ಲೋಕಸಭೆ ಚುನಾವಣೆ: ಹಾವೇರಿ ಕ್ಷೇತ್ರದಲ್ಲಿ ಅಂದಾಜು ಶೇ.೭೭.೫೭ ರಷ್ಟು ಶಾಂತಿಯುತ ಮತದಾನ
ಮತದಾನ ಗೌಪ್ಯತೆ ಉಲ್ಲಂಘನೆ- ಇಬ್ಬರ ಮೇಲೆ ಎಫ್ಐಆರ್ ದಾಖಲು
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿಂದು ಅಂದಾಜು ಶೇ.೭೭.೫೭ ರಷ್ಟು (ತಾತ್ಕಾಲಿಕ) ಶಾಂತಿಯುತ ಮತದಾನವಾಗಿದೆ. ಮತದಾನ ಗೌಪ್ಯತೆ ಉಲ್ಲಂಘಿಸಿದ ಇಬ್ಬರ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ಮಾಹಿತಿ ನೀಡಿದ್ದಾರೆ.
ಕಳೆದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಶೇ.೭೧.೫೯ ಹಾಗೂ ೨೦೧೯ರ ಚುನಾವಣೆಯಲ್ಲಿ ಶೇ.೭೪.೦೧ ಮತದಾನವಾಗಿತ್ತು. ಪ್ರಸಕ್ತ ತೀವ್ರ ಬೇಸಿಗೆಯ ಬಿಸಿಲ ತಾಪದ ನಡೆಯೂ ಶೇ. ೭೭.೫೭ ರಷ್ಟು ಮತದಾನವಾಗಿದ್ದು, ಕಳೆದ ಚುನಾವಣೆಗಿಂತ ಶೇ.೩.೫೬ ರಷ್ಟು ಮತದಾನ ಹೆಚ್ಚಳವಾಗಿದೆ. ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೯.೭೭ ರಷ್ಟು ಮತದಾನವಾಗಿದೆ. ಶೇ.೪.೨೨ ರಷ್ಟು ಹೆಚ್ಚಳವಾಗಿದೆ. ಕಳೆದ ಚುನಾವಣೆಗಿಂತ ಶೇ.೬ರಷ್ಟು ಹೆಚ್ಚಳ ಗುರಿಯೊಂದಿಗೆ ಜಿಲ್ಲಾ ಸ್ವೀಪ್ ಸಮಿತಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿತ್ತು.
ಬೆಳಿಗ್ಗೆ ೭ ರಿಂದ ೯ ಗಂಟೆ ಅವಧಿಯಲ್ಲಿ ಶೇ.೮.೬೨ , ಬೆಳಿಗ್ಗೆ ೯ ರಿಂದ ೧೧ ಗಂಟೆಗೆವರೆಗೆ ಶೇ. ೨೪.೨೪ರಷ್ಟು , ಮಧ್ಯಾಹ್ನ ೧ ಗಂಟೆಗೆವರೆಗೆ ಶೇ.೪೩.೨೬, ಮಧ್ಯಾಹ್ನ ೩ ಗಂಟೆಗೆ ಶೇ. ೫೮.೪೫ರಷ್ಟು , ಸಂಜೆ ೫ ಗಂಟೆಗೆ ವೇಳೆಗೆ ಶೇ.೭೧.೯ ರಷ್ಟು ಮತದಾನ ವಾಗಿದ್ದು, ಸತತ ಏರಿಕೆ ಕ್ರಮದಲ್ಲಿ ಮತದಾನದ ಪ್ರಗತಿ ಕಂಡುಬಂದಿತು.
ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೭೨.೦೨, ಗದಗ ಕ್ಷೇತ್ರದಲ್ಲಿ ಶೇ.೭೪.೨೫, ರೋಣ ಕ್ಷೇತ್ರದಲ್ಲಿ ಶೇ.೭೩.೧೩, ಹಾನಗಲ್ ಕ್ಷೇತ್ರದಲ್ಲಿ ಅಂದಾಜು ಶೇ.೮೨.೩೫, ಹಾವೇರಿ ಕ್ಷೇತ್ರದಲ್ಲಿ ಶೇ.೭೭.೨೪, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೮೧.೯೭, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮೨.೬೨ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೭೮.೪೮ ರಷ್ಟು ಮತದಾನವಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮೨.೬೭ ರಷ್ಟು ಹೆಚ್ಚು ಮತದಾನವಾದರೆ ಶಿರಹಟ್ಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.೭೨.೦೨ ರಷ್ಟು ಮತದಾನ ದಾಖಲಾಗಿದೆ.
