ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸರಕಾರದ ಹಕ್ಕು: ಸತೀಶ ಜರಕಿಹೊಳಿ

Date:

ಹಾವೇರಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದು ಸರಕಾರದ ಹಕ್ಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಭಾನುವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಬಿಜೆಪಿಯವರು ವಿನಾಕಾರಣ ವಿರೋಧ ಮಾಡುತ್ತಿದ್ದಾರೆ. ದಸರಾ ಹಬ್ಬವನ್ನು ಯಾರು ಉದ್ಘಾಟನೆ ಮಾಡಬೇಕು ಎನ್ನುವುದನ್ನು ಸರ್ಕಾರ ಆಯ್ಕೆ ಮಾಡುತ್ತೆ. ಅದು ಸರ್ಕಾರದ ಅಧಿಕಾರ, ನಿರ್ಧಾರ, ಸರ್ಕಾರದ ಹಕ್ಕು ಸಹ ಎಂದು ಭಾನು ಮುಷ್ತಾಕ್ ಅವರು ಆಯ್ಕೆಯನ್ನು ಸಮರ್ಥಿಸಿಕೊಂಡ ಅವರು, ಈ ವಿಚಾರದಲ್ಲಿ ಕೋರ್ಟ್ ಗೆ ಹೋದರೂ ಕೋರ್ಟ್ ಕೂಡ ಈ ವಿಚಾರವನ್ನು ಸರ್ಕಾರವೇ ನಿರ್ಧರಿಸುತ್ತದೆ ಎಂದು ಹೇಳುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಮಾತನಾಡಿ, ಚುನಾವಣೆ ಅಂದ ಮೇಲೆ ಚುನಾವಣೆ ತರನೇ ಮಾಡಬೇಕಾಗುತ್ತೆ. ಚುನಾವಣೆ ಅಂದಾಗ ಕಾವು ಇರುತ್ತೆ. ಇದು ಜಿಲ್ಲಾ ಮಟ್ಟದ ಚುನಾವಣೆ. ನಮ್ಮ ಪರವಾಗಿ ನಿಂತಿರೋ ಲೀಡರ್ಸ್ ಇರ್ತಾರೆ. ಅವರ ಗೆಲುವಿಗೆ ನಾವು ಶ್ರಮಿಸುತ್ತೇವೆ. ಜಾರಕಿಹೊಳಿ ಕುಟುಂಬ ವಿರುದ್ದ ಕತ್ತಿ ಕುಟುಂಬ ಮೀಸೆ ತಿರುವೋ ವಿಚಾರಕ್ಕೆ ಮಾತನಾಡಿ, ಒಬ್ಬೊಬ್ಬರು ಒಂದೊಂದು ಸ್ಟೈಲ್ ಇರುತ್ತೆ , ಏನೂ ಮಾಡೋಕೆ ಆಗಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆ ಮೂಲಕ ಪುತ್ರ ರಾಹುಲ್ ರಾಜಕೀಯ ಎಂಟ್ರಿ ಪಕ್ಷದವರು ತಿರ್ಮಾನಿಸುತ್ತಾರೆ ಎಂದರು.
ಸೆಪ್ಟೆಂಬರ್ ಕ್ರಾಂತಿ ಠುಸ್ ವಿಚಾರದ ಬಗ್ಗೆ ಮಾತನಾಡಿ, ಸರ್ಕಾರದಲ್ಲಿ ಶಾಂತಿ ಇದ್ದರೆನೇ ಆರಾಮ್ ಇರುತ್ತೆ. ಪ್ರತಿ ದಿನ ಕ್ರಾಂತಿ ಇದ್ದರೆ ಸರ್ಕಾರ ನಡೆಯೋದೆಂಗೆ? ಅವರು ಸಚಿವ ಸಂಪುಟ ವಿಸ್ತರಣೆಗೆ ಸಚಿವಾಂಕ್ಷಿಗಳ ಬಹಳ ಜನರಿದ್ದಾರೆ. ಎಲ್ಲಾರೂ ಮಂತ್ರಿ ಆಗಬೇಕು ಅಂತ ಇರುತ್ತೆ. ನಮ್ಮಲ್ಲಿ ಸೀನಿಯರ್ಸ್ ಬಹಳ ಇದ್ದಾರೆ. ಎಲ್ಲರಿಗೂ ಆಸೆ ಇರುತ್ತೆ, ಮಾಡೋದು ಬಿಡೋದು ವರಿಷ್ಠರಿಗೆ ಬಿಟ್ಟಿದ್ದು ಎಂದ ಅವರು ಧರ್ಮಸ್ಥಳ ಕೇಸ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡ್ತಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅದೇನು ರಾಷ್ಟ್ರೀಯ ವಿಚಾರವೇ? ಅದರ ಪಾಡಿಗೆ ಅದನ್ನ ಬಿಡಿ. ಕೋರ್ಟ್ ನಿರ್ಣಯ ಮಾಡಬೇಕು, ಕೋರ್ಟ್ ಇದೆ. ಧರ್ಮ ರಾಜಕಾರಣ ನಾವು ಮಾಡ್ತಿಲ್ಲ ಎಂದು ಸಚಿವ ಜೋಶಿಗೆ ತಿರುಗೇಟುನೀಡಿದರು.
