ಮಾ.೪ರಂದು ಹಾವೇರಿಯಲ್ಲಿ ನವ ಕರ್ನಾಟಕ ನಿರ್ಮಾಣ ಆಂದೋಲನದ ಬಗ್ಗೆ ಜನತೆಯ ನಡುವೆ ಚರ್ಚೆ ಕಾರ್ಯಕ್ರಮ

Date:

ಹಾವೇರಿ: ಸ್ವಾಭಿಮಾನಿ-ಸ್ವಾವಲಂಬಿ ನವ ಕರ್ನಾಟಕ ನಿರ್ಮಾಣಕ್ಕೆ ಅಗತ್ಯವಾದ ಆಂದೋಲನದ ಬಗ್ಗೆ ಜನತೆಯ ನಡುವೆ ‘ಜನತಾ ಪ್ರಣಾಳಿಕೆ’ಯ ಚರ್ಚೆ ಕಾರ್ಯಕ್ರಮವನ್ನು ಮಾ.೪ರಂದು ಮಂಗಳವಾರ ಬೆಳಿಗ್ಗೆ ೧೦-೩೦ಕ್ಕೆ ಇಲ್ಲಿನ ಸಜ್ಜನರ ಪಂಕ್ಷನ್‌ಹಾಲ್‌ನಲ್ಲಿ ಆಯೋಜಿಸಲಾಗಿದ್ದು, ‘ನಾಡಿನ ರೈತರು, ದಲಿತರು, ಕನ್ನಡಪರ ಹೋರಾಟಗಾರರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಜನರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಎಸ್ ಪಿ ಜಿಲ್ಲಾ ಅಧ್ಯಕ್ಷ ಅಶೋಕ ಮರಿಯಣ್ಣನವರ ಮನವಿ ಮಾಡಿದ್ದಾರೆ.
ಮಾ.೧ರಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಮುಖರ ಪೂರ್ವಭಾವಿಯಲ್ಲಿ ಅವರು ಮಾತನಾಡಿದರು. ನವ ಕರ್ನಾಟಕ ನಿರ್ಮಾಣ ಆಂದೋಲನದ ಮುಖಂಡರು ನಮ್ಮೆಲ್ಲರ ಸಮಸ್ಯೆಗಳು ಪರಿಹಾರವಾಗಬೇಕಾದರೆ, ಕನ್ನಡ ನಾಡಿನ ಸ್ವಾಭಿಮಾನ ಮತ್ತು ಕನ್ನಡ ಜನತೆಯ ಸ್ವಾವಲಂಬನೆಗೆ ಬದ್ಧವಾದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ‘ಜನತಾ ಪ್ರಣಾಳಿಕೆ’ಯನ್ನು ಜನವರಿ ೨೦ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದು, ಈ ಪ್ರಣಾಳಿಕೆಯನ್ನು ಜನತೆಯ ನಡುವೆ ಚರ್ಚಿಸಲು ‘ನವ ಕರ್ನಾಟಕ ನಿರ್ಮಾಣ ಆಂದೋಲನ’ ಬ್ಯಾನರ್ ಅಡಿಯಲ್ಲಿ ಎಲ್ಲಾ ರಾಜ್ಯ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
ಮಾ.೪ರಂದು ಮಾಜಿ ಕೇಂದ್ರ ಸಚಿವರಾದ ಸಿ. ಎಂ. ಇಬ್ರಾಹಿಂ, ರೈತ ಸಂಘದ ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಮಾಜಿ ಶಾಸಕರಾದ ಎಚ್. ಡಿ. ಬಸವರಾಜ್, ಆರ್.ಪಿ.ಐ. ಕರ್ನಾಟಕ ರಾಜ್ಯಾಧ್ಯಕ್ಷರಾದ ಮೋಹನ್ ರಾಜ್, ಆರ್.ಪಿ.ಐ. (ಬಿ) ರಾಷ್ಟ್ರೀಯ ಅಧ್ಯಕ್ಷರಾದ ಎನ್. ಮೂರ್ತಿ, ಜಯ ಕರ್ನಾಟಕದ ರಾಜ್ಯಾಧ್ಯಕ್ಷರಾದ ರಾಧಾಕೃಷ್ಣ ಮುಂತಾದ ನಾಯಕರು ಹಾವೇರಿಗೆ ಆಗಮಿಸಿ ನವಕರ್ನಾಟಕ ನಿರ್ಮಾಣ ಆಂದೋಲನದ ಬಗ್ಗೆ ಜನತೆಯ ನಡುವೆ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಸಭೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಪರಶರಾಮ ರಿತ್ತಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಗೋಣೆಮ್ಮನವರ, ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಟಿ.ಬಿ.ಬಸವರಾಜ, ಕ.ರಾ.ಮಾ.ಹ.ರ.ಭ್ರ.ನಿ.ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ ಟೀಕಿಹಳ್ಳಿ, ವಿವಿಧ ಸಂಘಟನೆಗಳ ಮುಖಂಡರುಗಳಾದ ಆನಂದ ಮುರಡೆಪ್ಪನವರ, ಸಂತೋಷ ಗುಡ್ಡಪ್ಪನವರ, ಹನುಮಂತಪ್ಪ ಲಿಂಗದಹಳ್ಳಿ, ಉಡಚಪ್ಪ ಮಾಳಗಿ, ರಾಜಶೇಖರ ಉಪ್ಪಾರ, ವಿಜಯಕುಮರ ವಿರಕ್ತಮಠ, ಲಿಯಾಕತ್ ತಿಳವಳ್ಳಿ, ಎಮ್.ಕೆ.ಮಕಬೂಲ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ

ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ ಹಾವೇರಿ:...

ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ

ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ ಹಾವೇರಿ ವಾರ್ತೆ...

ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ : ಶಾಸಕ ಶ್ರೀನಿವಾಸ ಮಾನೆ

ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ :...

ನೊಂದವರ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಪರಿಹರಿಸುವುದು ಪೊಲೀಸರ ಕರ್ತವ್ಯ ಪ್ರಜ್ಞೆಯಾಗಿದೆ -ಸುರೇಖಾ ರಾಯ್ಕರ್

ನೊಂದವರ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಪರಿಹರಿಸುವುದು ಪೊಲೀಸರ ಕರ್ತವ್ಯ ಪ್ರಜ್ಞೆಯಾಗಿದೆ -ಸುರೇಖಾ...