ಮೈಕ್ರೋ ಫೈನಾನ್ಸ್‌ಗಳ ಮೇಲೆ ನಿಗಾ ವಹಿಸಲು ಸಮಿತಿ ರಚಿಸಲು ಡಿಸಿಗೆ ಸಂಸದ ಬೊಮ್ಮಾಯಿ ಸೂಚನೆ

Date:

ಮೈಕ್ರೋ ಫೈನಾನ್ಸ್‌ಗಳ ಮೇಲೆ ನಿಗಾ ವಹಿಸಲು ಸಮಿತಿ ರಚಿಸಲು ಡಿಸಿಗೆ ಂಸದ ಬೊಮ್ಮಾಯಿ ಸೂಚನೆ
* ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿಗೆ ಒತ್ತಾಯಿಸುವಂತಿಲ್ಲ * ಗುಂಡಾಗಳನ್ನು ನೇಮಿಸುವಂತಿಲ್ಲ

ಹಾವೇರಿ: ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿಗೆ ಒತ್ತಾಯಿಸುವಂತಿಲ್ಲ, ಮನೆಗಳಿಗೆ ಕೀಲಿ ಹಾಕುವ ಅಧಿಕಾರ ನಿಮಗಿಲ್ಲ. ಸಾಲ ಕೊಡುವಾಗ ಅವರ ಆರ್ಥಿಕ ಸ್ಥಿತಿ ನೋಡಿಕೊಂಡು ಸಾಲ ನೀಡಬೇಕು. ವಸೂಲಾತಿಗೆ ಗುಂಡಾಗಳನ್ನು ನೇಮಿಸುವಂತಿಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಮಿತಿ ಹಾಗೂ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರ್ ಬಿ ಐ ಮಾರ್ಗ ಸೂಚಿಯನ್ವಯ ವ್ಯವಹಾರ ಮಾಡಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದ ಅವರು ಮೈಕ್ರೋ ಫೈನಾನ್ಸ್‌ಗಳ ಚಲನ-ವಲನಗಳ ಮೇಲೆ ನಿಗಾ ವಹಿಸಲು ಒಂದು ಸಮಿತಿ ರಚಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾಲ ಸೌಲಭ್ಯ ಕೋರಿ ಬ್ಯಾಂಕ್‌ಗೆ ಬರುವ ಎಲ್ಲ ರೈತರಿಗೂ ಸಾಲ ಸಿಗುವಂತಾಗಬೇಕು. ಎಲ್ಲ ಬ್ಯಾಂಕ್ ಗಳು ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಬ್ಯಾಂಕ್ ಗಳಲ್ಲಿ ಅರ್ಹತೆ ಹೊಂದಿದ ಎಲ್ಲ ರೈತರಿಗೂ ಸಾಲ ಸೌಲಭ್ಯ ಸಿಗುವಂತಾಗಬೇಕು. ಬ್ಯಾಂಕ್ ಗೆ ಬರುವ ರೈತರು ಹಾಗೂ ಉದ್ಯಮಿ ಗಳು ನಿಮ್ಮ ಗ್ರಹಕರರಾಗಿರುತ್ತಾರೆ. ಉದ್ಯಮಿಗೆ ಸಾಲ ಪಡೆಯುವ ಮಾಹಿತಿ ಗೊತ್ತಿರುತ್ತದೆ, ಆದರೆ ರೈತರಿಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಸಾಲದ ಅರ್ಜಿ ಫಾರ್ಮ್ ಭರ್ತಿ ಮಾಡುವುದು ಒಳಗೊಂಡಂತೆ ಎಲ್ಲ ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ರೈತರಿಗೆ ಸ್ನೇಹಾಮಯಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಕೃಷಿ ಹಾಗೂ ಕೃಷಿಯೇತರ ಸಾಲ ಹಾಗೂ ಸಹಾಯಧನ ಗುರಿ ಸಾಧನೆಗೆ ಅಧಿಕಾರಿಗಳು ಹಾಗೂ ಬ್ಯಾಂಕರ್ಸ್ ಗಳು ಸಮನ್ವಯದಿಂದ ಕೆಲಸ ಮಾಡಬೇಕು. ಸಾಲ ನೀಡುವುದರಿಂದ ಆರ್ಥಿಕತೆ, ಉದ್ಯೋಗ, ಜಿಡಿಪಿ ಅಭಿವೃದ್ದಿ ಯಾಗಲು ಬ್ಯಾಂಕ್ ಗಳ ಪಾತ್ರ ಪ್ರಮುಖವಾಗಿದೆ. ದೇಶದ ಆರ್ಥಿಕ ಸುಧಾರಣೆ ದೊಡ್ಡ ಕೆಲಸವಾಗಿದ್ದು, ಬ್ಯಾಂಕರ್ಸ್ ಗಳು ದೇಶದ ಆರ್ಥಿಕ ರಾಯಭಾರಿಗಳಾಗಿದ್ದು ಈ ಮಹತ್ವ ತಿಳಿದು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಂಸದರು ಹೇಳಿದರು.
ಪ್ರತಿ ಮೂರು ತಿಗಳಿಗೊಮ್ಮೆ ನಡೆಯುವ ಈ ಸಭೆಯಲ್ಲಿ ಒಂದೊಂದು ಸುಧಾರಣೆಯಗಬೇಕು. ಸಿಡಿ ರೆಸಿಯೋ ನಿಯಮ ಪಾಲಿಸಬೇಕು. ದುಡಿಯುವ ಹಾಗೂ ಸಾಧನೆ ಮಾಡುವ ಮನಸುಳ್ಳವರಿಗೆ ಸಹಾಯ ಮಾಡಿದರೆ ಉತ್ತಮ ಕೆಲಸ ಮಾಡಿದ ತೃಪ್ತಿ ನಿಮಗಿರುತ್ತದೆ. ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಉದ್ಯಮಿಗಳಿಗೂ ಆರ್ಥಿಕ ಸಹಾಯ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಜಿಲ್ಲೆಯಲ್ಲಿ ಮುದ್ರಾ ಯೋಜನೆಯಡಿಯಲ್ಲಿ ೧.