“ಮಾನವರ ಕುಲ ಉದ್ಧಾರ ಮಾಡಲಿಕ್ಕಾಗಿಯೇ ಹುಟ್ಟಿದ ಮಹಾಕಾವ್ಯ ಮಹರ್ಷಿ ವಾಲ್ಮೀಕಿ ರಾಮಾಯಣ”

Date:

( ಅ.೭ರಂದು ನಾಡಿನಾದ್ಯಂತ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನುಆಚರಿಸಲಾಗುತ್ತಿದ್ದು, ಅವರ ಜಯಂತಿಯ ಅಂಗವಾಗಿ ಈ ಲೇಖನ)
ವಾಲ್ಮೀಕಿ ಬರೆದ ರಾಮಾಯಣ
ಎಲ್ಲರಿಗೂ ಬೇಕು
ಆದರೆ ರಾಮಾಯಣ ಬರೆದ ವಾಲ್ಮೀಕಿ
ಮಾತ್ರ ಯಾರಿಗೂ ಬೇಡ
ಏಕೇಂದರೆ ಅವನು ಬೇಡ!
ಈ ಪುಟ್ಟ ಹನಿಗವನದಲ್ಲಿ  ಆದಿಕವಿ ಮಹರ್ಷಿ ವಾಲ್ಮೀಕಿ ಮತ್ತು ಅವರ ಸಂಜಾತರಾದ ನಾವು ಎದುರಿಸುತ್ತಿರುವ ಇಕ್ಕಟ್ಟು-ಬಿಕ್ಕುಟ್ಟಗಳು ಸೂಕ್ಷ್ಮತೆಯನ್ನು ಕಾಣಬಹುದಾಗಿದೆ. ’ನ ಭೂತೋ ನ ಭವಿಷ್ಯತಿ’ ಅಂದರೆ ಹಿಂದೆ ಯಾರೂ ಬರೆದಿಲ್ಲ, ಮುಂದೆ ಯಾರೂ ಬರೆಯಲು ಸಾಧ್ಯವಿಲ್ಲ, ಎನ್ನುವಂತಹ ಬೃಹತ್ ರಾಮಾಯಣ ಮಹಾ ಕಾವ್ಯವನ್ನು ವಿಶ್ವಕ್ಕೆ ನೀಡಿದ ಶ್ರೇಷ್ಠತೆ ಶ್ರೀ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ. ಆದರೆ ಮಹರ್ಷಿಗಳು ಸೃಷ್ಟಿಸಿದ ಪಾತ್ರ “ಶ್ರೀರಾಮನಿಗೆ ಸಿಕ್ಕ ಆದ್ಯತೆ ವಾಲ್ಮೀಕಿಯವರಿಗೆ ಸಿಕ್ಕಿಲ್ಲ” ಎನ್ನುವುದು ಕಠೋರ ಸತ್ಯವು ಆಗಿದೆ.
ರಾಮಾಯಣ ಎಂದರೆ ಎಲ್ಲರಿಗೂ ನೆನಪಾಗುವುದು ಮಹರ್ಷಿ ವಾಲ್ಮೀಕಿ. “ಯಾವುದೇ ಒಂದು ಕೃತಿ ಅಥವಾ ಕಾವ್ಯ ಜನಮಾನಸದಲ್ಲಿ ಉಳಿಯಬೇಕಾದರೆ ಅಥವಾ ಸರ್ವಕಾಲಕ್ಕೂ ಅನ್ವಯವಾಗಬೇಕಾದರೆ, ಅದು ಜನಜೀವನಕ್ಕೆ ಹತ್ತಿರವಾಗಿರಬೇಕು ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿರಬೇಕು. ಯಾವುದೇ ಜಾತಿ, ಧರ್ಮ, ಲಿಂಗ, ವರ್ಗ, ವರ್ಣ, ಬೇಧ-ಭಾವವಿಲ್ಲದೆ ಎಲ್ಲರೂ ಒಪ್ಪುವಂತಿರಬೇಕು. ಅಲ್ಲದೆ ನವರಸಗಳಿಂದ ಕೂಡಿರಬೇಕು, ಈ ಎಲ್ಲಾ ಗುಣಗಳನ್ನು ಹೊಂದಿರುವ, ಪ್ರೀತಿ, ಮಮತೆ, ದಯೆ, ಅನುಕಂಪ, ತ್ಯಾಗ, ಪರೋಪಕಾರ, ಗೌರವ ಮುಂತಾದ ಮೌಲ್ಯಗಳನ್ನು ಒಳಗೊಂಡಿರುವ ವಾಲ್ಮೀಕಿ ರಾಮಾಯಣ ಸರ್ವಕಾಲಕ್ಕೂ ಒಪ್ಪುವಂತಹ ಕೃತಿಯಾಗಿದೆ”.
