
ವಿಶ್ವ ಮಹಿಳಾ ದಿನದ ಬೆನ್ನಲ್ಲೇ ಮಾರ್ಚ್ 9ರಿಂದ ಸಂಜೆ 6ಕ್ಕೆ ತಾಯಿ- ಮಗಳ ಭಾವುಕ ಪಯಣದ ʻರಾಣಿʼ ಶುಭಾರಂಭ
ಪ್ರತಿ ಮನೆಯನ್ನೂ ಅರಮನೆಯಂತೆ ಬೆಳಗುವ, ಕಿರೀಟವಿಲ್ಲದೆಯೇ ಸಂಸಾರವನ್ನು ಪ್ರೀತಿಯಿಂದ ಆಳುವ ರಾಣಿಯರಿಗೆ ಕಲರ್ಸ್ ಕನ್ನಡ ವಾಹಿನಿ ಈ ಬಾರಿ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ. ನವನವೀನ ಧಾರಾವಾಹಿಗಳು ಮತ್ತು ಅರ್ಥಪೂರ್ಣ ಅಭಿಯಾನಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಕಲರ್ಸ್ ಕನ್ನಡ, ಸದಾ ಸಮಾಜದ ನಾಡಿಮಿಡಿತಕ್ಕೆ ಹತ್ತಿರವಾದ ಕತೆಗಳನ್ನೇ ನೀಡುತ್ತಾ ಬಂದಿದೆ. ಈ ಬಾರಿಯ ವಿಶ್ವ ಮಹಿಳಾ ದಿನವನ್ನು ‘ಪ್ರತಿ ಮಹಿಳೆಯೂ ರಾಣಿಯೇ’ ಎಂಬ ಪರಿಕಲ್ಪನೆಯಡಿ ಆಚರಿಸುತ್ತಿರುವ ವಾಹಿನಿಯು, ತನ್ನ ಜನಪ್ರಿಯ ಪಾತ್ರಗಳ ಮೂಲಕವೇ ಈ ಸಂದೇಶವನ್ನು ಸಾರುತ್ತಿದೆ.
ಇದು ಕೇವಲ ಒಂದು ಕಥೆಯಲ್ಲ, ಕರುನಾಡಿನ ಮನೆಮನೆಯಲ್ಲಿರುವ ನೈಜ ರಾಣಿಯರಿಗೆ, ಅಂದರೆ ಸಂಸಾರವನ್ನು ಪ್ರೀತಿ ಮತ್ತು ತ್ಯಾಗದಿಂದ ಮುನ್ನಡೆಸುವ ಪ್ರತಿಯೊಬ್ಬ ಮಹಿಳೆಗೂ ವಾಹಿನಿ ಅರ್ಪಿಸುತ್ತಿರುವ ವಿಶೇಷ ‘ಟ್ರಿಬ್ಯೂಟ್’.
ಭಾಗ್ಯಾಳ ಸ್ವಾಭಿಮಾನ, ಭಾರ್ಗವಿಯ ನ್ಯಾಯ, ಪವಿತ್ರಾಳ ಧೈರ್ಯ, ವಿದ್ಯಾಳ ಮುಗ್ಧತೆ ಹಾಗೂ ಚಂದನಾಳ ಸಹನೆ, ಪ್ರೇಮಕ್ಕೆ, ಬಾಂಧವ್ಯಕ್ಕೆ ಪ್ರೇಮಾ ಕಾವ್ಯಾ, ಆತ್ಮವಿಶ್ವಾಸಕ್ಕೆ ಝಾನ್ಸಿಯೇ ರಾಣಿ, ನಲುಮೆಗೆ ನಗುವಿಗೆ ನಂದಗೋಕುಲದ ಮೀನಾ ಗಿರಿಜಾ, ಅಮೂಲ್ಯಾ, ಪ್ರಿಯಾ ಇವರೇ ರಾಣಿಯರು. ಈ ಎಲ್ಲಾ ಗುಣಗಳ ಸಂಗಮವೇ ಪ್ರತಿ ಮನೆಯಲ್ಲಿರುವ ಮಹಿಳೆ. ಅಂತಹ ಮಹಿಳಾ ಶಕ್ತಿಯನ್ನು ಸಂಭ್ರಮಿಸಲು ‘ರಾಣಿ’ ಧಾರಾವಾಹಿಯ ಲಾಂಚ್ ಒಂದು ಅದ್ಧೂರಿ ವೇದಿಕೆಯಾಗಲಿದೆ.
ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬದ ಅರಮನೆಯನ್ನು ಪ್ರೀತಿ- ಮಮತೆಯಿಂದ ಕಾಪಾಡುವ ʻರಾಣಿʼ ಎಂಬ ಉದಾತ್ತ ಚಿಂತನೆಯೇ ಈ ಇಡೀ ಅಭಿಯಾನದ ಹೈಲೈಟ್. ಮಹಿಳೆಯರ ತ್ಯಾಗ, ಶ್ರಮ ಮತ್ತು ಪ್ರೀತಿಯನ್ನು ಗೌರವಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ, ‘ರಾಣಿ’ ಕೇವಲ ಒಂದು ಮನರಂಜನೆಯ ಚೌಕಟ್ಟನ್ನು ಮೀರಿ, ಪ್ರತಿಯೊಬ್ಬ ತಾಯಿ ಮತ್ತು ಮಗಳ ಭಾವನಾತ್ಮಕ ಸತ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಲಿದೆ. ಹಗೆತನ ಅಥವಾ ಸೇಡಿನ ಬದಲು ಪ್ರೀತಿಯೇ ಜೈಲಿನ ಕಂಬಿಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ಸಾರುವ ಈ ಕತೆ, ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮದ ಬೆನ್ನಲ್ಲೇ, ಅಂದರೆ ಮಾರ್ಚ್ 9ರಂದು ಸಂಜೆ 6 ಗಂಟೆಗೆ ‘ರಾಣಿ’ ಧಾರಾವಾಹಿಯು ಅದ್ದೂರಿಯಾಗಿ ತನ್ನ ಪ್ರಸಾರವನ್ನು ಆರಂಭಿಸಲಿದೆ. ಕರುನಾಡಿನ ಮನೆಮನೆಯ ರಾಣಿಯರಿಗೆ ವಿಶ್ವ ಮಹಿಳಾ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಈ ಭಾವುಕ ಪಯಣಕ್ಕೆ ಸಾಕ್ಷಿಯಾಗಲು ಸಿದ್ಧರಾಗಿ.

