ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಲೆಮಾರಿ ಒಳಮೀಸಲಾತಿ ಹೋರಾಟಕ್ಕೆ ಹಾವೇರಿಜಿಲ್ಲೆಯಿಂದ ೪೦೦ ಅಲೆಮಾರಿಗಳು

Date:

ಹಾವೇರಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿರ್ಧಾರವು ಅಲೆಮಾರಿ ಸಮುದಾಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಅಲೆಮಾರಿ ವಿರೋಧಿ ನಿರ್ಧಾರವನ್ನು ವಿರೋಧಿಸಿ ಸಾಮಾಜಿಕ ನ್ಯಾಯಕ್ಕಾಗಿ ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ, ಬೆಂಗಳೂರು ವತಿಯಿಂದ ಅಲೆಮರಿಗಳು ಸೆ.೩ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಹಾವೇರಿಜಿಲ್ಲೆಯಿಂದ ೪೦೦ಕ್ಕೂ ಹೆಚ್ಚು ಅಲೆಮಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಅಲೆಮಾರಿ ಬುಡಕಟ್ಟು ಮಹಸಭಾದ ಅಧ್ಯಕ್ಷ ಶೆಟ್ಟಿ ವಿಭೂತಿ ತಿಳಿಸಿದ್ದಾರೆ.
ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯ ಅನುಸಾರ ಅಸ್ಪೃಶ್ಯ ಅಲೆಮಾರಿಗಳಿಗೆ ಶೇ. ೧% ಪ್ರತ್ಯೇಕ ಮೀಸಲಾತಿ ಯಥಾವತ್ತು ಜಾರಿಗೊಳಿಸಬೇಕು, ತೆಲಂಗಾಣದ ಮಾದರಿಯಲ್ಲಿ ಮೀಸಲಾತಿ ಬಿಂದುವನ್ನು ಜಾರಿಗೊಳಿಸಲು ಒತ್ತಾಯ. ಶೇ.೧% ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳು ಸಹ ನಮ್ಮ ಹಕ್ಕು ಹಾಗಾಗಿ ಅದನ್ನೂ ಸಹ ಅಸ್ಪೃಶ್ಯ ಅಲೆಮಾರಿ ಸಮುದಾಯ ಗಟ್ಟಿಯಾಗಿ ಒತ್ತಾಯಿಸುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ ೪೯ ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು. ಇತರೆ ಸಮುದಾಯಗಳನ್ನು ಕೈಬಿಟ್ಟು, ಕೈಬಿಟ್ಟವರಿಗೆ ಪ್ರತ್ಯೇಕ ನಿಗಮ ರಚಿಸುವಂತೆ ಒತ್ತಾತಿಸಲಾಗುವುದು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವು ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ. “ನೆಲೆ ಇಲ್ಲದ ಜನ ಎದ್ದು ಬಿದ್ದು ಕಣ್ಣೀರಿಡುತ್ತಾ ರಾಜಧಾನಿಗೆ ಓಡಿ ಬರುತ್ತಿದ್ದಾರೆ”. ಈ ಪ್ರತಿಭಟನೆಯು ಕೇವಲ ಒಂದು ದಿನದ ಹೋರಾಟವಲ್ಲ, ಅಲೆಮಾರಿಗಳಿಗೆ ನ್ಯಾಯ ದೊರೆಯುವವರೆಗೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿಯ ಅಹೋರಾತ್ರಿ ಹೋರಾಟವನ್ನು ಮುಂದುವರೆಸಲಾಗುವುದು. ಇದು ಒಂದು ಸಮುದಾಯದ ಅಸ್ತಿತ್ವ ಮತ್ತು ನ್ಯಾಯದ ಹೋರಾಟವಾಗಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ಸರ್ಕಾರವು ಪರಿಶಿಷ್ಟ ಜಾತಿಗಳನ್ನು ಎಡಗೈ, ಬಲಗೈ ಮತ್ತು ಸ್ಪೃಶ್ಯ ಸಮುದಾಯಗಳಾಗಿ ವಿಂಗಡಿಸಿ, ಅವುಗಳಿಗೆ ಕ್ರಮವಾಗಿ ಶೇ ೬ರಷ್ಟು, ಶೇ ೬ರಷ್ಟು ಮತ್ತು ಶೇ ೫ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ. ನಾಗನಮೋಹನ್ ದಾಸ್ ವರದಿಯು ಸಮುದಾಯಗಳನ್ನು ಗುಂಪು ಮಾಡದೆ, ಅವುಗಳ ಹಿಂದುಳಿದಿರುವಿಕೆಯ ಆಧಾರದ ಮೇಲೆ ಐದು ಗುಂಪುಗಳನ್ನು ರಚಿಸಿತ್ತು. ಆ ವರದಿಯ ಪ್ರಕಾರ, ಅಲೆಮಾರಿಗಳಿಗೆ ಪ್ರತ್ಯೇಕ ಗುಂಪು ಮಾಡಿ ಶೇ ೧ರಷ್ಟು ಮೀಸಲಾತಿಯೊಂದಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಇದರಿಂದ ಅಲೆಮಾರಿಗಳಿಗೆ ಸಾಮಾಜಿಕ ನ್ಯಾಯ ದೊರೆಯುವ ಭರವಸೆ ಇತ್ತು.
ಆದರೆ, ಈಗಿನ ಸರ್ಕಾರದ ನಿರ್ಧಾರದಿಂದಾಗಿ ಅಲೆಮಾರಿ ಸಮುದಾಯಗಳು ಸ್ಪೃಶ್ಯ ಸಮುದಾಯಗಳ ಗುಂಪಿನಲ್ಲಿ ಸೇರಿ, ಮೀಸಲಾತಿಯಲ್ಲಿ ಕೊನೆಯ ಆದ್ಯತೆ ಪಡೆಯುವಂತಾಗಿದೆ. ಈ ನಿರ್ಧಾರವು ನ್ಯಾಯಯುತವಾಗಿ ದೊರೆಯಬೇಕಿದ್ದ ಹಕ್ಕನ್ನು ಕಸಿದುಕೊಂಡಿದೆ . ಈ ನಿರ್ಧಾರವನ್ನು ಕೂಡಲೇ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದಿರುವ ಶೆಟ್ಟಿ ವಿಭೂತಿ ಹಾವೇರಿಜಿಲ್ಲೆಯಿಂದ ಅಲೆಮಾರಿ ಸಮುದಾಯದ ೪೦೦ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ...

ರಾಣೆಬೆನ್ನೂರ ಅರಣ್ಯದಲ್ಲಿ “೩೫೦೦ ವರ್ಷಗಳ ಹಿಂದಿನ ಶಿಲಾಗೋರಿ” ಪತ್ತೆ.!!

  ರಾಣೆಬೆನ್ನೂರ ಅರಣ್ಯದಲ್ಲಿ "೩೫೦೦ ವರ್ಷಗಳ ಹಿಂದಿನ ಶಿಲಾಗೋರಿ" ಪತ್ತೆ.!! ರಾಣೆಬೆನ್ನೂರ: ಪುರಾತತ್ವ...