೨೪,೦೦೦ ಶ್ಲೋಕಗಳಿಂದ ಏಳು ಕಾಂಡಗಳನ್ನು ಒಳಗೊಂಡ ಈ ಬೃಹತ್ ವಾಲ್ಮೀಕಿ ರಾಮಾಯಣ ಎಲ್ಲ ಕೃತಿಗಳಿಗೆ ಒಂದು ಮಾದರಿಯಾಗಿದೆ. ಹೀಗಾಗಿ ಕುವೆಂಪು ಅವರು “ಕಾವ್ಯಶ್ರೀಯ ಕೊಂಬೆಯನ್ನೇರಿ ರಾಮ ರಾಮ ಎಂಬ ಮಧುರವಾದ ಅಕ್ಷರಗಳನ್ನು ಮಧುರವಾಗಿ ಧ್ವನಿಗೈದ ವಾಲ್ಮೀಕಿ ಎನ್ನುವ ಕೋಗಿಲೆಗೆ ವಂದಿಸುತ್ತಾ” ತಮ್ಮ ಶ್ರೀ ರಾಮಾಯಣ ದರ್ಶನಂ ಕಾವ್ಯ ಬರೆದು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ವಾಲ್ಮೀಕಿ ಒಬ್ಬ ಬೇಡ, ಬೇಟೆಗಾರ, ಬೇಟೆಯಿಂದಾಗುವ ನೋವು, ಸಂಕಟ, ವಿಷಾದಗಳ ಶೋಕವೇ ಶ್ಲೋಕವಾಗಿ ವಾಲ್ಮೀಕಿ ಪರಿವರ್ತಿತನಾಗುತ್ತಾನೆ. ಕ್ರಮೇಣ ದೇಹ ಮತ್ತು ಮನಸ್ಸುಗಳ ಸಾಧನೆಯಿಂದ ಕಾವ್ಯ ಸಿದ್ದಿಯನ್ನು ಪಡೆದು ಕವಿಯಾಗಿ, ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ, ಭಾರತೀಯ ಸಂಸ್ಕೃತಿಯ ಸೃಷ್ಟಿಕರ್ತನಾಗಿ ಧರ್ಮ, ನ್ಯಾಯ, ನೀತಿ, ಕರುಣೆ, ಅನುಕಂಪ ಮೊದಲಾದ ಜೀವನ ಮೌಲ್ಯಗಳನ್ನು ತನ್ನ ಕೃತಿಯಲ್ಲಿ ಅನಾವರಣಗೊಳಿಸಿ ಸಾರ್ವಕಾಲಿಕವಾಗಿ ಆದರ್ಶವ್ಯಕ್ತಿಯಾಗಿದ್ದಾನೆ. ಆದಿಕವಿ, ವಿಶ್ವಕವಿ, ಸಮಾಜ ಸುಧಾರಕ, ಶಿಕ್ಷಣತಜ್ಞ, ರಾಜನೀತಿಜ್ಞ, ತತ್ವಜ್ಞಾನಿ, ಶೋಷಿತ ಜನರ ನಾಯಕ, ಸತ್ಯ ಮತ್ತು ಸಮಾನತೆ ಹರಿಕಾರ, ಹೀಗೆ ಹಲವಾರು ರೀತಿಯಿಂದ ಗುರುತಿಸಲ್ಪಡುವ ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆ ವಾಲ್ಮೀಕಿ ರಾಮಾಯಣ”.
ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಿರುವ ಆನೇಕ ಸಂಪ್ರದಾಯದ ವಿಚಾರಗಳು ಇಂದಿಗೂ ಕೂಡ ನಮಗೆ ಪ್ರಸ್ತುತವೆನಿಸುತ್ತವೆ. ಅವು ಯಾವುವು ಅಂದರೆ ’ಕೌಸಲ್ಯ ಸುಪ್ರಜಾ ರಾಮ ಸಂಧ್ಯಾ ಪೂರ್ವ ಪ್ರವರ್ತತೆ’ ನಾವೆಲ್ಲ ಕೇಳಿರುವಂತಹ ಈ ಒಂದು ಶ್ಲೋಕ ಯಾಕೆ ಅಷ್ಟೊಂದು ಜನಜನಿತವಾಯಿತು ಅಂದರೆ, ಒಂದು ಬಾರಿ ವಿಶ್ವಾಮಿತ್ರ ತನ್ನ ಆಶ್ರಮದಲ್ಲಿ ಯಜ್ಞಯಾಗಗಳನ್ನು ಮಾಡುವಾಗ ರಾಕ್ಷಸರಿಂದ ಸಮಸ್ಯೆಯಾಗುತ್ತಿತ್ತು ಎನ್ನುವ ಕಾರಣಕ್ಕೆ ಆ ರಾಕ್ಷಸರನ್ನು ಸಂಹಾರ ಮಾಡುವಲ್ಲಿ ವಿಶ್ವಾಮಿತ್ರ ವಿಫಲನಾದಾಗ ಅಯೋಧ್ಯೆಯ ಯುವರಾಜಕುಮಾರರಾಗಿದ್ದ ರಾಮ-ಲಕ್ಷ್ಮಣರನ್ನು ಅಲ್ಲಿನ ರಾಕ್ಷಸರನ್ನು ಸಂಹಾರ ಮಾಡಲು ಕರೆಸಿಕೊಂಡ.
ತಡ ರಾತ್ರಿಯಲ್ಲಿ ನಿದ್ದೆ ಆರಂಭಿಸಿದ ರಾಮ ಮುಂಜಾನೆ ಮಲಗಿರುವ ಸಮಯದಲ್ಲಿ ಶ್ರೀರಾಮನನ್ನು ಎಬ್ಬಿಸಲು ಒಂದು ಶ್ಲೋಕವನ್ನು ಹೇಳುತ್ತಾನೆ. ಆಶ್ಲೋಕವೇ “ಕೌಸಲ್ಯ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಕಾರ್ದೂಲ ಕರ್ತವ್ಯಂ ದೈವಮಾನ್ವಿಕಂ” ಎಂದು ಹೇಳುವ ಮೂಲಕ ಕೌಸಲ್ಯಯ ಮಗನಾದ ರಾಮನೇ ಪೂರ್ವದಲ್ಲಿ ಸೂರ್ಯ ಉದಯಿಸುತ್ತಿದ್ದಾನೆ, ನರಕದಲ್ಲಿನ ರಾಕ್ಷಸರು ಬರುವ ಹೊತ್ತಾಯಿತು ನಿನ್ನ ಕರ್ತವ್ಯ ಕಾಯಕವನ್ನು ಆರಂಭಿಸು ಎಂದು ವಾಲ್ಮೀಕಿ ತನ್ನ ರಾಮಾಯಣದ ಮೂಲಕ ಪ್ರತಿಪಾದಿಸಿದ್ದಾರೆ.
ರಾಮ ಬೆಸೆಯುವ ಸಂಕೇತವಾಗಬೇಕೋ, ಒಡೆಯುವ ಸಂಕೇತವಾಗಬೇಕೋ? ಬೆಸೆಯುವ ಸಂಕೇತವಾಗಬೇಕು. ಪ್ರಜಾವತ್ಸಲ ಆಗಬೇಕು. ರಾಮರಾಜ್ಯ ಎಂದ ಕೂಡಲೇ ಬೇರೊಂದು ಹೃದಯದಲ್ಲಿ ಭಯ ಹುಟ್ಟಬಾರದು. ಪ್ರತಿಯೊಬ್ಬರ ಕ್ಷೇಮವೂ ಕೂಡ ಅಲ್ಲಿ ಕಾಪಾಡಲ್ಪಡುತ್ತದೆ. ಪ್ರತಿಯೊಬ್ಬರೂ ಕೂಡ ಅಲ್ಲಿ ಸಂತುಷ್ಟರಾಗಿದ್ದಾರೆ. ನಾಯಿ ಬಂದು ದೂರು ಕೊಟ್ಟಾಗಲೂ ಸ್ವೀಕರಿಸಿದ್ದಾನೆ ರಾಜಾರಾಮ.
ಒಂದು ನಾಯಿ ಬಂದು ರಾಮನಿಗೆ ದೂರು ಕೊಡುತ್ತದೆ. “ನನ್ನನ್ನು ಒಬ್ಬ ವಿನಾಕಾರಣ ಹೊಡೆದು ಹಿಂಸಿಸಿದ್ದಾನೆ” ಎಂದು. ಆಯಿತು, ಅವನನ್ನು ಸೆರೆಮನೆಗೆ ದೂಡಿ ಶಿಕ್ಷೆ ವಿಧಿಸುತ್ತೇನೆ ಎನ್ನುತ್ತಾನೆ ರಾಮ, ಬೇಡ ಅವನನ್ನು ಸೆರೆಮನೆಗೆ ದೂಡಬಾರದು ನೀವು ಎನ್ನುತ್ತದೆ ನಾಯಿ. ಹಾಗಾದರೆ ಏನು ಶಿಕ್ಷೆ ವಿಧಿಸಬೇಕು? ಎಂದು ಕೇಳುತ್ತಾನೆ ರಾಮ. ಆಗ ಆ ನಾಯಿ ” ಅವನನ್ನು ದೇವಾಲಯವೊಂದರ ಕೋಶಾಧಿಕಾರಿಯಾಗಿ ನೇಮಿಸಬೇಕು” ಎಂದು ಕೇಳಿಕೊಳ್ಳುತ್ತದೆ . ಇದೆಂತಹ ಶಿಕ್ಷೆ, ನಿನ್ನನ್ನು ವಿನಾಕಾರಣ ಹಿಂಸಿಸಿದವನಿಗೆ ಪುರಸ್ಕಾರ ಕೊಡಿಸುವ ಮಾತಾಡುತ್ತಿರುವೆಯಲ್ಲ ಎನ್ನುತ್ತಾನೆ ರಾಮ.  ಆಗಾ ನಾಯಿ ಹೇ:ಇತ್ತದೆ “ನಾನು ಹೋದ ಜನ್ಮದಲ್ಲಿ ದೇವಾಲಯವೊಂದರ ಕೋಶಾಧಿಕಾರಿಯಾಗಿದ್ದೆ. ಅದರ ಹಣ ಕದ್ದು ತಿಂದ ಪಾಪದಿಂದಾಗಿ ಈ ಜನ್ಮದಲ್ಲಿ ನಾಯಿಯಾಗಿ ಹುಟ್ಟಿ ಬೀದಿಗೆ ಬಿದ್ದೆ”, ಹಾಗಾಗಿ ಅವನಿಗೂ ಅದೇ ಸಂಭವಿಸಲಿ ಎಂದು ಈ ಬಗೆಯ ಶಿಕ್ಷೆ ಕೊಡಲು ಬೇಡಿಕೆ ಇಟ್ಟಿದ್ದೇನೆ ಎನ್ನುತ್ತದ ನಾಯಿ. ಈ ಒಂದು ಘಟನೆ ಏನನ್ನು ಸೂಚಿಸುತ್ತದೆ ಎನ್ನುವುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.
ಪ್ರಖ್ಯಾತ ಆಂಗ್ಲ ಲೇಖಕರಾದ ಜಾನ್ ವಾಟರ್ ಹೇಳುವಂತೆ “ಒಬ್ಬ  ಕವಿಯಾಗಿ ಹುಟ್ಟುವುದು ವಿರಳ. ದಾರ್ಶನಿಕನಾಗಿ ಹುಟ್ಟುವುದು ಇನ್ನೂ ವಿರಳ, ಆದರೆ ಒಬ್ಬನೇ ವ್ಯಕ್ತಿ ಕವಿಯೂ ದಾರ್ಶನಿಕನೂ ಆಗಿ ಹುಟ್ಟುವುದು ವಿರಳಾತಿ ವಿರಳ ಮತ್ತು ಅವರೂಪ” ಎನ್ನುವಂತೆ ವಾಲ್ಮೀಕಿ ಕೇವಲ ಕವಿಯೂ, ದಾರ್ಶನಿಕನೂ ಆಗದೆ ಅದಕ್ಕೂ ಮಿಗಿಲಾಗಿ ಕಾಳಿದಾಸ ಹೇಳುವಂತೆ “ಕವಿಕುಲದ ಗುರು”ವಾಗಿದ್ದಾರೆ. ರವಿಂದ್ರನಾಥ ಟಾಗೋರ್ ರಾಮಾಯಣವು “ಮಾನವರ ಕುಲವನ್ನು ಉದ್ಧಾರ ಮಾಡಲಿಕ್ಕಾಗಿಯೇ ಹುಟ್ಟಿದ ಮಹಾಕಾವ್ಯ”ವೆಂದು ಹೇಳಿರುವುದು ಮಾನವ ಸಮಾಜದ ನೈತಿಕ ಆಧಾರವಾಗಿ ರಾಮಾಯಣ ಇಂದಿಗೂ ಉಲ್ಲೇಖನೀಯ. “ಮಾನವರ ಉದ್ಧಾರ ಎಂದೆಂದಿಗೂ ವಾಲ್ಮೀಕಿ ಕೊಟ್ಟ ರಾಮಾಯಣದ ಆದರ್ಶಗಳಿಂದಲೇ ಆಗಬೇಕಾಗಿದೆ.”
