ರಾಣೆಬೆನ್ನೂರ ಅರಣ್ಯದಲ್ಲಿ “೩೫೦೦ ವರ್ಷಗಳ ಹಿಂದಿನ ಶಿಲಾಗೋರಿ” ಪತ್ತೆ.!!

Date:

ರಾಣೆಬೆನ್ನೂರ: ಪುರಾತತ್ವ ಮತ್ತು ಪ್ರವಾಸೋದ್ಯಮಕ್ಕೆ ಹೆಸರಾಗಿರುವ ರಾಣೆಬೆನ್ನೂರ ಕ್ಷೇತ್ರದಲ್ಲಿ ಇದೀಗ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ತಾಲೂಕಿನ ಬಸಲಿಕಟ್ಟಿ ತಾಂಡಾದ ಅರಣ್ಯ ಪ್ರದೇಶದಲ್ಲಿ ಸುಮಾರು ೩೫೦೦ ವರ್ಷಗಳ ಹಿಂದಿನ ಹಾಗೂ ಕ್ರಿಸ್ತ ಹುಟ್ಟುವ ಮೊದಲೇ ’ಬೃಹತ್ ಶಿಲಾಗೋರಿ’ ಪತ್ತೆಯಾಗಿದ್ದು, ಈ ಕುರಿತು ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡರವರು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಅದನ್ನು ಸಂರಕ್ಷಣೆ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದಾಗ ಈ ಶಿಲಾಗೋರಿಯ ಐತಿಹ್ಯ ಬಹರಂಗವಾಗಿದೆ.
ರಾಣೆಬೆನ್ನೂರಿನ ಬಸಲಿಕಟ್ಟಿಯ ಅರಣ್ಯದ ಮಡಿಲಿನಲ್ಲಿ ಮೌನವಾಗಿ ನಿಂತಿರುವ ಇತಿಹಾಸಪೂರ್ವ ಬೃಹತ್ ಶಿಲಾಗೋರಿ ತಾಣವು ನಮ್ಮ ಪುರಾತನ ಸಂಸ್ಕೃತಿ, ಜೀವನ ಶೈಲಿ ಮತ್ತು ನಂಬಿಕೆಗಳ ಅಮೂಲ್ಯ ಸಾಕ್ಷಿಯಾಗಿದೆ. ಈ ತಾಣದ ಅನ್ವೇಷಣೆಯ ಕಥೆ ೧೮೮೫ರಲ್ಲಿ ಪ್ರಕಟವಾದ ಐisಣ oಜಿ ಣhe ಂಟಿಣiquಚಿಡಿiಚಿಟಿ ಖemಚಿiಟಿs iಟಿ ಣhe ಃombಚಿಥಿ Pಡಿesiಜeಟಿಛಿಥಿ ಎಂಬ ಸಂಶೋಧನಾ ಗ್ರಂಥದ ಎರಡು ಸಾಲುಗಳಿಂದ ಆರಂಭವಾಗುತ್ತದೆ. ಆ ಗ್ರಂಥದಲ್ಲಿ ರಾಣೇಬೆನ್ನೂರಿನಿಂದ ಈಶಾನ್ಯ ದಿಕ್ಕಿನಲ್ಲಿ ಮೂರು ಮೈಲು ದೂರದ ಕಾಡಿನಲ್ಲಿ ನೆಟ್ಟಗೆ ನಿಂತ ಕಲ್ಲುಗಳ ವೃತ್ತವಿದೆ ಎಂಬ ಉಲ್ಲೇಖ, ಇಂದಿಗೂ ಕುತೂಹಲಗೊಳಿಸುತ್ತದೆ.
ಈ ಉಲ್ಲೇಖದ ಆಧಾರದಲ್ಲಿ ಸ್ಥಳವನ್ನು ಪತ್ತೆಹಚ್ಚುವ ಉದ್ದೇಶದಿಂದ ಗ್ರಾಮದ ಬೀರಪ್ಪ ಲಮಾಣಿ, ಸತೀಶ ಭತ್ತದ ಮತ್ತು ಪ್ರೇಮಕುಮಾರ ಬಿದಿರಕಟ್ಟಿ ಅವರೊಂದಿಗೆ ಪ್ರಮೋಧರವರು ಅನ್ವೇಷಣೆಗೆ ಹೊರಟಾಗ ಪೂರ್ವ ಯೋಜನೆಯಂತೆ ಬಸಲಿಕಟ್ಟಿ ತಾಂಡಾ ಸುತ್ತಮುತ್ತ ಹುಡುಕಿದರೂ ಯಾವುದೇ ಸುಳಿವು ಸಿಗಲಿಲ್ಲ.
ಆದರೆ ಅರಣ್ಯದ ಅಂಚಿನಲ್ಲಿ ಸುಮಾರು ೧೨ ಅಡಿ ಎತ್ತರದ ನಿಂತ ಕಲ್ಲು ನಮ್ಮ ಗಮನ ಸೆಳೆದಿತು. ಮೊದಲಿಗೆ ಅದು ನಿಲಸುಗಲ್ಲು ಎಂದು ಭಾವಿಸಿದ್ದರೂ, ಅದರ ಸುತ್ತಲೂ ಕಂಡ ಸಣ್ಣ ನಿಂತ ಕಲ್ಲುಗಳ ಗುಂಪು, ಇದು ಗ್ರಂಥದಲ್ಲಿ ಉಲ್ಲೇಖಿಸಿದ ವೃತ್ತಾಕಾರದ ಶಿಲಾಗೋರಿ ತಾಣವೇ ಆಗಿರಬಹುದೆಂಬ ನಂಬಿಕೆಯನ್ನು ಬಲಪಡಿಸಿತು.
ಈ ಕುರಿತು ತಜ್ಞರಾದ ಡಾ ಶರತ್ ಅವರೊಂದಿಗೆ ವಿಚಾರಿಸಿದಾಗ, ಅವರು ಇದು ವೃತ್ತಾಕಾರದ ಬೃಹತ್ ಶಿಲಾಗೋರಿ ಸಮಾಧಿ ಎಂದು ಖಚಿತಪಡಿಸಿದರು. ಸುಮಾರು ೩೫೦೦-೩೨೦೦ ವರ್ಷಗಳ ಹಿಂದಿನ ಈ ತಾಣ, ಇಂದಿಗೂ ರಾಣೇಬೆನ್ನೂರಿನ ಸಮೀಪ ಜೀವಂತವಾಗಿ ಉಳಿದಿರುವುದು ಅಚ್ಚರಿಯ ಸಂಗತಿಯಾಗಿದೆ.