ಬೆಳಿಗ್ಗೆ ೯ ಗಂಟೆ ವರೆಗೆ ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೭.೩೩, ಗದಗ ಕ್ಷೇತ್ರದಲ್ಲಿ ಶೇ.೯.೬, ರೋಣ ಕ್ಷೇತ್ರದಲ್ಲಿ ಶೇ.೬.೭೯, ಹಾನಗಲ್ ಕ್ಷೇತ್ರದಲ್ಲಿ ಶೇ.೯.೧೯, ಹಾವೇರಿ ಕ್ಷೇತ್ರದಲ್ಲಿ ಶೇ.೮.೮೬, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೯.೧೫, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೮.೫೫ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೯.೫೫ ರಷ್ಟು ಮತದಾನವಾಗಿದೆ. ಬೆಳಿಗ್ಗೆ ೧೧ ಗಂಟೆ ವರೆಗೆ ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೨೨.೦೧, ಗದಗ ಕ್ಷೇತ್ರದಲ್ಲಿ ಶೇ.೨೪.೭೩, ರೋಣ ಕ್ಷೇತ್ರದಲ್ಲಿ ಶೇ.೨೨.೦೨, ಹಾನಗಲ್ ಕ್ಷೇತ್ರದಲ್ಲಿ ಶೇ.೨೪.೭೪, ಹಾವೇರಿ ಕ್ಷೇತ್ರದಲ್ಲಿ ಶೇ.೨೪.೩೧, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೨೬.೦೬೫, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೨೪.೬೨ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೨೫.೭ ರಷ್ಟು ಮತದಾನ ವರದಿಯಾಗಿತ್ತು.
ಮಧ್ಯಾಹ್ನ ೧ ಗಂಟೆ ವರೆಗೆ ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೩೯.೯೭, ಗದಗ ಕ್ಷೇತ್ರದಲ್ಲಿ ಶೇ.೪೨.೬೪, ರೋಣ ಕ್ಷೇತ್ರದಲ್ಲಿ ಶೇ.೪೦.೦೩, ಹಾನಗಲ್ ಕ್ಷೇತ್ರದಲ್ಲಿ ಶೇ.೪೪.೮೮, ಹಾವೇರಿ ಕ್ಷೇತ್ರದಲ್ಲಿ ಶೇ.೪೨.೭೯, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೪೬.೦೬೪, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೪೫.೦೫ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೪೪.೮೧ ರಷ್ಟು ಮತದಾನ ವರದಿಯಾಗಿತ್ತು.
ಮಧ್ಯಾಹ್ನ ೩ ಗಂಟೆ ವರೆಗೆ ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೫೪.೩೧, ಗದಗ ಕ್ಷೇತ್ರದಲ್ಲಿ ಶೇ.೫೬.೨೨, ರೋಣ ಕ್ಷೇತ್ರದಲ್ಲಿ ಶೇ.೫೪.೧೮, ಹಾನಗಲ್ ಕ್ಷೇತ್ರದಲ್ಲಿ ಶೇ.೬೦.೬೮, ಹಾವೇರಿ ಕ್ಷೇತ್ರದಲ್ಲಿ ಶೇ.೫೮.೦೧, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೬೩.೧೩, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೬೨.೨೫ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೫೯.೮೮ ರಷ್ಟು ಮತದಾನ ವರದಿಯಾಗಿತ್ತು.
ಸಂಜೆ ೫ ಗಂಟೆ ವರೆಗೆ ಶಿರಹಟ್ಟಿ ಕ್ಷೇತ್ರದಲ್ಲಿ ಶೇ.೬೬.೪೫, ಗದಗ ಕ್ಷೇತ್ರದಲ್ಲಿ ಶೇ.೬೮.೦೪, ರೋಣ ಕ್ಷೇತ್ರದಲ್ಲಿ ಶೇ.೬೬.೦೯, ಹಾನಗಲ್ ಕ್ಷೇತ್ರದಲ್ಲಿ ಶೇ.೭೬.೭೩, ಹಾವೇರಿ ಕ್ಷೇತ್ರದಲ್ಲಿ ಶೇ.೭೧.೭೩, ಬ್ಯಾಡಗಿ ಕ್ಷೇತ್ರದಲ್ಲಿ ಶೇ.೭೭.೩೨, ಹಿರೇಕೆರೂರು ಕ್ಷೇತ್ರದಲ್ಲಿ ಶೇ.೭೭.೪೭ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಶೇ.೭೩.೨೩ ರಷ್ಟು ಮತದಾನವಾಗಿದೆ.