ಯಾರೂ ಕೂಡ ಹುಟ್ಟುತ್ತಲೇ ಪಾಪಿಗಳಲ್ಲ. ಸನ್ನಿವೇಶವಶಾತ್ ಅವರು ಪಾಪಿಗಳಾದವರು. ಖಲೀಲ್ ಗಿಬ್ರಾನ್ ಹೇಳುತ್ತಾನೆ-ಅಪರಾಧ ಮಾಡಿದವರು ನಿಮ್ಮ ನಡುವೆ ಯಾರಾದರೂ ಕಂಡರೆ, ಅವರು ಸಿಕ್ಕಿಬಿದ್ದಿದ್ದಕ್ಕೆ ಸಂತೋಷಿಸಬೇಡಿ. ಪಶ್ಚಾತ್ತಾಪ ಪಡಿ. ನಿಮ್ಮಲ್ಲಿ ಅವಿಸಿಟ್ಟಿರುವ ಪಾಪಗಳಿಗಾಗಿ, ಇಲ್ಲೊಂದು ಎಡಹುವ ಕಲ್ಲಿದೆ ಎಂದು ತೋರಿಸುವುದಕ್ಕಾಗಿ ಅವನು ಸಿಕ್ಕಿಬಿದ್ದಿದ್ದಾನೆ. ಇಡೀ ಮರದ ಮೌನ ಸಮ್ಮತಿಯಿಲ್ಲದೆ ಒಂದು ಎಲೆ ಹೇಗೆ ಹಳದಿಯಾಗುವುದು ಸಾಧ್ಯವಿಲ್ಲವೋ ಹಾಗೆ. ನಿಮ್ಮೆಲ್ಲರ ಅವಿಸಿಟ್ಟ ಪಾಪಗಳಿಲ್ಲದೆ ಒಬ್ಬ ಪಾತಕಿ ಉದಯಿಸುವುದಿಲ್ಲ. ಇದು ನಮಗೆ ಗೊತ್ತಿರಬೇಕು. ನಾವೆಲ್ಲರೂ ಒಳಗೆ ಕೇಡಿಗಳೇ?  ನಮ್ಮೊಳಗೆ ಕೇಡಿಗಳಲ್ಲದಿದ್ದರೆ ಸಮಾಜದಲ್ಲಿ ಅಷ್ಟೊಂದು ಕೇಡಿಗಳು ಹುಟ್ಟಲು ಹೇಗೆ ಸಾಧ್ಯ?
ಒಂದು ಕವಿತೆಯ ಸಾಲು ಹೀಗಿದೆ,
“ಇತ ವಿಜ್ಞಾನಿ ಬಾಂಬ್ ಸೃಷ್ಟಿಸಿರುವನು
ಇವನಿಗೆ ೧೦ ಚಡಿ ಏಟು ಕೊಡಿ
ಇತ ರಾಜಕಾರಣಿ ಬಾಂಬ್ ಸೃಷ್ಟಿಗೆ ಅನುಮತಿ ನೀಡಿದ್ದಾನೆ
ಇವನಿಗೆ ೨೦ ಚಡಿ ಏಟು ಕೊಡಿ
ಇತ ಮಠಾಧೀಶ ಬಾಂಬ್ ಸೃಷ್ಟಿಯಾದರು ಸುಮ್ಮನಿದ್ದಾನೆ
ಇವನಿಗೆ ೩೦ ಚಡಿ ಏಟುಕೊಡಿ
ಇತ ಸಾಹಿತಿ ಇವನಿದ್ದು ಬಾಂಬ್ ಸೃಷ್ಟಿಯಾಗಿದೆ
ಇತನಿಗೆ ೧೦೦ ಚಡಿ ಏಟು ಕೊಡಿ” ಎಂದಿದ್ದಾನೆ
ಈ ಕವಿತೆ ಸಾಹಿತಿಗಳ ಮೇಲೆ ಎಂತ ಮಹತ್ವದ ಜವಾಬ್ದಾರಿ ಇದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ.
ಇಂತ ಆಶಯವನ್ನು ಹೊಂದಿ ಸ್ವಸ್ವ ಸಮಾಜ ನಿರ್ಮಾಣಕ್ಕಾಗಿ ಅಂದು-ಈ ನೆಲದ ಮೊದಲ ಮಹಾಕಾವ್ಯವನ್ನು ಬರೆದು ಬದುಕಿನ ಆದರ್ಶಗಳನ್ನು ತಿಳಿಹೇಳುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಮತ್ತು ಸಾಮಾಜಿಕ ಸಂವೇದನೆಯನ್ನು ನೀಡಿದ  ಅರಿವಿನ ಸಂಕೇತವಾಗಿರುವ ವಾಲ್ಮೀಕಿಯನ್ನು, ಇಂದು-ಅರಿವು, ಸಂಘಟನೆ ಮತ್ತು ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದ ವರ್ತಮಾನದ ಬಾಬಾ ಸಾಹೇಬ  ಅಂಬೇಡ್ಕರ್ ಅವರನ್ನು ನಿತ್ಯವೂ ಸ್ಮರಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ.
ರಸಋಷಿ ರಾಷ್ಟ್ರಕವಿ ಕುವೆಂಪು ಅವರು ತಮ್ಮ “ರಾಮಾಯಣ ದರ್ಶನಂ” ಕೃತಿಯಲ್ಲಿ ವಾಲ್ಮೀಕಿ ಬಗ್ಗೆ ಹೀಗೆ ನೋಂದಾಯಿಸಿದ್ದಾರೆ “ಸಜ್ಜನರ ಸಂಘವದು ಹೆಚ್ಚೇನು ಸವಿದಂತೆ” ಎಂಬ ವಾಣಿಯಂತೆ ಸಪ್ತರ್ಷಿಗಳ ಸತ್ಸಂಗ, ಗುರುಕೃಪೆ ದೊರೆತ ಮೇಲೆ ಬೇಡರ ತರುಣನು ವಾಕ್ಯವಿಶಾರದನಾಗಿ, ವ್ಯಾಧನು ಮಹರ್ಷಿಯಾದನು.” ಹಾಗಾಗಿ ’ಬೇಡ ವಾಲ್ಮೀಕಿಯಂತಹ ಕವಿ, ರಾಮಾಯಣದಂತಹ ಕೃತಿ’ ನಮಗೆ ಲಭಿಸಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದೇ ಭಾವಿಸುತ್ತಾರೆ ಮತ್ತು ಗೌರವಿಸುತ್ತಾರೆ ಕುವೆಂಪು.

ರಾಮಾಯಣದಲ್ಲಿ ಸ್ತ್ರೀಯರಿಗೂ ಶಿಕ್ಷಣದ ಹಕ್ಕು ಇತ್ತು ಮತ್ತು ಸ್ತ್ರೀಯರೂ ಗುರುವಾಗುವ ಅರ್ಹತೆ ಇತ್ತು. ಉಪಾಧ್ಯಾಯಿನಿ, ಅಚಾರ್ಯಾಣಿ ಎಂದು ಅಂದಿನ ಗುರುಸ್ಥಾನದಲ್ಲಿದ್ದ ಸ್ತ್ರೀಯರಿಗೆ ಕರೆಯಲಾಗುತ್ತಿತ್ತು. ಹೆಚ್ಚಿನ ಹೆಣ್ಣುಮಕ್ಕಳು ೧೬ ಅಥವಾ ೧೭ ವಯಸ್ಸಿನವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದು ಅವರು ಸದ್ಯೋವಧುವೆಂದು ಗುರುತಿಸಲ್ಪಡುತ್ತಿದ್ದರು. ೧೭ನೇ ವಯಸ್ಸಿನ ನಂತರವೂ ವಿವಾಹವಾಗದ ಕನ್ಯೆಯರು ವಿದ್ಯಾಭ್ಯಾಸ ಮುಂದುವರಿಸಿದರೆ ಅವರನ್ನು ಬ್ರಹ್ಮವಾದಿನಿಯರೆಂದು ಕರೆಯುತ್ತಿದ್ದರು. ಋಷಿ ವಿಶ್ವರಾ, ಗಾರ್ಗಿ, ಸುಲಭಾ, ಲೋಪಾಮುದ್ರಾ, ಪಿರತಾ, ರೊಮಾಶ, ಊರ್ವಶಿ, ಘೋಷಾ, ಮೈತ್ರೇಯಿ, ಆತ್ರೇಯಿ, ಕಮಾಲನಕಿ, ಇಂದ್ರಾಣಿ, ರೇವಾ, ರೋಹಾ, ಮಾಧವಿ, ಅನುಲಕ್ಷ್ಮೀ, ಕಥಿ, ಕಲಪಿ, ಭವೀಚಿ, ವಿಜಯಾಂಕಾ, ವಾಚಕ್ನವೀ ಮುಂತಾದವರನ್ನು ಕಾಣಬಹುದಾಗಿದೆ.