ಈ ಶಿಲಾಗೋರಿ ತಾಣವು ಕೇವಲ ಸಮಾಧಿಗಳ ಸಮೂಹವಲ್ಲ; ಅದು ಒಂದು ಸಂಘಟಿತ, ಚೈತನ್ಯಮಯ ಮಾನವ ಸಮುದಾಯದ ನೆಲೆ ಆಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆ ಕಾಲದ ಜನರು ಕಬ್ಬಿಣದ ಆಯುಧಗಳನ್ನು ಬಳಸುತ್ತಿದ್ದರು. ಪೂರ್ವಜರು ಬೇಟೆಯ ಜೊತೆಗೆ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಪ್ರಕೃತಿಯೊಂದಿಗೆ ಹೊಂದಿಕೊಂಡು ಹಳ್ಳದ ನೀರಿನ ಮೇಲೆ ಅವಲಂಬಿತರಾಗಿದ್ದರು.ಕಾಡಿನ ಅಂಚಿನಲ್ಲಿರುವ ಬಂಡೆಗಲ್ಲುಗಳ ಮೇಲೆ ೧೦, ೦೯, ೦೮ ಜೊತೆ ಕಾಣುವ ಕಲ್ಗುಳಿಗಳು ಗಮನಾರ್ಹವಾಗಿವೆ. ರಸ್ತೆಯ ಪಕ್ಕದಲ್ಲಿರುವ ಹಾಸುಗಲ್ಲುಗಳ ಮೇಲೂ ಇಂತಹ ಗುರುತುಗಳು ಕಂಡುಬರುತ್ತವೆ.
ಕೆಲವು ಬಂಡೆಗಳ ಮೇಲೆ ಕಬ್ಬಿಣದ ಆಯುಧಗಳನ್ನು ಉಜ್ಜಿದ ಆಳವಾದ ಗುರುತುಗಳು, ಅವರ ದೈನಂದಿನ ಜೀವನದ ಕಾರ್ಯಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತವೆ. ತೃಟಿತವಾದ ರೇಖಾಚಿತ್ರಗಳು ಸಹ ಆ ಕಾಲದ ಕಲಾತ್ಮಕ ಅಭಿವ್ಯಕ್ತಿಯ ಸೂಚಕಗಳಾಗಿವೆ.
ಈ ಸಮೂಹವು ಸೂರ್ಯೋದಯವಾಗುವ ಪೂರ್ವ ದಿಕ್ಕಿಗೆ ವಿಶೇಷ ಗೌರವ ನೀಡುತ್ತಿತ್ತು. ಅದರಿಂದ ಕಲ್ಗುಳಿಗಳು ಪೂರ್ವ ದಿಕ್ಕಿನಲ್ಲಿ ಹೆಚ್ಚು ಕಾಣಿಸುತ್ತವೆ. ಮರುಜೀವದ ಮೇಲೆ ನಂಬಿಕೆ ಹೊಂದಿದ್ದ ಅವರು, ಮೃತರಿಗೆ ಗೌರವ ಸೂಚಕವಾಗಿ ಈ ರೀತಿಯ ಬೃಹತ್ ಶಿಲಾಗೋರಿ ಸಮಾಧಿಗಳನ್ನು ನಿರ್ಮಿಸುತ್ತಿದ್ದರು. ಇದು ಅವರ ಆತ್ಮೀಯತೆ ಮತ್ತು ಸಂಸ್ಕೃತಿಯ ಆಳವನ್ನು ತೋರಿಸುತ್ತದೆ.
ಇತಿಹಾಸ ಸಂಶೋಧಕ ಪ್ರೊ. ಪ್ರಮೋಧ ನಲವಾಗಲ ಈ ಬಗ್ಗೆ ವಿವರಣೆಎ ನೀಡಿದ್ದು, ಈ ತಾಣವು ಕೇವಲ ಪುರಾತತ್ವ ಸಂಪತ್ತು ಮಾತ್ರವಲ್ಲ; ಅದು ನಮ್ಮ ಪೂರ್ವಿಕರ ಬದುಕಿನ ಕನ್ನಡಿ. ಇನ್ನಷ್ಟು ವೈಜ್ಞಾನಿಕ ಅಧ್ಯಯನ ನಡೆದರೆ, ಇದೇ ಪ್ರದೇಶದಲ್ಲಿ ಇನ್ನೂ ಅನೇಕ ಪುರಾತತ್ವ ಅವಶೇಷಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ.
ಇಂತಹ ಅಪರೂಪದ ತಾಣವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅರಣ್ಯ ಪ್ರದೇಶದಲ್ಲಿರುವುದರಿಂದ ಇದು ಇಂದಿಗೂ ಭಾಗಶಃ ಸುರಕ್ಷಿತವಾಗಿದ್ದರೂ, ಮಾನವ ಹಸ್ತಕ್ಷೇಪದಿಂದ ಹಾನಿಯಾಗುವ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.ಆದ್ದರಿಂದ ಪುರಾತತ್ವ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ಸ್ಥಳವನ್ನು ಅಧಿಕೃತವಾಗಿ ಗುರುತಿಸಿ, ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ

ಹಾವೇರಿಯಲ್ಲಿ  ಶ್ರದ್ಧಾ-ಭಕ್ತಿಯಿಂದ ರಾಮನವಮಿ  ಆಚರಣೆ ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ  ಶ್ರದ್ಧಾ-ಭಕ್ತಿಯಿಂದ...

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ: ಬೆಂಬಲಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ ಆರಂಭ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ...

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ ಜೈಲು ಶಿಕ್ಷೆ ಹಾಗೂ ರೂ.೧೮ ಸಾವಿರ ದಂಡ

ಹಾವೇರಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಮಾಡಿದವರಿಗೆ ೨ ವರ್ಷ...

ಹಾವೇರಿ:ಕೃಷಿ ಹೊಂಡ ಅನ್ನದಾತರ ಜೀವನಾಡಿ: ಡಾ.ಕೆ.ಮಲ್ಲಿಕಾರ್ಜುನ

ಹಾವೇರಿ:ಕೃಷಿ ಹೊಂಡ ಅನ್ನದಾತರ ಜೀವನಾಡಿ: ಡಾ.ಕೆ.ಮಲ್ಲಿಕಾರ್ಜುನ ಹಾವೇರಿ: ಮನುಷ್ಯ ಜೀವಂತವಾಗಿ ಬದುಕುಳಿಯಲು...