ಬೆಳಗಿನಿಂದಲೇ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿತ್ತು. ಬೆಳಿಗ್ಗೆ ೧೦ ಹೊತ್ತಿಗೆ ಮೊಟೇಬೆನ್ನೂರಿನ ಮತಗಟ್ಟೆ ಸಂಖ್ಯೆ ೯೨ರಲ್ಲಿ ೧೨೧೬ ಮತದಾರರ ಪೈಕಿ ೯೨ ಜನರು ಹಾಗೂ ಮತಗಟ್ಟೆ ೮೫ರಲ್ಲಿ ೧೨೧೬ ಜನರಿಗೆ ೯೨ ಮತ ಚಲಾಯಿಸಿದ್ದರು. ಎರಡು ಮತಗಟ್ಟೆಗಳಲ್ಲಿ ಮಹಿಳಾ ಮತ್ತು ಪುರುಷ ಮತದಾರರು ಮತ ಚಲಾವಣೆಗೆ ನೂರಾರು ಸರತಿ ಸಾಲಿನಲ್ಲಿ ಉತ್ಸಾಹದಿಂದ ನಿಂತಿರುವ ದೃಶ್ಯ ಕಂಡುಬಂದಿತು. ಸದರಿ ಮತಗಟ್ಟೆಯಲ್ಲಿ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಹಿರಿಯ ಮತದಾರರಿಗೆ, ವಿಕಚೇತನ ಮತದಾರರಿಗೆ ವ್ಹೀಲ್ ಚೇರ್ ಮೂಲಕ ಮತಗಟ್ಟೆ ಕೊಠಡಿಯೊಳಗೆ ತೆರಳು ನೆರವು ನೀಡುತ್ತಿದ್ದರೆ ಕೆಲ ಸ್ಕೌಟ್ ವಿದ್ಯಾರ್ಥಿಗಳು ಮತಗಟ್ಟೆಯ ಬಾಗಿಲಲ್ಲಿ ಮತದಾರರ ಮೊಬೈಲ್ಗಳನ್ನು ತಡೆದು ಸುರಕ್ಷಿತವಾಗಿ ಟ್ರೈನಲ್ಲಿ ಸಂಗ್ರಹಿಸಿ ಮತದಾನದ ನಂತರ ಮರಳಿ ನೀಡುತ್ತಿದ್ದರು.
ಬ್ಯಾಡಗಿ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೧೨೨ರಲ್ಲಿ ೧೩೦೪ ಮತದಾರರ ಪೈಕಿ ಬೆಳಿಗ್ಗೆ ೧೧ರ ವೇಳೆಗೆ ೨೯೩ ಜನ ಮತ ಚಲಾಯಿಸಿದ್ದರು. ಈ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು.
ಬೆಳಿಗ್ಗೆ ೧೧-೪೫ರ ವೇಳೆಗೆ ತಿಳವಳ್ಳಿ ಮತಗಟ್ಟೆ ಸಂಖ್ಯೆ ೨೩೪ರಲ್ಲಿ ೯೫೩ ಮತದಾರರ ಪೈಕಿ ೩೦೪ ಜನ ಮತ ಚಲಾಯಿಸಿದ್ದರು. ಸದರಿ ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸುವ ತಾಯಂದಿರೊಂದಿಗೆ ಬರುವ ಪುಟಾಣಿಗಳಿಗೆ ಮಕ್ಕಳ ಆರೈಕೆ ಕೇಂದ್ರ ತೆರೆದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಆಟೋಟ ಸಾಮಗ್ರಿಗಳ್ನು ನೀಡಿ ಚಟುವಟಿಕೆಯಲ್ಲಿ ತೊಡಗಿಸಿದ್ದು ವಿಶೇಷ ಗಮನ ಸೆಳೆಯಿತು.