ರಾಮಾಯಣದಂಥ ಲೋಕವಿಖ್ಯಾತ ಕಾವ್ಯವನ್ನು ಕೊಟ್ಟ ವಾಲ್ಮೀಕಿ ಮಹಾಮುನಿಗಳ ಜಯಂತಿಯನ್ನು ಆರಿಸುವ ಸರಿಯಾದ ಮಾರ್ಗವೆಂದರೆ ಶ್ರೀರಾಮಚಂದ್ರನ ಬದುಕಿನ ಚಿತ್ರಣ ಕೊಡುತ್ತಲೇ, ನಮ್ಮೆಲ್ಲರ ಬದುಕನ್ನೂ ಸ್ಪರ್ಶಿಸುವ ರಾಮಾಯಣ, ಮಷ್ಟತನ ಮತ್ತು ಒಳ್ಳೆಯತನದ ನಡುವಿನ ಹೋರಾಟದಲ್ಲಿ ಅಂತಿಮವಾಗಿ ಗೆಲ್ಲುವುದು ಏನೆಂಬುದನ್ನು ತೋರಿಸಿಕೊಟ್ಟ ಆದಿಗ್ರಂಥ  ರಾಮಾಯಣದ ಪಠ್ಯವನ್ನು ಶ್ರದ್ಧೆಯಿಂದ ಓದುವುದು. ಆ ಕಾವ್ಯದ ಸೊಬಗನ್ನು ಸವಿಯುವುದು. ಅದರಲ್ಲಿನ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಈ ಜಗತ್ತಿನಲ್ಲಿ ಓದದೇ ಇದ್ದವರಿಗೂ ಗೊತ್ತಿರುವ ಕೃತಿಯೆಂದರೆ ರಾಮಾಯಣ ಬಹುತೇಕರಿಗೆ ಗೊತ್ತಿಲ್ಲದ ಭಾಷೆಯಲ್ಲಿ ರಚಿತವಾದ ಕೃತಿಯೊಂದು ಲೋಕಪ್ರಸಿದ್ದಿಯನ್ನು ಪಡೆದಿದ್ದರೆ ಅದಕ್ಕೆ ಕಾರಣ ಆ ಕೃತಿಗಿರುವ ಮೌಲ್ಯ ಮತ್ತು ಸಾರ್ವಕಾಲಿಕತೆಯನ್ನು ಅರ್ಥಮಾಡಿಕೊಳ್ಳಬಹುದು.
ಇಂದು ಎಲ್ಲಿ ನೋಡಿದರಲ್ಲಿ ಹಿಂಸೆ, ಅಸೂಯೇ, ದಬ್ಬಾಳಿಕೆ, ದ್ವೇಷದ ವಿಷಗಾಳಿ ಹರುಡುತ್ತಿದೆ. ಬಡವರ, ಧ್ವನಿಇಲ್ಲದವರ ಮೇಲೆ ಉಳ್ಳವರ ದಬ್ಬಾಳಿಕೆಯನ್ನು ಕಾಣುತ್ತಿದ್ದೆ. ಬಂಧುಗಳೆ ಇಲ್ಲಿನ ನಾನು ರಾಮಾಯಣದ ಕುರಿತು ಮಾತನಾಡುವಾಗ ಮಹಾಭಾರತದ ಕಾಂಡವವನ ದಹನ ಪ್ರಸಂಗವನ್ನು ಉಲ್ಲೇಖಿಸುವೆ. “ಪಾಂಡವರು ಅಗ್ನಿ ದೇವನನ್ನು ಸಂತ್ರಪ್ತಿಗೊಳಿಸಲು ಕಾಂಡವವನವನ್ನು ಪ್ರಾಣಿ-ಪಕ್ಷಿ, ಕೀಟುಗಳು, ಅಲ್ಲಿ ವಾಸವಿದ್ದ  ಬುಡಕಟ್ಟು ಸಮುದಾಯದ ಸಮೇತ ದಹಿಸುತ್ತಾರೆ. ಆದರೆ ಈ ಕಾಡು ದಹಿಸುವ ಮುನ್ನ ಪುಟ್ಟ ಪಕ್ಷಿಯೊಂದು ಈ ಕಾಡಿನ ಮರದಲ್ಲಿ ತನ್ನ ಪುಟ್ಟಮರಿಗಳಿಗಾಗಿ ಆಹಾರ ಅರಸಿ ಈ ಕಾಡಿನಿಂದ ಹೊರಕ್ಕೆ ಹೋಗಿರುತ್ತದೆ. ಅದು ಮರಳಿ ತನ್ನ ಗೂಡಿಗೆ  ಬರುವಾಗ ಕಾಡಿಗೆ ಬೆಂಕಿ ಬಿದ್ದು ಧಗಧಗನೇ ಉರಿಯುತ್ತಿರುವುದನ್ನು ಕಂಡು ತನ್ನ ಮರಿಗಳಿಗಾಗಿ ಮರುಗುತ್ತದೆ. ತಕ್ಷಣ ಆಪಕ್ಷಿ ಅಲ್ಲಿದ್ದ ನೀರಿನ ತೊರೆಯಲ್ಲಿ ತನ್ನ ರೆಕ್ಕೆಗಳನ್ನು ತೊಯಿಸಿ ಉರಿಯುತ್ತಿರುವ ಬೆಂಕಿಯಮೇಲೆ ಹಾಕುತ್ತದೆ. ಇದನ್ನು ಕಂಡು ಪಾಂಡವರ ಸೈನಿಕರು ನಗುತ್ತಾರೆ, ಕಿಚಾಯಿಸುತ್ತಾರೆ. ಈ ಪಕ್ಷಿಯಿಂದ ಈ ಬೆಂಕಿಯನ್ನು ನಂದಿಸಲು ಸಾಧ್ಯವೇ ಎಂದು? ಆದರೆ ಪಕ್ಷಿ ಮಾತ್ರ ತನ್ನ ಪಾಡಿಗೆ ತಾನು ರೆಕ್ಕೆಯಲ್ಲಿ ನೀರು ತಂದು ಬೆಂಕಿಯ ಮೇಲೆ ಹಾಕುವು ಪ್ರಯತ್ನ ಮುಂದುವರೆಸುತ್ತದೆ. ಈ ಪಕ್ಷಿಯ ಸ್ಥಿತಿಯಲ್ಲಿ ನಾವಿದ್ದೇವೆ. ನಾಡೆಂಬ ನಾಡಿನ ಬೆಂಕಿ ಬಿದ್ದಿದೆ, ಇದನ್ನು ಆರಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲದೇ ಆ ಪಕ್ಷಿಯ ಹಾಗೆ ಬೆಂಕಿಯನ್ನು ನಂದಿಸುವ ಪ್ರಯತ್ನ ನಾವು ನಿವೇಲ್ಲ ಮಾಡೋಣ.
ವಾಲ್ಮೀಕಿ’ಯೆಂಬ ಹೆಸರೇ  ವಾಲ್ಮೀಕಿ ಮತ್ತು ನಾಯಕ ಜಾತಿಯನ್ನು ಸಮೀಕರಿಸುತ್ತದೆ. ಆದ್ದರಿಂದ ನಾವು ವಾಲ್ಮೀಕಿ ಮಹರ್ಷಿಯವರನ್ನು ಜಾತಿಗೆ ಸೀಮಿತಗೊಳಿಸದೆ ಸರ್ವ ಜನಾಂಗದ ’ಮಹಾಕವಿ’ಯೆಂದು ಭಾವಿಸಬೇಕು, ಬಿಂಬಿಸಬೇಕು.  ಶೋಷಿತ ಸಮುದಾಯಗಳು ಪರಸ್ಪರ ಒಳಗೊಳ್ಳುವಿಕೆಯ ಮೂಲಕ ಸಂಘಟಿತರಾಗುವುದು ಇಂದಿನ ಅಗತ್ಯವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ವಾಣಿಯಂತೆ “ಇತಿಹಾಸವನ್ನು ಅರಿಯದವ ಇತಿಹಾಸವನ್ನು ಸೃಷ್ಟಿಸಲಾರ” ಎಂಬುದು ಸತ್ಯ. ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆ ರಾಮಾಯಣದ ಮಹಾಕಾವ್ಯದ ತಿರಳನ್ನು ತಿಳಿಸುವ ಮೂಲಕ ನಮ್ಮ ಇತಿಹಾಸವನ್ನು ತಿಳಿಸುವ ಕೆಲಸಮಾಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಚಿಂತನೆ ನಡೆಸಬೇಕಾಗಿದೆ.
ಮಾಲತೇಶ ಅಂಗೂರ

ಸಾಹಿತಿ/ಪತ್ರಕರ್ತ, ಹಾವೇರಿ.
ಮಾಹಿತಿ ಕೃಪೆ: ವಾಲ್ಮೀಕಿ ವಿಜಯ ಕೃತಿ

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...