೬೫ ಲಕ್ಷ ಜನರು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಕೃಷಿ ಅವಲಂಬಿತ ಹೈನುಗಾರಿಕೆ, ಮೀನುಗಾರಿಕೆ ಹಾಗೂ ಗುಡಿ ಕೈಗಾರಿಕೆಗೆ ಸಾಲ ಸೌಲಭ್ಯ ಗಳಿದ್ದು, ಈ ಯೋಜನೆ ಗಳು ಅರ್ಹ ಪಲಾನುಭವಿಗಳಿಗೆ ತಲುಪಬೇಕು. ಈ ಕುರಿತು ಅಧಿಕಾರಿಗಳು ಹೆಚ್ಚಿನ ಪ್ರಚಾರ ಕೈಗೊಳ್ಳ ಬೇಕು. ಆರ್ ಬಿ ಐ ಮಾರ್ಗ ಸುಚಿಯಾನುಸಾರ ೫೦೦೦ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ತೆರೆಯಬೇಕು, ಕಂಚಾರಗಟ್ಟಿ, ಕಳಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸಲು ಸಂಸದ ಬೊಮ್ಮಾಯಿ ಸೂಚನೆ ನೀಡಿದರು.
ಕೆ ಸಿ ಸಿ ಬ್ಯಾಂಕ್ ನಲ್ಲಿ ಧಾರವಾಡ, ಗದಗ, ಹಾವೇರಿ ಒಳಗೊಂಡಂತೆ ಹಾವೇರಿ ಜಿಲ್ಲೆಯಲ್ಲಿ ಜನರು ಹೆಚ್ಚಿನ ಡೆಪಾಸಿಟ್ ಮಾಡುತ್ತಿದ್ದರೂ ಇಲ್ಲಿನ ಜನರಿಗೆ ಸಾಲ ಸಿಗದಿರುವುದು ವಿಷಾದಕರ ಸಂಗತಿಯಾಗಿದೆ. ಕೂಡಲೇ ಹಾವೇರಿಯಲ್ಲಿ ಕೆಸಿಸಿ ಬ್ಯಾಂಕ್ ಪ್ರಾದೇಶಿಕ ಶಾಖೆ ಆರಂಭಿಸಿ ಇಲ್ಲಿಯ ಜನರಿಗೆ ಅನುಕೂಲ ಮಾಡಿಕೊಡುವಂತೆ ಆರ್ ಬಿ ಐ ಗೆ ಪತ್ರ ಬರೆಯುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಸೂಚನೆ ನೀಡಿದರು.
ಸಭೆಗೆ ಗೈರಾದವರ ಬಗ್ಗೆ ಕೇಂದ್ರ ಕಚೇರಿಗೆ ಪತ್ರ ಬರೆಯಲು ಸೂಚಿಸಿದ ಅವರು ಬ್ಯಾಂಕ್ ಗೆ ಬರುವ ರೈತರಿಗೆ ಸಾಲ ಸಿಗುತ್ತಿಲ್ಲ ವೆಂದು ಯಾವುದೇ ರೈತರು ಮರಳಿ ಹೋಗಬಾರದು, ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾ ಗಿರುವುದರಿಂದ ರೈತರಿಗೆ ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಪ್ರದಾನ್ ಮಂತ್ರಿ ಪಸಲ್ ಭಿಮಾ ಯೋಜನೆ, ಅಮೃತ್ ಕುರಿಗಾಯಿ ಯೋಜನೆ ಸ್ವನಿಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ ಅವರು ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಕುರಿತು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ, ಜಿಲ್ಲಾ ಪಂಚಾಯತ್ ಸಿ ಇ. ಒ ಶ್ರೀಮತಿ ರುಚಿ ಬಿಂದಾಲ್, ಕೆವಿಜಿ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ಸೋಮಶೇಖರ್, ನಂಬರ್ಡ್ ನ ರಂಗನಾಥ್, ಯೂನಿಯನ್ ಬ್ಯಾಂಕ್ ನ ದೀಪಕ್ ಕುಮಾರ್ ಹಾಗೂ ಇತರ ಬ್ಯಾಂಕ್ ಗಳ ಪ್ರಾದೇಶಿಕ ಅಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ ವಿವಿಯಿಂದ ಸದಾಶಿವಶ್ರೀ, ಸಂಸದ ಬೊಮ್ಮಾಯಿ, ಸಾಹಿತಿ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೇಟ್

-ಹಾವೇರಿ ವಿವಿಯಿಂದ ಸದಾಶಿವಶ್ರೀ, ಸಂಸದ ಬೊಮ್ಮಾಯಿ, ಸಾಹಿತಿ ಕುಲಕರ್ಣಿ...

ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ

ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ ಹಾವೇರಿ:...

ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ

ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ ಹಾವೇರಿ ವಾರ್ತೆ...

ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ : ಶಾಸಕ ಶ್ರೀನಿವಾಸ ಮಾನೆ

ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ :...