಂಪನಿಯಲ್ಲಿ ಬಡ ಕಲಾವಿದರು ಕುಟುಂಬದಸ್ಯರು ಸೇರಿ ೩೦ ಜನರ ತಂಡವಿದ್ದು, ಹಾವೇರಿ ಭಾಗದ ಜನರು ಕಲಾ ಪ್ರೇಮಿಗಳಿದ್ದು, ಕಲಾವಿದರನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಮಳೆಗಾಲದ ಸಮಯವಾದರೂ ಸಹ ಹಾವೇರಿಯಲ್ಲಿ ಸುಸಜ್ಜಿತ ರಂಗಸಜ್ಜಿಕಗೆ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ತಂಡದ ವ್ಯವಸ್ಥಾಪಕ ಮಾಹಾಂತೇಶಗೌಡ ಬಿರಾದಾರ ಮಾತನಾಡಿ ನಾಟಕ ಕಂಪನಿ ನಡೆಸುವುದು ಬಹಳ ಕಷ್ಟದಾಯಕವಾಗಿದೆ. ನಮ್ಮ ಕಂಪನಿಯು ಜಾತ್ರೆ ನಡೆಯುವ ಸ್ಥಳಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದೇವೆ. ನಮ್ಮ ಕಂಪನಿಯ “ಬಳಿಗಾರ ಹನುಮವ್ವ” ಸಂಸಾರ ಸಮೇತ ನೋಡುವಂತ ನಾಟಕವಾಗಿದ್ದು, ಇದರ ಜೊತೆಗೆ “ಕಿವುಡು ಮಾಡಿದ ಕಿತಾಪತಿ”, “ಹಳ್ಳಿಹುಡುಗಿ ಮಸರು ಗಡಗಿ” ಸೇರಿದಂತೆ ಅನೇಕ ನಾಟಕಗಳನ್ನು ಪ್ರದರ್ಶಿಸಲಿದ್ದೇವೆ ಎಂದರು.
ನಾಟಕ ಸಂಸ್ಥೆ ನಡೆಸುವದು ತುಂಬಾ ಕಷ್ಟ, ೧೫ ಕಡೆಗಳಲ್ಲಿ ನಾಟಕ ಪರವಾನಿಗೆಗೆ ಅನುಮತಿಪಡೆಯಬೇಕು. ಪರವಾನಿಗೆ ಪಡೆಯಲು ಅನಗತ್ಯ ಓಡಾಟವನ್ನು ತಪ್ಪಿಸಬೇಕಿದೆ. ನಾಟಕ ಪರವಾನಿಗೆಯನ್ನು ಆನ್‌ಲೈನ್ ಮೂಲಕ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ...

ರಾಣೆಬೆನ್ನೂರ ಅರಣ್ಯದಲ್ಲಿ “೩೫೦೦ ವರ್ಷಗಳ ಹಿಂದಿನ ಶಿಲಾಗೋರಿ” ಪತ್ತೆ.!!

  ರಾಣೆಬೆನ್ನೂರ ಅರಣ್ಯದಲ್ಲಿ "೩೫೦೦ ವರ್ಷಗಳ ಹಿಂದಿನ ಶಿಲಾಗೋರಿ" ಪತ್ತೆ.!! ರಾಣೆಬೆನ್ನೂರ: ಪುರಾತತ್ವ...