ಕಾಂಗ್ರೆಸ್ ನಿಂದ ಮುಸ್ಲಿಂ ತುಷ್ಟೀಕರಣ ಹೆಚ್ಚಾಗಿದೆ ಎಂಬ ಬೊಮ್ಮಾಯಿ ಹೇಳಿಕೆಗೆ ಮಾತನಾಡಿ, ಮುಸ್ಲಿಂರು ಇನ್ನೂ ಗುಡಿಸಲ್ಲಿ ಇದ್ದಾರೆ. ಅವರಿಗೂ ಕುಡಿಯೋಕೆ ನೀರಿಲ್ಲ, ಟಾಯ್ಲೆಟ್ ಇಲ್ಲ. ನಾವು ಅವರಿಗೆ ಬಹಳ ದೊಡ್ಡಾದಾಗಿ ಏನೂ ಮಾಡಿಲ್ಲ. ಆದರೆ, ಪಾಕಿಸ್ತಾನದ ಜಿಂದಾಬಾದ್ ಅಂತ ಕೂಗಿದವರಿಗೆ ಸಮರ್ಥನೆ ಮಾಡೋಕೆ ಆಗಲ್ಲ. ಹಾಗೆ ಕೂಗಿದವರನ್ನುಅರೆಸ್ಟ್ ಮಾಡಿದ್ದಾರೆ, ಓಲೈಕೆ ಮಿತಿ ಮೀರಿಲ್ಲ. ಬಿಜೆಪಿಯವರು ಹಾಗೆ ತೋರಿಸ್ತಾರೆ, ಪೋಸ್ ಕೊಡ್ತಾರೆ. ಗಣೇಶೋತ್ಸವ ಸಂದರ್ಭದಲ್ಲಿ ಪ್ರಚೋದನೆಕಾರಿಯಾಗಿ ಮಾತಾಡಿದರೆ ಎಲ್ಲಾ ಕಡೆ ಕೇಸ್ ಹಾಕ್ತಾರೆ. ಕಾನೂನಲ್ಲಿ ಅವಕಾಶ ಇದೆ ಹಾಕ್ತಾರೆ ಎಂದರು.
ಆಪರೇಷನ್ ಸಿಂಧೂರ್ ನಂತರ ಇಂಡಿಯಾ – ಪಾಕ್ ಕ್ರಿಕೆಟ್ ಮ್ಯಾಚ್ ವಿಚಾರವಾಗಿ ಮಾತಾನಾಡಿ, ಮ್ಯಾಚ್ ಗೆ ಪರ್ಮಿಷನ್ ಕೊಟ್ಟವರು ಯಾರು?, ಆಡೋಕೆ ಅನುಮತಿ ಕೊಟ್ಟವರು ಯಾರು?, ಬೀಪ್ ಸಾಗಿಸೋದ್ರಲ್ಲಿ ಭಾರತ ನಂಬರ್ ೨ ಇದೆ. ಬೀಪ್ ಬ್ಯಾನ್ ಮಾಡಬೇಕು ಅಂತಾರೆ. ಆದರೆ, ಅದನ್ನು ಹೆಚ್ಚಾಗಿ ಎಕ್ಸಪೋರ್ಟ್ ಕೂಡಾ ಮಾಡ್ತಿದಾರೆ. ಅವರೇ ಪರ್ಮಿಷನ್ ಕೊಟ್ಟು ಅವರೇ ವಿರೋಧ ಮಾಡಿದರೆ ಏನು ಮಾಡೋದು ಎಂದು ಸಚಿವ ಜಾರಿಕಹೊಳಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಸ್ಕಾಂ ಅಧ್ಯಕ್ಷ ಅಜ್ಜಫೀರ್‌ರ ಖಾದ್ರಿ, ನಗರಸಭಾ ಸದಸ್ಯರಾದ ನಾಗರಾಜ ಬಡಮ್ಮನವರ, ವೆಂಕಟೇಶ ದೈವಜ್ಞ ಸೇರಿದಂತೆ ಅನೇಕರು ಇದ್ದರು,.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...