ಮಧ್ಯಾಹ್ನ ೧ ಗಂಟೆವರೆಗೆ ಹಂಸಭಾವಿ ಸರ್ಕಾರಿ ಗಂಡು ಮಕ್ಕಳ ಶಾಲೆ ಮತಗಟ್ಟೆ ಸಂಖ್ಯೆ ೧೮ ರಲ್ಲಿ ೮೯೦ ಮತದಾರರ ಪೈಕಿ ೪೬೦ ಜನ ಮತದಾರರು ಮತ ಚಲಾಯಿಸಿದ್ದರು. ಮತಗಟ್ಟೆ ಸಂಖ್ಯೆ ೧೭, ೧೮ ಹಾಗೂ ೧೯ ರಲ್ಲಿ ಮತದಾರರ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರು ಮತದಾರರಿಗೆ ಅಗತ್ಯ ಮಾಹಿತಿ ನೀಡುತ್ತಿರುವ ದೃಶ್ಯ ಕಂಡುಬಂದಿತು.
ಮಧ್ಯಾಹ್ನ ೧ ಗಂಟೆವರೆಗೆ ಅಬಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಮತಗಟ್ಟೆ ಸಂಖ್ಯೆ ೬೨ ರಲ್ಲಿ ೬೦೮ ಮತದಾರರ ಪೈಕಿ ೩೦೧ ಜನ ಮತದಾರರು ಮತ ಚಲಾಯಿಸಿದ್ದರು. ಮಧ್ಯಾಹ್ನ ಬಿಸಿಲಿನಲ್ಲಿ ತುಸು ಮಂದಗತಿಯಲ್ಲಿ ಸಾಗಿದ ಮತದಾನ ಸಂಜೆಯಾಗುತ್ತಿದ್ದಂತೆ ತುಸು ಬಿರುಸು ಕಂಡಿತು.
ಹಾವೇರಿ ಜಿಲ್ಲೆಯ ಐದು ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧೯೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನಿಗದಿತ ಸಮಯದಲ್ಲಿ ಅಣುಕು ಮತದಾನ ನಡೆಸಲಾಯಿತು. ಬೆಳಿಗ್ಗೆ ೭ ರಿಂದ ನಿರ್ವಿಘ್ನವಾಗಿ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ಮತದಾನ ಪೂರ್ಣಗೊಂಡಿದೆ.
ಇಬ್ಬರ ಮೇಲೆ ದೂರು ದಾಖಲು: ಲಕ್ಷ್ಮೇಶ್ವರ ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ಮತಗಟ್ಟೆ ಸಂಖ್ಯೆ ೧೫೭ರಲ್ಲಿ ಬೆಳಿಗ್ಗೆ ೧೦-೩೦ ಗಂಟೆ ಸುಮಾರಿಗೆ ಮತದಾನಮಾಡಿದ ಪ್ರಕ್ರಿಯೆಯನ್ನು ವ್ಯಕ್ತಿಯೋರ್ವ ಮೊಬೈಲ್ನಲ್ಲಿ ಚಿತ್ರಿಕರಿಸಿಕೊಂಡು ವಾಟ್ಸಾಪ್ ಗ್ರೂಪ್ಗಳಲ್ಲಿ ಸೇರ್ ಮಾಡಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕಲಂ ೧೨೮,೧೩೫,೧೩೬,(ಎಫ್) ಆರ್.ಪಿ.ಯ್ಯಾಕ್ಟ್ ೧೯೫೧ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿಗ್ಗಾಂವ ತಾಲೂಕು ಹನುಮರಹಳ್ಳಿ ಮತಗಟ್ಟೆ ಸಂಖ್ಯೆ ೧೧೨ರಲ್ಲಿ ಬೆಳಿಗ್ಗೆ ೧೦-೪೫ರ ಸಮಯದಲ್ಲಿ ವಿದ್ಯಾರ್ಥಿ ಲಿಂಗರಾಜ ಸೋಮಲಿಂಗಪ್ಪ ಆಡಿನ್ ಎಂಬಾತ ಮತದಾನ ಮಾಡುವುದನ್ನು ಚಿತ್ರೀಕರಿಸಿದ ಕಾರಣ ಮತದಾನ ರಹಸ್ಯ ಕಾಪಾಡಿಕೊಳ್ಳುವುದನ್ನು ಉಲ್ಲಂಘಿಸಿದ ಕಾರಣ ಪ್ರಕರಣ ದಾಖಲಿಸಲಾಗಿದೆ.

Date: